ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಮುಂಬೈ ದಾಳಿ; ಪಾಕ್ ವಿಚಾರಣೆಗೆ ಭಾರತ ಅವಕಾಶ? (Mumbai attacks | Pakistan | India | P Chidambaram)
Bookmark and Share Feedback Print
 
ಮುಂಬೈ ದಾಳಿ ಸಂಬಂಧ ಭಾರತಕ್ಕೆ ಭೇಟಿ ನೀಡಿ ಇಲ್ಲಿನ ಇಬ್ಬರು ಸಾಕ್ಷಿಗಳ ಹೇಳಿಕೆಯನ್ನು ದಾಖಲು ಮಾಡಿಕೊಳ್ಳುವ ಪಾಕಿಸ್ತಾನದ ಆಯೋಗ ರಚನೆ ಪ್ರಸ್ತಾವನೆಗೆ ಭಾರತ ಮುಕ್ತವಾಗಿದೆ ಎಂದು ಸರಕಾರಿ ಮೂಲಗಳು ಹೇಳಿದ್ದು, ಅಧಿಕೃತ ಮನವಿಯವರೆಗೆ ಕಾಯುವುದಾಗಿ ತಿಳಿಸಿವೆ.

ವೀಡಿಯೋ ಕಾನ್ಫರೆನ್ಸ್ ಮೂಲಕ ಪಾಕಿಸ್ತಾನದ ನ್ಯಾಯಾಲಯಕ್ಕೆ ಹೇಳಿಕೆ ನೀಡಲು ಈಗಾಗಲೇ ಭಾರತ ತನ್ನ ಅಧಿಕಾರಿಗಳಿಗೆ ಒಪ್ಪಿಗೆ ಸೂಚಿಸಿರುವುದರಿಂದ ಇದೀಗ ಪಾಕಿಸ್ತಾನ ಮುಂದಿಟ್ಟಿರುವ ಹೊಸ ಪ್ರಸ್ತಾವನೆಗೆ ಸಹಕರಿಸಲು ನವದೆಹಲಿಗೆ ಯಾವುದೇ ಸಮಸ್ಯೆಯಿಲ್ಲ ಎಂದು ಸರಕಾರಿ ಮೂಲಗಳು ಅಭಿಪ್ರಾಯಪಟ್ಟಿವೆ.

ಇದನ್ನೂ ಓದಿ: ಮುಂಬೈ ದಾಳಿಗೆ ಆಯೋಗ; ಚಿದಂಬರಂ-ಮಲಿಕ್ ಮಾತುಕತೆ

ಆದರೆ ಭಾರತಕ್ಕೆ ಈ ಕುರಿತು ಪಾಕಿಸ್ತಾನವು ಮನವಿ ಸಲ್ಲಿಸುವ ಮೊದಲು ಮುಂಬೈ ದಾಳಿ ಆರೋಪಿಗಳಾದ ಲಷ್ಕರ್ ಇ ತೋಯ್ಬಾದ ಝಾಕೀರ್ ರೆಹಮಾನ್ ಲಖ್ವಿ ಮತ್ತಿತರರ ವಿಚಾರಣೆ ನಡೆಸುತ್ತಿರುವ ಆ ದೇಶದ ವಿಚಾರಣಾ ನ್ಯಾಯಾಲಯದಿಂದ ಆಯೋಗ ರಚನೆ ಕುರಿತು ಸರಕಾರ ಒಪ್ಪಿಗೆ ಪಡೆದುಕೊಳ್ಳಬೇಕಾಗಿದೆ.

ಈ ನಡುವೆ ಇದು ಪಾಕಿಸ್ತಾನದ ಮತ್ತೊಂದು ತಂತ್ರ ಎಂಬ ಆರೋಪಗಳೂ ಕೇಳಿ ಬರುತ್ತಿವೆ. 166 ಮಂದಿ ಅಮಾಯಕರ ಸಾವಿಗೆ ಕಾರಣವಾಗಿದ್ದ 2008ರ ನವೆಂಬರ್ 26ರ ದಾಳಿಯ ತನಿಖೆಯನ್ನು ಮತ್ತಷ್ಟು ವಿಳಂಬಗೊಳಿಸುವ ಸಲುವಾಗಿ ಪಾಕ್ ಮತ್ತೊಂದು ಕುತಂತ್ರವನ್ನು ರೂಪಿಸುತ್ತಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ಮೂಲಗಳ ಪ್ರಕಾರ ಪಾಕಿಸ್ತಾನದ ನ್ಯಾಯಾಲಯವು ಈ ಕುರಿತು ತನ್ನ ನಿರ್ಧಾರವನ್ನು ಪ್ರಕಟಿಸುವ ತನಕ ಇದರ ಬಗ್ಗೆ ಯಾವುದೇ ನಿರ್ಣಯಗಳನ್ನು ತೆಗೆದುಕೊಳ್ಳುವುದು ಅಪಕ್ವತೆಯೆನಿಸಬಹುದು. ಇಸ್ಲಾಮಾಬಾದ್‌ನಿಂದ ಅಧಿಕೃತ ಮನವಿ ಬಂದ ನಂತರವಷ್ಟೇ ಭಾರತ ತನ್ನ ನಿಲುವನ್ನು ವ್ಯಕ್ತಪಡಿಸಲಿದೆ ಎಂದು ಹೇಳಲಾಗಿದೆ.
ಸಂಬಂಧಿತ ಮಾಹಿತಿ ಹುಡುಕಿ