ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಸಂಸದರಿಗೆ ವೇತನ ಮತ್ತಷ್ಟು ಹೆಚ್ಚಳ; ಬಗ್ಗಿದ ಸರಕಾರ (MPs' salary hike | Sharad Yadav | Lok Sabha | Pranab Mukherjee)
Bookmark and Share Feedback Print
 
ಸಂಸದರ ವೇತನವನ್ನು ಶೇ.300ರಷ್ಟು ಹೆಚ್ಚಳಗೊಳಿಸಲು ನಿರ್ಧರಿಸಿದ ಕ್ರಮವನ್ನು ಪ್ರತಿಭಟಿಸಿ, ಇನ್ನಷ್ಟು ಹೆಚ್ಚಳಗೊಳಿಸಬೇಕೆಂಬ ಬೇಡಿಕೆಯನ್ನು ಪರಿಶೀಲಿಸುವುದಾಗಿ ಕಾಂಗ್ರೆಸ್ ನೇತೃತ್ವ ಯುಪಿಎ ಸರಕಾರ ಭರವಸೆ ನೀಡಿದೆ.

ರಾಷ್ಟ್ರೀಯ ಜನತಾದಳ ವರಿಷ್ಠ ಲಾಲೂ ಪ್ರಸಾದ್ ಯಾದವ್, ಸಮಾಜವಾದಿ ಪಕ್ಷದ ಮುಖಂಡ ಮುಲಾಯಂ ಸಿಂಗ್ ಯಾದವ್, ರಾಜ್ಯಸಭೆಯ ಪ್ರತಿಪಕ್ಷದ ನಾಯಕ (ಬಿಜೆಪಿ) ಅರುಣ್ ಜೇಟ್ಲಿ, ಬಿಜೆಪಿ ಉಪ ನಾಯಕ ಗೋಪಿನಾಥ್ ಮುಂಡೆ ಮತ್ತು ಬಿಎಸ್‌ಪಿಯ ದಾರಾ ಸಿಂಗ್ ಚೌಹಾನ್ ಅವರು ಇಂದು ಲೋಕಸಭೆಯ ನಾಯಕ ಪ್ರಣಬ್ ಮುಖರ್ಜಿಯವರನ್ನು ಭೇಟಿ ಮಾಡಿದ ಸಂದರ್ಭದಲ್ಲಿ ಈ ಭರವಸೆ ನೀಡಲಾಗಿದೆ ಎಂದು ಎನ್‌ಡಿಎ ಸಂಚಾಲಕ ಶರದ್ ಯಾದವ್ ಲೋಕಸಭೆಗೆ ಸದನಕ್ಕೆ ತಿಳಿಸಿದ್ದಾರೆ.

ಇದನ್ನೂ ಓದಿ: ಸಂಸದರಿಗೆ ಲಕ್ಷ್ಮೀ ಬಂಪರ್ 'ವರ': ಸಂಬಳ ಶೇ. 300 ಏರಿಕೆ!

ಸರಕಾರವು ಸಂಸದರ ವೇತನವನ್ನು ಶೇ.300ರಷ್ಟು ಹೆಚ್ಚಳಗೊಳಿಸಲು ನಿರ್ಧರಿಸಿತ್ತು. ಆದರೆ ಇದು ಕಡಿಮೆಯಾಯಿತು ಎಂದು ನಿನ್ನೆ ಇಡೀ ದಿನ ಕಲಾಪಕ್ಕೆ ಪ್ರತಿಪಕ್ಷಗಳು ಅವಕಾಶ ನೀಡಿರಲಿಲ್ಲ. ಈ ಸಂಬಂಧ ಮಾತುಕತೆ ನಡೆಸಿದ ನಂತರ ಸರಕಾರವು ವೇತನವನ್ನು ಮತ್ತಷ್ಟು ಹೆಚ್ಚಳಗೊಳಿಸುವ ಕುರಿತು ಪರಿಶೀಲನೆ ನಡೆಸುವ ಭರವಸೆ ನೀಡಿದೆ.

ಸಂಸದರ ವೇತನ ಹೆಚ್ಚಳ ಕುರಿತ ವಿವಾದವು ಪರಿಹಾರಗೊಂಡಿದೆ. ಹಾಗಾಗಿ ಸದನವು ನಿಯಮದಂತೆ ಯಥಾ ರೀತಿಯಲ್ಲಿ ಮುಂದುವರಿಯಲಿದೆ ಎಂದು ಶರದ್ ಯಾದವ್ ತಿಳಿಸಿದ್ದಾರೆ.

ಸಂಸದರ ವೇತನವನ್ನು 16,000 ರೂಪಾಯಿಗಳಇಂದ 50,000 ರೂಪಾಯಿಗಳಿಗೆ ಏರಿಕೆಗೊಳಿಸುವ ನಿರ್ಧಾರಕ್ಕೆ ಸಚಿವ ಸಂಪುಟವು ಬಂದಿತ್ತು. ಆದರೆ ಇದು ಸಾಲದು ಎಂದು ಬಿಜೆಪಿಯೇತರ ಪ್ರತಿಪಕ್ಷಗಳ ಸದಸ್ಯರು ಲೋಕಸಭೆಯಲ್ಲಿ ಗದ್ದಲ ಎಬ್ಬಿಸಿದ್ದರು. ನಮ್ಮ ವೇತನವನ್ನು ಸಂಸದೀಯ ಸಮಿತಿ ಮಾಡಿರುವ ಶಿಫಾರಸಿನಂತೆ 80,001 ರೂಪಾಯಿಗಳಿಗೆ ಹೆಚ್ಚಳಗೊಳಿಸಬೇಕು ಎಂದು ಸಂಸದರು ಒತ್ತಾಯಿಸಿದ್ದರು.

ಅಧಿವೇಶನ ಸಂದರ್ಭದಲ್ಲಿನ ದಿನ ಭತ್ಯೆಯನ್ನು 1,000ದಿಂದ 2,000 ರೂಪಾಯಿಗಳಿಗೆ, ತಿಂಗಳ ಕ್ಷೇತ್ರ ಭತ್ಯೆಯನ್ನು 20,000ದಿಂದ 40,000ಕ್ಕೆ ಸರಕಾರ ಏರಿಕೆ ಮಾಡಿತ್ತು.
ಸಂಬಂಧಿತ ಮಾಹಿತಿ ಹುಡುಕಿ