ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಕಾಶ್ಮೀರ: ಪರಿಹಾರ ಹೇರಲಾಗದು ಎಂದ ಒಬಾಮ (Barak Obama | India Visit | Obama in India | 2010 | US President)
Bookmark and Share Feedback Print
 
ಕಾಶ್ಮೀರ ವಿವಾದ ಪರಿಹಾರಕ್ಕೆ ಯಾವುದೇ ಪಾತ್ರ ವಹಿಸಲು ಅಮೆರಿಕ ಸಿದ್ಧ ಎಂದು ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಹೇಳಿದ್ದು, ಆದರೆ ಈ ಸಮಸ್ಯೆಗೆ ಅಮೆರಿಕವು ಪರಿಹಾರವನ್ನು ಹೇರುವುದು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದರು.

ಇಲ್ಲಿನ ಹೈದರಾಬಾದ್ ಭವನದಲ್ಲಿ ಪ್ರಧಾನಿ ಮನಮೋಹನ್ ಸಿಂಗ್ ಅವರೊಂದಿಗೆ ಮಾತುಕತೆ ನಡೆಸಿದ ನಂತರ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಸೋಮವಾರ ಮಾತನಾಡಿದ ಅವರು, ಭಯೋತ್ಪಾದಕರ ಸುರಕ್ಷಿತ ತಾಣವಾಗಿಸಲು ಬಿಡುವುದಿಲ್ಲ ಎಂಬುದನ್ನು ಈ ಪ್ರದೇಶದ ಎಲ್ಲ ರಾಷ್ಟ್ರಗಳೂ ಮನಗಾಣಬೇಕಾದ ಅನಿವಾರ್ಯತೆಯನ್ನು ಉಭಯ ರಾಷ್ಟ್ರಗಳೂ ಮನಗಂಡಿವೆ ಎಂದರು.

ಭಾರತ-ಪಾಕ್ ನಡುವೆ ಉದ್ವಿಗ್ನತೆ ಕಡಿಮೆ ಮಾಡುವ ಸಲುವಾಗಿ ಯಾವುದೇ ಪಾತ್ರ ನಿರ್ವಹಿಸಲು ಸಿದ್ಧ ಎಂದು ಈಗಾಗಲೇ ಡಾ.ಸಿಂಗ್ ಅವರಲ್ಲಿ ತಿಳಿಸಿದ್ದೇನೆ. ಬಿಕ್ಕಟ್ಟು ಶಮನವಾದರೆ ಭಾರತಕ್ಕೆ, ಪಾಕಿಸ್ತಾನಕ್ಕೆ, ಈ ಪ್ರದೇಶದ ರಾಷ್ಟ್ರಗಳಿಗೆ ಮತ್ತು ಅಮೆರಿಕಕ್ಕೂ ಒಳ್ಳೆಯದು ಎಂದು ಒಬಾಮ ನುಡಿದರು.

ಪಾಕ್ ಜೊತೆ ಮಾತುಕತೆಗೆ ಭಯವೇನೂ ಇಲ್ಲ-ಸಿಂಗ್
ಇದೇ ಸಂದರ್ಭ ಮಾತನಾಡಿದ ಪ್ರಧಾನಿ ಮನಮೋಹನ್ ಸಿಂಗ್, ಪಾಕಿಸ್ತಾನ ಜೊತೆ ಮಾತುಕತೆಗೆ ಭಾರತಕ್ಕೆ ಭಯವಿಲ್ಲ. ಆದರೆ ಆ ಕಡೆಯಿಂದ ಭಯೋತ್ಪಾದನೆ ಕೃತ್ಯಗಳು ನಿಲ್ಲಬೇಕು ಎಂದು ಹೇಳಿದರು.

ಆದರೆ, ಮಾತುಕತೆ ನಡೆಸುವುದು ಮತ್ತು ಆ ಕಡೆಯಿಂದ ಭಯೋತ್ಪಾದನೆ ಚಟುವಟಿಕೆಗಳು ಮುಂದುವರಿಯುವುದು - ಇವೆರಡೂ ಏಕಕಾಲದಲ್ಲಿ ಸಾಧ್ಯವಾಗದು ಎಂದು ಸಿಂಗ್ ಹೇಳಿದರು.

ಭಾರತವು ಅಮೆರಿಕದ ಉದ್ಯೋಗ ಕಸಿಯುತ್ತಿಲ್ಲ
ಅಮೆರಿಕದ ಪ್ರಜೆಗಳ ಆತಂಕ ನಿವಾರಿಸುವ ನಿಟ್ಟಿನಲ್ಲಿ ಅಲ್ಲಿ 50 ಸಾವಿರ ಉದ್ಯೋಗ ಸೃಷ್ಟಿಗಾಗಿ ಭಾರತದೊಂದಿಗೆ ಒಡಂಬಡಿಕೆ ಮಾಡಿಕೊಳ್ಳಲಾಗಿದೆ ಎಂದು ಅಮೆರಿಕ ಅಧ್ಯಕ್ಷರು ಹೇಳಿರುವಂತೆಯೇ, ನಾವೇನೂ ಅಮೆರಿಕದ ಉದ್ಯೋಗಗಳನ್ನು ಕಸಿದುಕೊಳ್ಳುತ್ತಿಲ್ಲ ಎಂದು ಮನಮೋಹನ್ ಸಿಂಗ್ ಕೂಡ ಸ್ಪಷ್ಟಪಡಿಸಿದರು.

ಭಾರತವು ಅಮೆರಿಕನ್ನರ ಉದ್ಯೋಗ ಕಸಿಯುತ್ತಿಲ್ಲ. ವಾಸ್ತವವಾಗಿ (ಭಾರತಕ್ಕೆ) ಹೊರಗುತ್ತಿಗೆಯು ಅಮೆರಿಕದ ಉತ್ಪಾದನಾ ಸಾಮರ್ಥ್ಯವನ್ನು ಮತ್ತು ಉತ್ಪಾದನೆಯನ್ನು ಹೆಚ್ಚಿಸಲು ನೆರವಾಗಿದೆ ಎಂದು ಸಿಂಗ್ ಹೇಳಿದರು.

ಭಾರತಕ್ಕೆ ಬಂದ ಉದ್ದೇಶವೇನು ಎಂಬ ನಿರ್ದಿಷ್ಟ ಪ್ರಶ್ನೆಗೆ ಉತ್ತರಿಸಿದ ಒಬಾಮ, ಅಮೆರಿಕದಲ್ಲಿ 50 ಸಾವಿರ ಉದ್ಯೋಗ ಸೃಷ್ಟಿಯ ಕುರಿತು ತಾನು ಮುಂಬೈಯಲ್ಲಿ ಘೋಷಣೆ ಮಾಡಿರುವುದಕ್ಕೆ ಒಂದು ಕಾರಣವೆಂದರೆ, ತಾನು ಭಾರತದಲ್ಲಿ ಇಷ್ಟು ಸಮಯ ವ್ಯಯಿಸಿದ್ದೇಕೆ ಎಂಬುದನ್ನು ಅಮೆರಿಕನ್ನರಿಗೆ ತಿಳಿಹೇಳುವ ಸಲುವಾಗಿ ಎಂದರು.

ಒಬಾಮ ಭಾರತ ಭೇಟಿಯ ಸಂದರ್ಭ ಎರಡೂ ರಾಷ್ಟ್ರಗಳ ನಡುವೆ 10 ಶತಕೋಟಿ ಡಾಲರ್ ಮೌಲ್ಯದ 20 ಒಡಂಬಡಿಕೆಗಳಿಗೆ ಸಹಿ ಹಾಕಲಾಗಿದೆ.
ಇದನ್ನೂ ಓದಿ: ನಮ್ಮ ಶಕ್ತಿ ಕುಂದಿದೆ, ಭಾರತವೀಗ ವಿಶ್ವಶಕ್ತಿ: ಒಬಾಮ
ಸಂಬಂಧಿತ ಮಾಹಿತಿ ಹುಡುಕಿ