ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಅಕ್ಷರಧಾಮ ದೇಗುಲ ದಾಳಿ; ಉಗ್ರರ ಗಲ್ಲು ಶಿಕ್ಷೆಗೆ ತಡೆಯಾಜ್ಞೆ (Supreme Court | Akshardham temple | Gujarat | Muslim terrorists)
Bookmark and Share Feedback Print
 
ಗುಜರಾತ್‌ನ ಅಕ್ಷರಧಾಮ ದೇಗುಲದ ಮೇಲೆ ಭಯೋತ್ಪಾದನಾ ದಾಳಿ ನಡೆಸಿದ್ದಕ್ಕಾಗಿ ಮರಣ ದಂಡನೆ ಶಿಕ್ಷೆ ತೀರ್ಪು ಪಡೆದುಕೊಂಡಿದ್ದ ಮೂವರು ವ್ಯಕ್ತಿಗಳಿಗೆ ಸರ್ವೋಚ್ಚ ನ್ಯಾಯಾಲಯವು ನಿಟ್ಟುಸಿರು ಬಿಡುವಂತೆ ಮಾಡಿದೆ. ಹೈಕೋರ್ಟ್ ತೀರ್ಪಿಗೆ ತಡೆಯಾಜ್ಞೆ ನೀಡಿರುವ ಸುಪ್ರೀಂ, ಗುಜರಾತ್ ಸರಕಾರಕ್ಕೆ ನೊಟೀಸ್ ಜಾರಿಗೊಳಿಸಿದೆ.

ಇದನ್ನೂ ಓದಿ: ಅಕ್ಷರಧಾಮ ದಾಳಿ: ಮೂವರ ಗಲ್ಲು ಎತ್ತಿಹಿಡಿದ ಹೈಕೋರ್ಟ್

ನ್ಯಾಯಮೂರ್ತಿ ಬಿ. ಸುದರ್ಶನ ರೆಡ್ಡಿ ಮತ್ತು ಎಸ್. ನಿಜ್ಜಾರ್ ಅವರನ್ನೊಳಗೊಂಡ ಸುಪ್ರೀಂ ಪೀಠವು ಗಲ್ಲು ಶಿಕ್ಷೆಗೆ ತಡೆಯಾಜ್ಞೆ ನೀಡಿದೆ.

ಇದೇ ವರ್ಷದ ಜೂನ್ ತಿಂಗಳಲ್ಲಿ ಮೂವರು ವ್ಯಕ್ತಿಗಳಿಗೆ ಗುಜರಾತ್ ಹೈಕೋರ್ಟ್ ಮರಣ ದಂಡನೆ ಶಿಕ್ಷೆಯನ್ನು ಪ್ರಕಟಿಸಿತ್ತು. ಆದರೆ ಇದರ ವಿರುದ್ಧ ಸುಪ್ರೀಂ ಕೋರ್ಟಿಗೆ ಹೋಗಿದ್ದ ದೋಷಿಗಳು, ಪ್ರಕರಣವನ್ನು ಮರು ತನಿಖೆ ನಡೆಸಬೇಕು ಮತ್ತು ಸಿಬಿಐಗೆ ಒಪ್ಪಿಸಬೇಕು ಎಂದು ಮನವಿ ಮಾಡಿಕೊಂಡಿದ್ದರು.
PTI

ಅದಂ ಅಜ್‌ಮೆರಿ, ಶಾನ್ ಮಿಯಾ ಆಲಿಯಾಸ್ ಚಾಂದ್ ಖಾನ್ ಹಾಗೂ ಮುಫ್ತಿ ಅಬ್ದುಲ್ ಖ್ವಾಯ್ಯುಮ್ ಮನ್ಸೂರಿಗೆ ಮರಣದಂಡನೆ ವಿಧಿಸಲಾಗಿತ್ತು. ಇದಕ್ಕೆ ತಡೆಯಾಜ್ಞೆ ನೀಡುವುದರ ಜತೆಗೆ ಜೀವಾವಧಿ ಶಿಕ್ಷೆ ತೀರ್ಪು ಪಡೆದುಕೊಂಡಿದ್ದ ಮೊಹಮ್ಮದ್ ಸಲೀಂ ಶೇಖ್‌ ಮತ್ತು ಅಬ್ದುಲ್‌ಮಿಯಾನ್ ಖಾದ್ರಿಯ 10 ವರ್ಷಗಳ ಕಾರಾಗೃಹ ಶಿಕ್ಷೆಗೂ ಸುಪ್ರೀಂ ತಡೆ ಆದೇಶ ಹೊರಡಿಸಿದೆ.

ಶಂಕಿತ ಭಯೋತ್ಪಾದಕ ಸೊಹ್ರಾಬುದ್ದೀನ್ ಶೇಖ್ ಎನ್‌ಕೌಂಟರ್ ಪ್ರಕರಣದಲ್ಲಿ ಪ್ರಸಕ್ತ ವಿಚಾರಣೆ ಎದುರಿಸುತ್ತಿರುವ ಆಗಿನ ಪೊಲೀಸ್ ವರಿಷ್ಠಾಧಿಕಾರಿ ಡಿ.ಜಿ. ವಂಜಾರಾ ಅವರು ಈ ಪ್ರಕರಣದ ತನಿಖೆ ನಡೆಸಿತ್ತು.

ಈ ಕುರಿತು ಅಸಮಾಧಾನ ವ್ಯಕ್ತಪಡಿಸಿರುವ ದಾಳಿಕೋರರು, ಗುಜರಾತ್ ಸರಕಾರವು ಸಂಪೂರ್ಣವಾಗಿ ಏಕಪಕ್ಷೀಯವಾಗಿ ತನಿಖೆ ನಡೆಸಿತ್ತು. ವಿಚಾರಣೆ ಸಂದರ್ಭದಲ್ಲಿ ನಮಗೆ ಅನ್ಯಾಯ ಎಸಗಲಾಗಿತ್ತು ಎಂದು ಆರೋಪಿಸಿ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದರು.

ಆಪಾದಿತರ ಮನವಿಯನ್ನು ಸ್ವೀಕರಿಸಿ ಶಿಕ್ಷೆಗಳಿಗೆ ತಡೆಯಾಜ್ಞೆ ನೀಡಿರುವ ನ್ಯಾಯಾಲಯವು, ಮರಣ ದಂಡನೆ ರದ್ದುಗೊಳಿಸಬೇಕೆಂಬ ಆಪಾದಿತರ ಮನವಿಗೆ ಉತ್ತರಿಸುವಂತೆ ಆದೇಶ ನೀಡಿದೆ.

2002ರ ಸೆಪ್ಟೆಂಬರ್ 25ರಂದು ಅಕ್ಷರಧಾಮ ದೇಗುಲಕ್ಕೆ ಭಯೋತ್ಪಾದಕರು ದಾಳಿ ಮಾಡಿದ್ದರು. ಘಟನೆಯಲ್ಲಿ 28 ಭಕ್ತರು ಸೇರಿದಂತೆ ಒಟ್ಟು 32 ಮಂದಿ ಬಲಿಯಾಗಿದ್ದರು. 80ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು.

ದೇಗುಲದ ಮೇಲೆ ಸಂಜೆ ಹೊತ್ತು ಇದ್ದಕ್ಕಿದ್ದಂತೆ ದಾಳಿ ಮಾಡಿದ್ದ ಇಬ್ಬರು ಭಯೋತ್ಪಾದಕರು ಮನಬಂದಂತೆ ಗುಂಡಿನ ಮಳೆಗರೆದಿದ್ದರು. ನಂತರ ಭಕ್ತರನ್ನು ಒತ್ತೆಯಾಳಾಗಿಟ್ಟುಕೊಂಡಿದ್ದರು. ಎನ್‌ಎಸ್‌ಜಿ ಕಮಾಂಡೋಗಳನ್ನು ಉಗ್ರರನ್ನು ಬಲಿ ತೆಗೆದುಕೊಳ್ಳುವುದರೊಂದಿಗೆ ಪ್ರಕರಣ 14 ಗಂಟೆಗಳಲ್ಲಿ ಅಂತ್ಯ ಕಂಡಿತ್ತು.
ಸಂಬಂಧಿತ ಮಾಹಿತಿ ಹುಡುಕಿ