ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಅಜ್ಮೀರ್ ಪ್ರಕರಣ ಕಾಂಗ್ರೆಸ್ ಷಡ್ಯಂತ್ರ: ಬಿಜೆಪಿ, ಆರೆಸ್ಸೆಸ್ (BJP | RSS | Ajmer blast | Congress)
Bookmark and Share Feedback Print
 
ಅಜ್ಮೀರ್ ಸ್ಫೋಟ ಪ್ರಕರಣದ ದೋಷಾರೋಪ ಪಟ್ಟಿಯಲ್ಲಿ ಸಂಘ ಪರಿವಾರದ ನಾಯಕ ಇಂದ್ರೇಶ್ ಕುಮಾರ್ ಹೆಸರನ್ನು ಸೇರಿಸಿರುವುದು ರಾಜಕೀಯ ಷಡ್ಯಂತ್ರ ಎಂದು ಆರೋಪಿಸಿರುವ ಬಿಜೆಪಿ ಮತ್ತು ರಾಷ್ಟ್ರೀಯ ಸ್ವಯಂಸೇವಕ ಸಂಘ, ಇದರಲ್ಲಿ ಕಾಂಗ್ರೆಸ್ ಕೈವಾಡವಿದೆ ಎಂದಿದೆ.

ಇದನ್ನೂ ಓದಿ: ಅಜ್ಮೀರ್ ಸ್ಫೋಟದಲ್ಲಿ ಆರೆಸ್ಸೆಸ್; ಕಾಂಗ್ರೆಸ್-ಬಿಜೆಪಿ ಕಿತ್ತಾಟ

2005ರ ಅಕ್ಟೋಬರ್ 31ರಂದು ಜೈಪುರದಲ್ಲಿನ ಗುಜರಾತಿ ಅತಿಥಿಗೃಹದಲ್ಲಿ ನಡೆದ ರಹಸ್ಯ ಸಭೆಯಲ್ಲಿ ಆರೆಸ್ಸೆಸ್ ನಾಯಕ ಇಂದ್ರೇಶ್ ಕುಮಾರ್ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಜತೆಗೆ ಆರೆಸ್ಸೆಸ್‌ನ ಇನ್ನಿತರ ಆರು ಮಂದಿ ಜತೆಗಿದ್ದರು ಎಂದು ಶುಕ್ರವಾರ ಅಜ್ಮೀರ್ ನ್ಯಾಯಾಲಯಕ್ಕೆ ಸಲ್ಲಿಸಲಾಗಿರುವ 806 ಪುಟಗಳ ಆರೋಪಪಟ್ಟಿಯಲ್ಲಿ ಹೇಳಲಾಗಿದೆ. ಆದರೂ ಇಂದ್ರೇಶ್ ಅವರನ್ನು 2007ರ ಅಜ್ಮೀರ್ ಸ್ಫೋಟ ಪ್ರಕರಣದ ಆರೋಪಿ ಎಂದು ಹೆಸರಿಸಲಾಗಿಲ್ಲ.

ಇದು ಕಾಂಗ್ರೆಸ್ ಕುತಂತ್ರ ಎನ್ನುವುದು ಬಿಜೆಪಿ ಆರೋಪ.

ಇಂದ್ರೇಶ್ ಹೆಸರು ಆರೋಪಪಟ್ಟಿಯಲ್ಲಿ ಕಾಣಿಸಿಕೊಳ್ಳಲು ಕಾರಣ ಕಾಂಗ್ರೆಸ್ ಪಿತೂರಿ. ರಾಷ್ಟ್ರೀಯ ಹಿತಾಸಕ್ತಿಯನ್ನು ರಕ್ಷಿಸುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸುತ್ತಿರುವ ರಾಷ್ಟ್ರೀಯ ಸಂಘಟನೆಯ ಗೌರವಕ್ಕೆ ಮಸಿ ಬಳಿಯಲು ಕಾಂಗ್ರೆಸ್ ಅನುಸರಿಸುತ್ತಿರುವ ತಂತ್ರವನ್ನು ನಾವು ತೀವ್ರವಾಗಿ ಖಂಡಿಸುತ್ತೇವೆ ಎಂದು ಬಿಜೆಪಿ ಉಪಾಧ್ಯಕ್ಷ ಕಲ್ರಾಜ್ ಮಿಶ್ರಾ ಆರೋಪಿಸಿದ್ದಾರೆ.

ಕೇಂದ್ರ ಗೃಹಸಚಿವ ಪಿ. ಚಿದಂಬರಂ ಮಾಡಿರುವ 'ಕೇಸರಿ ಭಯೋತ್ಪಾದನೆ' ಆರೋಪ ಮತ್ತು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಾಹುಲ್ ಗಾಂಧಿಯವರು ಇತ್ತೀಚೆಗೆ ಆರೆಸ್ಸೆಸ್ ವಿರುದ್ಧ ಮಾಡಿರುವ ಆರೋಪಗಳನ್ನು ಉಲ್ಲೇಖಿಸುತ್ತಾ ಮಿಶ್ರಾ ಅವರು, 'ಈ ಇಬ್ಬರು ನಾಯಕರ ನಿಲುವುಗಳನ್ನು ಸಮರ್ಥಿಸಿಕೊಳ್ಳುವ ಸಲುವಾಗಿ ಇಂದ್ರೇಶ್ ಅವರನ್ನು ಪ್ರಕರಣದಲ್ಲಿ ಸಿಲುಕಿಸಲಾಗಿದೆ' ಎಂದರು.

ಅಜ್ಮೀರ್ ಪ್ರಕರಣದಲ್ಲಿ ಇಂದ್ರೇಶ್ ಅವರನ್ನು ನಕಲಿ ದಾಖಲೆಗಳ ಮೂಲಕ ಸಿಲುಕಿಸುವಂತೆ ಕೇಂದ್ರ ಸರಕಾರವು ರಾಜಸ್ತಾನದ ಕಾಂಗ್ರೆಸ್ ಸರಕಾರದ ಮೇಲೆ ಒತ್ತಡ ಹಾಕಿತ್ತು ಎಂದು ಬಿಜೆಪಿ ಹಿರಿಯ ನಾಯಕ ರಾಜನಾಥ್ ಸಿಂಗ್ ಆರೋಪಿಸಿದ್ದಾರೆ.

ಬಿಹಾರದಲ್ಲಿ ನಡೆಯುತ್ತಿರುವ ವಿಧಾನಸಭಾ ಚುನಾವಣೆಗಳಲ್ಲಿ ಲಾಭ ಪಡೆದುಕೊಳ್ಳುವ ನಿಟ್ಟಿನಿಂದ ರಾಷ್ಟ್ರೀಯತಾವಾದಿ ಸಂಘಟನೆ ಆರೆಸ್ಸೆಸ್ ವಿರುದ್ಧ ರಾಜಕೀಯ ಪಿತೂರಿ ನಡೆಸಲಾಗಿದೆ ಎಂದಿದ್ದಾರೆ.

ಇದು ಕಾಂಗ್ರೆಸ್ ಪಿತೂರಿ ಎಂದು ಆರೆಸ್ಸೆಸ್ ಮಾಜಿ ಅಧ್ಯಕ್ಷ ಕೆ.ಸಿ. ಸುದರ್ಶನ್ ಅಭಿಪ್ರಾಯಪಟ್ಟಿದ್ದಾರೆ. ಇಂದ್ರೇಶ್ ಅಜ್ಮೀರ್ ಸ್ಫೋಟ ಅಥವಾ ಯಾವುದೇ ರೀತಿಯ ರಾಷ್ಟ್ರ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡವರಲ್ಲ. ಇದು ಕಾಂಗ್ರೆಸ್ ರೂಪಿಸಿರುವ ತಂತ್ರ. ದೇಶದಲ್ಲಿನ ಹಿಂದೂ ಸಂಘಟನೆಗಳ ವಿರುದ್ಧ ಅದು ಪಿತೂರಿ ನಡೆಸುತ್ತಿದೆ ಎಂದು ಆರೋಪಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ