ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ದೀಕ್ಷಿತ್ ವಿವಾದ; ಭಾರತದ ಕ್ಷಮೆ ಯಾಚಿಸಿದ ನ್ಯೂಜಿಲೆಂಡ್ (Kiwi TV | Sheila Dikshit | Paul Henry | New Zealand)
Bookmark and Share Feedback Print
 
ದೆಹಲಿ ಮುಖ್ಯಮಂತ್ರಿ ಶೀಲಾ ದೀಕ್ಷಿತ್ ಅವರನ್ನು ಅಪಹಾಸ್ಯ ಮಾಡಿದ್ದ ಕಾರ್ಯಕ್ರಮವೊಂದು ಕಿವೀಸ್ ವಾಹಿನಿಯೊಂದು ಪ್ರಸಾರ ಮಾಡಿರುವುದಕ್ಕೆ ನ್ಯೂಜಿಲೆಂಡ್ ಕ್ಷಮೆ ಯಾಚಿಸಿದೆ. ಈ ಸಂಬಂಧ ಭಾರತವು ಅಸಮಾಧಾನ ವ್ಯಕ್ತಪಡಿಸಿದ ಬೆನ್ನಿಗೆ ಭಾರತದಲ್ಲಿನ ನ್ಯೂಜಿಲೆಂಡ್ ರಾಯಭಾರಿ ಘಟನೆಗೆ ವಿಷಾದ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಶೀಲಾ ದೀಕ್ಷಿತ್ ಹೆಸರಿಗೆ ಕಿವೀಸ್ ಟಿವಿ ನಿರೂಪಕ ಅಪಹಾಸ್ಯ

ಸಿಡ್ನಿ: ದೆಹಲಿ ಮುಖ್ಯಮಂತ್ರಿ ಶೀಲಾ ದೀಕ್ಷಿತ್ ಅವರ ಹೆಸರನ್ನು ನ್ಯೂಜಿಲೆಂಡ್ ಟಿವಿ ನಿರೂಪಕನೊಬ್ಬ ಅಪಹಾಸ್ಯ ಮಾಡಿದ್ದಾನೆ. ಇದೆಂತಹ ಹೆಸರು, 'ಡಿಕ್-ಶಿಟ್' ಎಂದು ಹೇಳುವ ಮೂಲಕ ಅಪಮಾನ ಮಾಡಿದ್ದಾನೆ. ಆತನ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿದೆ ಎಂದು ವರದಿಗಳು ಹೇಳಿವೆ.

ನ್ಯೂಜಿಲೆಂಡ್‌ನ ಟಿವಿಎನ್‌ಜೆಡ್ ಚಾನೆಲ್‌ನ ಖ್ಯಾತ ನಿರೂಪಕ ಪೌಲ್ ಹೆನ್ರಿ ಎಂಬಾತ ಕಾಮನ್‌ವೆಲ್ತ್ ಗೇಮ್ಸ್ ಸಂಬಂಧಿ ಕಾರ್ಯಕ್ರಮವೊಂದರಲ್ಲಿ ದೆಹಲಿ ಮುಖ್ಯಮಂತ್ರಿ ಶೀಲಾ ದೀಕ್ಷಿತ್ ಅವರ ಹೆಸರನ್ನು 'ಶೀಲಾ ಡಿಕ್-ಶಿಟ್' ಎಂದು ಉದ್ದೇಶಪೂರ್ವಕವಾಗಿ ಉಚ್ಛರಿಸುತ್ತಾ, ಇದೆಂತಹ ಹೆಸರು ಎಂದು ಪ್ರಶ್ನಿಸಿದ್ದ. ಅಲ್ಲದೆ ಆಕೆ ಭಾರತೀಯಳಾಗಿರುವುದರಿಂದ 'ಡಿಕ್-ಶಿಟ್' (Dik-shit) ಹೆಚ್ಚು ಸೂಕ್ತವಾಗಿದೆ ಎಂದು ಜನಾಂಗೀಯ ಅಪಮಾನವನ್ನೂ ಎಸಗಿದ್ದ.

ಈ ಹಿನ್ನೆಲೆಯಲ್ಲಿ ವಿದೇಶಾಂಗ ಸಚಿವಾಲಯವು ನ್ಯೂಜಿಲೆಂಡ್‌ನ ರಾಯಭಾರಿ ರೂಪೆರ್ಟ್ ಹಾಲ್ಬೊರೊ ಅವರಿಗೆ ಸಮನ್ಸ್ ಜಾರಿಗೊಳಿಸಿತ್ತು. ಅದರಂತೆ ವಿದೇಶಾಂಗ ಸಚಿವಾಲಯಕ್ಕೆ ಆಗಮಿಸಿದ ರೂಪೆರ್ಟ್, ನಡೆದಿರುವ ಪ್ರಸಂಗಕ್ಕೆ ದೇಶದ ಪರವಾಗಿ ಕ್ಷಮೆ ಯಾಚಿಸಿದ್ದಾರೆ.

ಟಿವಿ ನಿರೂಪಕ ಮಾಡಿರುವ ಟೀಕೆಗಳು ಸ್ವೀಕಾರಾರ್ಹವಲ್ಲ. ಇದನ್ನು ನಾವು ತೀವ್ರವಾಗಿ ಖಂಡಿಸುತ್ತೇವೆ. ಇದು ಸಾಂಸ್ಕೃತಿಕವಾಗಿ ಅಸಂವೇದಿಯಾದದ್ದು ಮತ್ತು ಅಸಭ್ಯತನದಿಂದ ಕೂಡಿದ್ದು. ಘಟನೆಗೆ ವಿಷಾದ ವ್ಯಕ್ತಪಡಿಸುತ್ತೇವೆ ಎಂದು ನ್ಯೂಜಿಲೆಂಡ್ ರಾಯಭಾರಿ ತನ್ನ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ದೆಹಲಿ ಮುಖ್ಯಮಂತ್ರಿಯವರ ಹೆಸರನ್ನು ಬಳಸಿ ಜನಾಂಗೀಯ ನಿಂದನೆ ಎಸಗಿರುವುದನ್ನು ವಿದೇಶಾಂಗ ಸಚಿವ ಎಸ್.ಎಂ. ಕೃಷ್ಣ ಕೂಡ ಖಂಡಿಸಿದ್ದಾರೆ. ಇದು ಸಂಪೂರ್ಣವಾಗಿ ಅಸ್ವೀಕಾರಾರ್ಹವಾದುದು ಎಂದು ಅವರು ಬಣ್ಣಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ