ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » 'ಉಚಿತ' ಸಲಹೆಯಲ್ಲ, ಆದೇಶ; ಕೇಂದ್ರಕ್ಕೆ ಸುಪ್ರೀಂ ತರಾಟೆ (Supreme Court | Sharad Pawar | rotting foodgrain | UPA govt)
Bookmark and Share Feedback Print
 
ಗೋದಾಮುಗಳಲ್ಲಿ ವ್ಯರ್ಥವಾಗಿ ಕೊಳೆತು ಹೋಗುತ್ತಿರುವ ಆಹಾರ ಪದಾರ್ಥಗಳನ್ನು ಬಡವರಿಗೆ ಉಚಿತವಾಗಿ ಹಂಚಬೇಕು ಎಂಬುದರ ಕುರಿತು ಕೇಂದ್ರ ಕೃಷಿ ಮತ್ತು ಆಹಾರ ಸಚಿವ ಶರದ್ ಪವಾರ್ ನೀಡಿರುವ ಹೇಳಿಕೆಯನ್ನು ಸುಪ್ರೀಂ ಕೋರ್ಟ್ ಮಂಗಳವಾರ ತರಾಟೆಗೆ ತೆಗೆದುಕೊಂಡಿದೆ.

ಪವಾರ್ ಅವರನ್ನು ಹೆಸರಿಸದೆ ತನ್ನ ಹೇಳಿಕೆಯನ್ನು ಸ್ಪಷ್ಟಪಡಿಸಿದ ಸುಪ್ರೀಂ, ಕೊಳೆತು ಹೋಗುತ್ತಿರುವ ಆಹಾರ ಪದಾರ್ಥಗಳನ್ನು ಬಡವರಿಗೆ ಮತ್ತು ಅಗತ್ಯವಿರುವವರಿಗೆ ಉಚಿತವಾಗಿ ಹಂಚಬೇಕೆಂಬುದು ಕೃಷಿ ಸಚಿವಾಲಯದ 'ಕೆಲವು ಅಧಿಕಾರಿಗಳು' ಹೇಳಿರುವಂತೆ ಕೇವಲ 'ಸಲಹೆ'ಯಲ್ಲ; ಇದು 'ಆದೇಶ' ಎಂದಿತು.

ಇದನ್ನೂ ಓದಿ: ಆಹಾರ ಕೊಳೆಸಬೇಡಿ, ಬಡವರಿಗೆ ಹಂಚಿ: ಕೇಂದ್ರಕ್ಕೆ ಸುಪ್ರೀಂ

ಆಹಾರ ವಸ್ತುಗಳನ್ನು ಗೋದಾಮುಗಳಲ್ಲಿ ಹಾಳು ಮಾಡಲು ಅವಕಾಶ ನೀಡುವ ಬದಲು ಹೊತ್ತಿನ ತುತ್ತಿಗೆ ತತ್ವಾರ ಅನುಭವಿಸುತ್ತಿರುವ ಬಡವರಿಗೆ ಉಚಿತವಾಗಿ ಹಂಚುವ ಕುರಿತು ಕೇಂದ್ರ ಸರಕಾರವು ಯೋಚಿಸಬೇಕು ಎಂದು ಆಗಸ್ಟ್ 13ರಂದು ಅಪೆಕ್ಸ್ ಕೋರ್ಟ್ ಹೇಳಿತ್ತು.

ಇದಕ್ಕೆ ಪ್ರತಿಕ್ರಿಯಿಸಿದ್ದ ಸಚಿವ ಪವಾರ್, ಸುಪ್ರೀಂ ಕೋರ್ಟ್ ಆದೇಶವನ್ನು ಜಾರಿಗೆ ತರುವುದು ಸಾಧ್ಯವಿಲ್ಲ ಎಂದಿದ್ದರು.

ಅಲ್ಲದೆ ಸುಪ್ರೀಂ ಕೋರ್ಟ್ ನೀಡಿರುವುದು ಸಲಹೆ ಮಾತ್ರ, ಅದು ಕೇಂದ್ರ ಸರಕಾರಕ್ಕೆ ನೀಡಿರುವ ಆದೇಶವಲ್ಲ ಎಂದು ತಿಪ್ಪೆ ಸಾರಿಸುವ ಯತ್ನ ಆಹಾರ ಸಚಿವರಿಂದ ಬಂದಿತ್ತು.

ಇದನ್ನು ಸ್ಪಷ್ಟಪಡಿಸಿರುವ ಸರ್ವೋಚ್ಛ ನ್ಯಾಯಾಲಯವು, ತಾನು ನೀಡಿರುವುದು ಕೇವಲ ಸಲಹೆಯಲ್ಲ; ಅದು ಆದೇಶ. ಇದರ ಕುರಿತು ಕೃಷಿ ಸಚಿವಾಲಯಕ್ಕೆ ಸೂಕ್ತ ಮಾಹಿತಿ ನೀಡುವಂತೆ ಹೆಚ್ಚುವರಿ ಸಾಲಿಸಿಟರ್ ಜನರಲ್ ಅವರಿಗೆ ಸೂಚಿಸಿತು.

ಅಲ್ಲದೆ ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳನ್ನು ಗುರುತಿಸಲು ನೂತನ ಸಮೀಕ್ಷೆಯನ್ನು ಕೈಗೊಳ್ಳುವಂತೆ ಕೇಂದ್ರ ಸರಕಾರಕ್ಕೆ ಸುಪ್ರೀಂ ನಿರ್ದೇಶನ ನೀಡಿದೆ.
ಸಂಬಂಧಿತ ಮಾಹಿತಿ ಹುಡುಕಿ