ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ತರೂರ್-ಪುಷ್ಕರ್ ಹನಿಮೂನ್‌ಗೆ ತಾಂತ್ರಿಕ ದೋಷ ಅಡ್ಡಿ (honeymoon trip | Shashi Tharoor | Sunanda Pushkar | India)
Bookmark and Share Feedback Print
 
ಓಣಂ ಸಂಭ್ರಮದಲ್ಲೇ ಉದ್ಯಮಿ ಹಾಗೂ ಬಹುಕಾಲದ ಗೆಳತಿ ಸುನಂದಾ ಪುಷ್ಕರ್ ಅವರನ್ನು ಮದುವೆಯಾಗಿದ್ದ ಕಾಂಗ್ರೆಸ್ ಸಂಸದ ಶಶಿ ತರೂರ್ ಅವರ ಮಧುಚಂದ್ರ ಯಾನದ ಆರಂಭದಲ್ಲಿ ತಾಂತ್ರಿಕ ಅಡಚಣೆಗಳು ಕಾಣಿಸಿಕೊಂಡಿವೆ. ದುಬೈ ಮತ್ತು ಸ್ಪೇನ್‌ಗೆಂದು ತೆರಳಲು ಅನುವಾಗುತ್ತಿದ್ದಂತೆ ಅವರು ಹೊರಟಿದ್ದ ವಿಮಾನವು ಕೆಲವೇ ಹೊತ್ತಿನಲ್ಲಿ ವಾಪಸ್ಸಾಗಿದೆ.

ಇದನ್ನೂ ಓದಿ: ವಿವಾಹ ಬಂಧನಕ್ಕೆ ಕಾಂಗ್ರೆಸ್ ಸಂಸದ ತರೂರ್

ದಂಪತಿ ತಿರುವನಂತಪುರದಿಂದ ಮಂಗಳವಾರ ಮುಂಜಾನೆ ಐದು ಗಂಟೆಗೆ 'ಎಮಿರೇಟ್ಸ್' ವಾಯುಯಾನ ಸಂಸ್ಥೆಯ ವಿಮಾನದಲ್ಲಿ ದುಬೈಗೆ ಹೊರಟಿದ್ದರು. ಮೂಲ ನಿಗದಿಯ ಪ್ರಕಾರ ವಿಮಾನ 4.35ಕ್ಕೆ ಹೊರಡಬೇಕಿತ್ತು. ಆದರೆ 25 ನಿಮಿಷಗಳಷ್ಟು ತಡವಾಗಿ ಪ್ರಯಾಣ ಆರಂಭಿಸಿತ್ತು.
PTI

ತಡವಾಗಿಯಾದರೂ ಪ್ರಯಾಣ ಬೆಳೆಸಿದ್ದ ವಿಮಾನ ದುಬೈ ತಲುಪುವ ಬದಲು, ಇಪ್ಪತ್ತೈದೇ ನಿಮಿಷದಲ್ಲಿ ಮತ್ತೆ ವಿಮಾನ ನಿಲ್ದಾಣಕ್ಕೆ ವಾಪಸ್ ಬಂದಿದೆ. ವಿಮಾನದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದ್ದರಿಂದ ಈ ನಿರ್ಧಾರಕ್ಕೆ ಬರಲಾಗಿದೆ. ಮಂಗಳವಾರ ಅಪರಾಹ್ನ ಈ ವಿಮಾನ ಮತ್ತೆ ಹಾರಾಟ ನಡೆಸಲಿದೆ ಎಂದು ವರದಿಗಳು ಹೇಳಿವೆ.

ದುಬೈಗೆ ಹೊರಟಿದ್ದ ತರೂರ್-ಸುನಂದಾ ಅಲ್ಲಿ ಗೆಳೆಯರಿಗಾಗಿ ಏರ್ಪಡಿಸಲಾಗಿರುವ ಆರತಕ್ಷತೆ ಕಾರ್ಯಕ್ರಮವನ್ನು ಮುಗಿಸಿ, ಸ್ಪೇನ್‌ಗೆ ಮಧುಚಂದ್ರಕ್ಕೆಂದು ತೆರಳಬೇಕಿದೆ.

ತಿರುವನಂತಪುರದ ಕಾಂಗ್ರೆಸ್ ಸಂಸದ ಹಾಗೂ ಮಾಜಿ ಕೇಂದ್ರ ಸಚಿವ ಕೇರಳದ ಪಾಲಕ್ಕಾಡ್‌ನಲ್ಲಿನ ತನ್ನ ಪೂರ್ವಿಕರ ಮನೆಯಲ್ಲಿ ಹಿಂದೂ ಸಂಪ್ರದಾಯದಂತೆ ಸುನಂದಾ ಅವರನ್ನು ವಿವಾಹವಾಗಿದ್ದರು.

54ರ ಹರೆಯದ ತರೂರ್ ಮತ್ತು ದುಬೈ ಮೂಲದ ಕಾಶ್ಮೀರಿ ಸುನಂದಾ ಇಬ್ಬರಿಗೂ ಇದು ಮೂರನೇ ಮದುವೆಯಾಗಿತ್ತು.
ಸಂಬಂಧಿತ ಮಾಹಿತಿ ಹುಡುಕಿ