ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಅಲ್ಪಸಂಖ್ಯಾತರ ಓಟಿಗಾಗಿ ಕಾಂಗ್ರೆಸ್ ಸರ್ಕಸ್: ಗಡ್ಕರಿ (Saffron terrorism | P Chidambaram | BJP | Nitin Gadkari)
Bookmark and Share Feedback Print
 
'ಕೇಸರಿ ಭಯೋತ್ಪಾದನೆ' ಕುರಿತು ಹೇಳಿಕೆ ನೀಡಿರುವ ಕೇಂದ್ರ ಗೃಹಸಚಿವ ಪಿ. ಚಿದಂಬರಂ ಅವರ ವಿರುದ್ಧ ಪ್ರತಿದಾಳಿ ನಡೆಸಿರುವ ಬಿಜೆಪಿ ಅಧ್ಯಕ್ಷ ನಿತಿನ್ ಗಡ್ಕರಿ, ಅಲ್ಪಸಂಖ್ಯಾತರ ಓಲೈಕೆ ಮಾಡುತ್ತಾ ಕಾಂಗ್ರೆಸ್ ಚಿಲ್ಲರೆ ಮತಬ್ಯಾಂಕ್ ರಾಜಕಾರಣ ಮಾಡುತ್ತಿದೆ ಎಂದಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿದ್ದ ಅವರು, ಕೇಸರಿ ಭಯೋತ್ಪಾದನೆಯಂತಹ ವಿಚಾರಗಳು ನಮ್ಮಲ್ಲಿ ಇವೆ ಎಂಬುದನ್ನು ನಾನು ನಂಬುವುದಿಲ್ಲ. ತನ್ನ ಓಟ್ ಬ್ಯಾಂಕ್ ರಾಜಕಾರಣಕ್ಕಾಗಿ ಮಾತ್ರ ಕಾಂಗ್ರೆಸ್ ಈ ಕುರಿತು ಮಾತನಾಡುತ್ತಿದೆ. ಈ ಹಿಂದೆ ಎಲ್ಲಾ ಧರ್ಮೀಯರನ್ನೂ ಗೌರವಿಸುವ ನಿಟ್ಟಿನಲ್ಲಿ ಜಾತ್ಯತೀತತೆಯನ್ನು ಬಳಸಲಾಗಿತ್ತು. ಈಗ ಕೇವಲ ಅಲ್ಪಸಂಖ್ಯಾತರನ್ನು ಮಾತ್ರ ಓಲೈಸುವ ನಿಟ್ಟಿನಲ್ಲಿ ಕಾಂಗ್ರೆಸ್ ತೊಡಗಿದೆ ಎಂದರು.

ಇದನ್ನೂ ಓದಿ: ಕೇಸರಿ ಭಯೋತ್ಪಾದನೆ ಆರೋಪ ಕೀಳು ರಾಜಕೀಯ

ಭಯೋತ್ಪಾದಕರೆಂದರೆ ಭಯೋತ್ಪಾದಕರು, ಇಲ್ಲಿ ಧರ್ಮದ ಹಂಗಿರುವುದಿಲ್ಲ ಮತ್ತು ಈ ಆಧಾರದಲ್ಲಿ ಅವರನ್ನು ಗುರುತಿಸುವುದು ಸಮರ್ಥನೀಯವಲ್ಲ ಎಂದು ಗಡ್ಕರಿ ಪಕ್ಷದ ನಿಲುವನ್ನು ಸ್ಪಷ್ಟಪಡಿಸಿದರು.

ಅದೇ ಹೊತ್ತಿಗೆ ಯುಪಿಎ ಸರಕಾರವು ಭಯೋತ್ಪಾದಕರ ಜತೆ ಮೃದು ನೀತಿಯನ್ನು ಅನುಸರಿಸುತ್ತಿದೆ ಎಂದು ಅವರು ವಾಗ್ದಾಳಿ ನಡೆಸಿದ್ದಾರೆ.

ಕಾಂಗ್ರೆಸ್ ನೇತೃತ್ವದ ಕೇಂದ್ರ ಸರಕಾರವು ಭಯೋತ್ಪಾದಕರ ವಿರುದ್ಧ ಪ್ರಾಮಾಣಿಕ ಮತ್ತು ತೀವ್ರ ಕ್ರಮಗಳನ್ನು ತೆಗೆದುಕೊಳ್ಳಬೇಕೆನ್ನುವುದು ಎಲ್ಲರ ನಿರೀಕ್ಷೆ. ಆದರೆ ಸರಕಾರ ಹಾಗೆ ಮಾಡುತ್ತಿಲ್ಲ ಎಂದರು.

ದೇಶದಲ್ಲಿ ನಡೆದಿರುವ ಹಲವಾರು ಬಾಂಬ್ ಸ್ಫೋಟ ಪ್ರಕರಣಗಳಲ್ಲಿ ಕೇಸರಿ ಭಯೋತ್ಪಾದನೆಯ ಕೈವಾಡವಿರುವುದು ಕಂಡು ಬಂದಿದೆ. ಇದನ್ನು ಮಟ್ಟ ಹಾಕಲು ಕೇಂದ್ರ ಮತ್ತು ರಾಜ್ಯ ಸರಕಾರಗಳು ಒಟ್ಟಾಗಿ ಕೆಲಸ ಮಾಡಬೇಕು ಎಂದು ಡಿಜಿಪಿ-ಐಜಿಪಿಗಳ ಸಮಾವೇಶದಲ್ಲಿ ಮಾತನಾಡುತ್ತಿದ್ದ ಚಿದಂಬರಂ ಹೇಳಿದ್ದರು.

ನಕ್ಸಲ್ ಸಮಸ್ಯೆಯನ್ನು ಮಟ್ಟ ಹಾಕಲು ವಿಫಲವಾಗಿರುವ ಕುರಿತೂ ಕೇಂದ್ರದ ವಿರುದ್ಧ ಗಡ್ಕರಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ದೇಶದ 230 ಜಿಲ್ಲೆಗಳಲ್ಲಿ ವ್ಯಾಪಕವಾಗಿರುವ ಕೆಂಪು ಉಗ್ರರ ಹಿಂಸಾಚಾರವನ್ನು ಸರಕಾರ ಗಂಭೀರವಾಗಿ ಪರಿಗಣಿಸಬೇಕು ಎಂದು ಒತ್ತಾಯಿಸಿರುವ ಅವರು, ನಕ್ಸಲಿಸಂ ಈಗ ದೇಶದ ಪಶುಪತಿನಾಥದಿಂದ ಕನ್ಯಾಕುಮಾರಿಯವರೆಗೂ ವಿಸ್ತರಿಸಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಸಂಬಂಧಿತ ಮಾಹಿತಿ ಹುಡುಕಿ