ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಜಯಲಲಿತಾಗೆ ಸಾಕಷ್ಟು ಭದ್ರತೆ ಒದಗಿಸುತ್ತಿದ್ದೇವೆ: ಡಿಎಂಕೆ (Jayalalithaa | DMK | AIADMK | Tamil Nadu)
Bookmark and Share Feedback Print
 
ತಮ್ಮ ನಾಯಕಿ ಜಯಲಲಿತಾ ಅವರಿಗೆ ಜೀವ ಬೆದರಿಕೆಗಳಿದ್ದರೂ ಈ ಕುರಿತು ತಮಿಳುನಾಡು ಸರಕಾರವು ಜಡತ್ವ ಪ್ರದರ್ಶಿಸುತ್ತಿದೆ ಎಂದು ಎಐಎಡಿಎಂಕೆ ಸಂಸದರು ಪ್ರಧಾನಿ ಮನಮೋಹನ್ ಸಿಂಗ್ ಅವರಿಗೆ ದೂರು ನೀಡಿರುವುದಕ್ಕೆ ಪ್ರತಿಕ್ರಿಯಿಸಿರುವ ರಾಜ್ಯ, ಸೂಕ್ತ ಭದ್ರತೆ ಒದಗಿಸಲಾಗಿದೆ ಎಂದಿದೆ.

ಪತ್ರಗಳ ಮೂಲಕ ಜೀವ ಬೆದರಿಕೆಗಳು ಮುಖ್ಯಮಂತ್ರಿ, ಕೇಂದ್ರ ಗೃಹಸಚಿವರು ಮತ್ತು ಇತರ ನಾಯಕರುಗಳಿಗೆ ಬರುವುದು ಸಾಮಾನ್ಯ. ಆದರೂ ಇದನ್ನು ನಾವು ನಿರ್ಲಕ್ಷಿಸುತ್ತಿಲ್ಲ. ಇಂತಹ ಪ್ರಕರಣಗಳನ್ನು ತನಿಖೆ ನಡೆಸಿ ಸೂಕ್ತ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಮಾಧ್ಯಮಗಳಿಗೆ ಬಿಡುಗಡೆ ಮಾಡಿರುವ ಜಾಹೀರಾತುಗಳಲ್ಲಿ ಡಿಎಂಕೆ ಸರಕಾರ ಹೇಳಿಕೊಂಡಿದೆ.

ಇದನ್ನೂ ಓದಿ: ಬೆದರಿಕೆಗಳಿಗೆ ಸೊಪ್ಪು ಹಾಕುವವಳು ನಾನಲ್ಲ: ಜಯಲಲಿತಾ

ಜಯಲಲಿತಾರಿಗೆ ಒದಗಿಸಲಾಗುತ್ತಿರುವ ಭದ್ರತೆ ಬಗ್ಗೆ ಸರಕಾರದ ಮೇಲೆ ವಿವಿಧ ರೀತಿಯಲ್ಲಿ ಒತ್ತಡ ಹೇರಲು ಮುಂದಾಗಿರುವ ಎಐಎಡಿಎಂಕೆಗೆ ಉತ್ತರಿಸಿರುವ ಸರಕಾರ, ಈ ಸಂಬಂಧ ಪ್ರಕರಣ ದಾಖಲಾಗಿದೆ. ಅದರ ಕುರಿತ ತನಿಖೆ ಪ್ರಗತಿಯಲ್ಲಿದೆ ಎಂದಿದೆ.

ಜಯಲಲಿತಾ ಅವರಿಗೆ ಸೂಕ್ತ ಭದ್ರತೆಯನ್ನು ಒದಗಿಸುವಲ್ಲಿ ಮುಖ್ಯಮಂತ್ರಿ ಎಂ. ಕರುಣಾನಿಧಿಯವರ ಡಿಎಂಕೆ ಸರಕಾರವು ಜಡತ್ವ ಪ್ರದರ್ಶಿಸುತ್ತಿದೆ ಎಂದು ದೂರಿದ್ದ ಪಕ್ಷದ ಸಂಸದರು ನಿನ್ನೆಯಷ್ಟೇ ಪ್ರಧಾನಿ ಸಿಂಗ್ ಮತ್ತು ಗೃಹಸಚಿವ ಪಿ. ಚಿದಂಬರಂ ಅವರನ್ನು ಭೇಟಿ ಮಾಡಿ ದೂರಿಕೊಂಡಿದ್ದರು. ಅಲ್ಲದೆ ಈ ವಿಚಾರದಲ್ಲಿ ಮಧ್ಯಪ್ರವೇಶಿಸಿ ರಾಜ್ಯ ಸರಕಾರಕ್ಕೆ ಸೂಕ್ತ ನಿರ್ದೇಶನ ನೀಡಬೇಕು ಎಂದು ಒತ್ತಾಯಿಸಲಾಗಿತ್ತು.

'ಝೆಡ್ ಪ್ಲಸ್' ಭದ್ರತೆ ಪಡೆಯುತ್ತಿರುವ ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರಿಗೆ ಭದ್ರತೆ ಒದಗಿಸಲು ಇಬ್ಬರು ಡಿಎಸ್‌ಪಿಗಳು ಸೇರಿದಂತೆ ಒಟ್ಟು 75 ಭದ್ರತಾ ಸಿಬ್ಬಂದಿಗಳನ್ನು ಒದಗಿಸಲಾಗಿದೆ.

ಜತೆಗೆ ರಾಷ್ಟ್ರೀಯ ಭದ್ರತಾ ಪಡೆಯ (ಎನ್ಎಸ್‌ಜಿ) 12 ಕಮಾಂಡೋಗಳು ಕೂಡ ಎಐಎಡಿಎಂಕೆ ನಾಯಕಿಗೆ ರಕ್ಷಣೆ ಒದಗಿಸುತ್ತಿದ್ದಾರೆ. ರಾಜ್ಯದ ಪೊಲೀಸ್ ಇಲಾಖೆಯಿಂದ ಅವರಿಗೆ ಗುಂಡು ನಿರೋಧಕ ಕಾರು ಮತ್ತು ಚಾಲಕನನ್ನು ಕೂಡ ಒದಗಿಸಲಾಗಿದೆ. ಪ್ರತಿದಿನ ಬೆಳಿಗ್ಗೆ ಅವರ ವಸತಿ ಪ್ರದೇಶದಲ್ಲಿ ತಪಾಸಣೆ ನಡೆಸಲಾಗುತ್ತಿದೆ ಎಂದು ರಾಜ್ಯ ವಿವರಣೆ ನೀಡಿದೆ.
ಸಂಬಂಧಿತ ಮಾಹಿತಿ ಹುಡುಕಿ