ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಶಾರೂಖ್‌ನಂತೆ ಸಲ್ಮಾನ್ ಮೊಂಡನಲ್ಲ, ದೇಶಭಕ್ತ: ಶಿವಸೇನೆ (Shiv Sena | Salman Khan | Bal Thackeray | Shah Rukh Khan)
Bookmark and Share Feedback Print
 
ಶಾರೂಖ್ ಖಾನ್‌ರಂತೆ ಸಲ್ಮಾನ್ ಖಾನ್ ಮೊಂಡನಲ್ಲ ಎಂದು ಅಭಿಪ್ರಾಯಪಟ್ಟಿರುವ ಶಿವಸೇನಾ ವರಿಷ್ಠ ಬಾಳಾ ಠಾಕ್ರೆ, 'ಬ್ಯಾಡ್ ಬಾಯ್' ಇಮೇಜ್‌ ಹೊಂದಿರುವ ಬಾಲಿವುಡ್ ನಟನ ಮನೆಯವರು ದೇಶಭಕ್ತರು ಎಂದು ಬಣ್ಣಿಸಿದ್ದಾರೆ.

2008ರ ಮುಂಬೈ ಭಯೋತ್ಪಾದನಾ ದಾಳಿಯ ಕುರಿತು ವಿವಾದಿತ ಹೇಳಿಕೆ ನೀಡಿದ್ದಕ್ಕೆ ಸಲ್ಮಾನ್‌ರನ್ನು ಹಿಗ್ಗಾಮುಗ್ಗಾ ಝಾಡಿಸಿದ್ದ ಶಿವಸೇನೆ ಇದೀಗ ವರಸೆ ಬದಲಾಯಿಸಿದ್ದು, ಅವರನ್ನು ಅಪಾದಮಸ್ತಕ ಹೊಗಳಿದೆ.

ಸಲ್ಮಾನ್ ಖಾನ್ ವಿರುದ್ಧ ಸಿಟ್ಟು ತೋರಿಸಲು ಯಾವುದೇ ಕಾರಣಗಳಿಲ್ಲ. ಯಾಕೆಂದರೆ ಆತನ ಕುಟುಂಬ ವಾಸ್ತವದಲ್ಲಿ ರಾಷ್ಟ್ರಾಭಿಮಾನವನ್ನು ಹೊಂದಿದೆ. ಅವರು ರಾಷ್ಟ್ರೀಯತಾವಾದಿಗಳು ಎಂದು ಶಿವಸೇನೆ ತನ್ನ ಮುಖವಾಣಿ 'ಸಾಮ್ನಾ'ದ ಸಂಪಾದಕೀಯದಲ್ಲಿ ಹೇಳಿದೆ.

ಸಲ್ಮಾನ್ ತನ್ನ ಹೇಳಿಕೆಯ ಕುರಿತು ರಾಷ್ಟ್ರದಾದ್ಯಂತ ವಿವಾದಗಳು ಸೃಷ್ಟಿಯಾದ ನಂತರ ಕ್ಷಮೆ ಯಾಚಿಸಿದ್ದಾರೆ. ಇದು ಕೇವಲ ಶ್ರೀಮಂತರಿದಷ್ಟೇ ಆಕ್ಷೇಪಕ್ಕೊಳಗಾಗಿರುವುದು ಮಾತ್ರವಲ್ಲ, ಜನ ಸಾಮಾನ್ಯರೂ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ ಎಂಬುದು ಅವರಿಗೆ ಮನದಟ್ಟಾಗಿದೆ ಎಂದು ಠಾಕ್ರೆ ಹೇಳಿದ್ದಾರೆ.

ಇದನ್ನೂ ಓದಿ: ಮುಂಬೈ ದಾಳಿ ಹಿಂದೆ ಪಾಕಿಸ್ತಾನವಿಲ್ಲ; ಸಲ್ಮಾನ್

ಪಾಕಿಸ್ತಾನದ ಸುದ್ದಿವಾಹಿನಿಯೊಂದಕ್ಕೆ ಸಂದರ್ಶನ ನೀಡಿದ್ದ ಅವರು, 'ಮುಂಬೈ ದಾಳಿಯ ನಂತರ ಈ ಕುರಿತು ದೊಡ್ಡ ಮಟ್ಟದ ಅತಿಶಯವನ್ನು ಸೃಷ್ಟಿಸಲಾಯಿತು. ಇದಕ್ಕೆ ಕಾರಣ ಶ್ರೀಮಂತರ ನೆಲೆಗಳು ಗುರಿಯಾಗಿದ್ದುದು. ದಾಳಿಗಳು ರೈಲುಗಳಲ್ಲಿ ಮತ್ತು ಸಣ್ಣ ಪುಟ್ಟ ನಗರಗಳಲ್ಲೂ ನಡೆಯುತ್ತಿದೆ. ಆದರೆ ಅದರ ಕುರಿತು ಯಾರೊಬ್ಬರೂ ಹೆಚ್ಚು ಮಾತನಾಡುತ್ತಿಲ್ಲ' ಎಂದಿದ್ದರು.

ಅದೇ ಹೊತ್ತಿಗೆ ಶಾರೂಖ್ ಖಾನ್ ಅವರನ್ನು ಶಿವಸೇನೆ ಮತ್ತೊಮ್ಮೆ ಕೆದಕಿದೆ. ಪರಸ್ಪರ ವಿರೋಧಿಗಳೆಂದು ಬಾಲಿವುಡ್ ಅಂಗಳದಲ್ಲಿ ಗುರುತಿಸಲ್ಪಡುತ್ತಿರುವ ಇಬ್ಬರು ಖಾನ್‌ಗಳ ನಡುವೆ, ಸಲ್ಮಾನ್ ಖಾನ್ ಉತ್ತಮ ಎಂಬ ರೀತಿಯಲ್ಲಿ ಸಾಮ್ನಾ ಸಂಪಾದಕೀಯ ಬೆಟ್ಟು ಮಾಡಿದೆ.

'ಶಾರೂಖ್ ಖಾನ್‌‌ರಂತೆ ಸಲ್ಮಾನ್ ಖಾನ್ ಮೊಂಡನಲ್ಲ' ಎಂದು ಠಾಕ್ರೆಯವರು ಸಲ್ಮಾನ್‌ಗೆ ಬೆಂಬಲ ನೀಡಿದ್ದಾರೆ.

ಪಾಕಿಸ್ತಾನಿ ಆಟಗಾರರನ್ನು ಐಪಿಎಲ್‌ನಲ್ಲಿ ಆಡಲು ಅವಕಾಶ ನೀಡಬೇಕಿತ್ತು ಎಂದು ಹೇಳಿ ವಿವಾದಕ್ಕೆ ಕಾರಣವಾಗಿದ್ದ ಶಾರೂಖ್ ಇದೇ ವರ್ಷದ ಫೆಬ್ರವರಿಯಲ್ಲಿ ಕ್ಷಮೆ ಯಾಚಿಸಿದ್ದರು. ಆದರೆ ಇದು ಶಿವಸೇನೆಯಲ್ಲಿ ಯಾಚಿಸುತ್ತಿರುವ ಕ್ಷಮೆಯಲ್ಲ ಎಂದೂ ಖಾನ್ ಸ್ಪಷ್ಟಪಡಿಸಿದ್ದರು. ಈ ಹೊತ್ತಿನಲ್ಲಿ ಅವರ ಚಿತ್ರ 'ಮೈ ನೇಮ್ ಈಸ್ ಖಾನ್'ಗೂ ಶಿವಸೈನಿಕರು ಹಲವೆಡೆ ಅಡ್ಡಿಪಡಿಸಿದ್ದರು.
ಸಂಬಂಧಿತ ಮಾಹಿತಿ ಹುಡುಕಿ