ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಮಹಿಳೆಯನ್ನು 'ಕೀಪ್' ಎಂದು ಕರೆಯುವುದು ಅವಮಾನಕರ (Keep | women | Indira Jaisingh | Supreme Court)
Bookmark and Share Feedback Print
 
ಲಿವ್-ಇನ್ ರಿಲೇಷನ್‌ಶಿಪ್‌ಗೆ ಸಂಬಂಧಪಟ್ಟಂತೆ ಎರಡು ದಿನಗಳ ಹಿಂದೆ ಸರ್ವೋಚ್ಚ ನ್ಯಾಯಾಲಯವು ಬಳಸಿರುವ 'ಇಟ್ಟುಕೊಂಡವಳು' ಎಂಬ ಪದಕ್ಕೆ ದೇಶದ ಮೊದಲ ಮಹಿಳಾ ಹೆಚ್ಚುವರಿ ಸಾಲಿಸಿಟರ್ ಜನರಲ್ ಇಂದಿರಾ ಜೈಸಿಂಗ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಗುರುವಾರ ಸಹ-ಜೀವನ ಪ್ರಕರಣದಲ್ಲಿ ತೀರ್ಪು ನೀಡಿದ ನ್ಯಾಯಮೂರ್ತಿಗಳಾದ ಮಾರ್ಕಂಡೇಯ ಕಟ್ಜು ಮತ್ತು ತೀರತ್ ಸಿಂಗ್ ಠಾಕೂರ್ ಅವರನ್ನೊಳಗೊಂಡ ಪೀಠದ ಎದುರು ಇನ್ನೊಂದು ಪ್ರಕರಣದ ಸಂಬಂಧ ಜೈಸಿಂಗ್ ನ್ಯಾಯಾಲಯಕ್ಕೆ ಬಂದಿದ್ದರು.

ಇದನ್ನೂ ಓದಿ: ಸೆಕ್ಸ್ ಉದ್ದೇಶದ ಲಿವ್-ಇನ್ ಸಂಬಂಧಕ್ಕೆ ಜೀವನಾಂಶವಿಲ್ಲ

ಗುರುವಾರ ಲಿವ್-ಇನ್ ರಿಲೇಷನ್‌ಶಿಪ್ ಪ್ರಕರಣದ ತೀರ್ಪಿನಲ್ಲಿ ಬಳಸಲಾದ ಇಟ್ಟುಕೊಂಡವಳು (Keep) ಎಂಬ ಶಬ್ಧ ಅವಹೇಳನಾತ್ಮಕವಾಗಿದ್ದು, ಮಹಿಳೆಯ ಗೌರವವನ್ನು ಕುಗ್ಗಿಸುತ್ತದೆ. ಹಾಗಾಗಿ ತೀರ್ಪಿನಿಂದ ಆ ನಿರ್ದಿಷ್ಟ ಪದವನ್ನು ಹಿಂದಕ್ಕೆ ಪಡೆಯುವಂತೆ ನಾನು ಅರ್ಜಿಯೊಂದನ್ನು ಸಲ್ಲಿಸಲಿದ್ದೇನೆ ಎಂದು ನ್ಯಾಯಮೂರ್ತಿಗಳ ಮುಂದೆ ಜೈಸಿಂಗ್ ಹೇಳಿದರು.

ವ್ಯಕ್ತಿಯೊಬ್ಬ ಮಹಿಳೆಯ ಖರ್ಚು ವೆಚ್ಚಗಳನ್ನು ನೋಡಿಕೊಂಡು, ಲೈಂಗಿಕ ಬಯಕೆಗಳನ್ನು ಈಡೇರಿಸಿಕೊಳ್ಳಲು ಇಟ್ಟುಕೊಂಡವಳಂತೆ (Keep) ಇದ್ದರೆ ಅಥವಾ ಸೇವಕಿಯಾಗಿ ಬಳಸಿಕೊಂಡಿದ್ದ ಮಾತ್ರಕ್ಕೆ ಗೃಹಹಿಂಸಾ ಕಾಯ್ದೆಯ ಅಡಿಯಲ್ಲಿ ಮಹಿಳೆ ಜೀವನಾಂಶ ಪಡೆಯಲು ಸಾಧ್ಯವಾಗುವುದಿಲ್ಲ. ಈ ಸಂಬಂಧವನ್ನು ಮದುವೆ ಎಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ತನ್ನ ತೀರ್ಪಿನಲ್ಲಿ ಹೇಳಿತ್ತು.

ಮಹಿಳೆ ಮತ್ತು ಪುರುಷನ ನಡುವೆ ಮದುವೆ ನಡೆಯದೇ ಇದ್ದರೂ, ಆಕೆ ಜೀವನಾಂಶ ಪಡೆಯಲು ಶಕ್ತಳಾಗುತ್ತಾಳೆ ಎನ್ನುವುದು ನಿಜ. ಆದರೆ ಅದಕ್ಕೆ ಕೆಲವೊಂದು ಷರತ್ತುಗಳಿವೆ ಎಂದು ನ್ಯಾಯಪೀಠವು ಇದೇ ಸಂದರ್ಭದಲ್ಲಿ ತಿಳಿಸಿತ್ತು.

ಅದರ ಪ್ರಕಾರ, ಈ ಷರತ್ತುಗಳನ್ನು ದಾಖಲೆ ಸಹಿತ ನ್ಯಾಯಾಲಯದ ಮುಂದೆ ಸಾಬೀತುಪಡಿಸಿರಬೇಕು. ಅವುಗಳೆಂದರೆ,

1) ಸ್ತ್ರೀ ಮತ್ತು ಪುರುಷ ದಂಪತಿಯಂತೆ ಸಮಾಜದಲ್ಲಿ ಬಹಿರಂಗವಾಗಿ ಜೀವನ ಸಾಗಿಸುತ್ತಿರಬೇಕು.
2) ಗಂಡು ಮತ್ತು ಹೆಣ್ಣು ಇಬ್ಬರೂ ಮದುವೆಯ ವಯಸ್ಸಿನ ಅರ್ಹತೆಯನ್ನು ಹೊಂದಿರಬೇಕು.
3) ಇಬ್ಬರಿಗೂ ಮದುವೆಯಾಗಿರಬಾರದು, ಕಾನೂನಿನಂತೆ ಮದುವೆಯ ಅರ್ಹತೆ ಇರಬೇಕು.
4) ಗಂಡು-ಹೆಣ್ಣು ಬಾಹ್ಯ ಸಮಾಜಕ್ಕೆ ತಿಳಿಯುವ ರೀತಿಯಲ್ಲಿ ಸ್ವ ಇಚ್ಛೆಯಿಂದ ಬದುಕಿರಬೇಕು.
ಸಂಬಂಧಿತ ಮಾಹಿತಿ ಹುಡುಕಿ