ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಮೋದಿಯನ್ನು ಬೆಂಬಲಿಸಿದ ಅಡ್ವಾಣಿ ಮೇಲೆ ಕಾಂಗ್ರೆಸ್ ಕಿಡಿ (Narendra Modi | Congress | BJP | LK Advani)
Bookmark and Share Feedback Print
 
ಗೋದ್ರೋತ್ತರ ಗಲಭೆಯಲ್ಲಿ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಪಾತ್ರದ ಕುರಿತು ಸಿಟ್ ಕ್ಲೀನ್ ಚಿಟ್ ನೀಡಿರುವ ವರದಿಗಳಿಗೆ ಸಂತಸ ವ್ಯಕ್ತಪಡಿಸಿರುವ ಬಿಜೆಪಿ ವರಿಷ್ಠ ಎಲ್.ಕೆ. ಅಡ್ವಾಣಿ ಅವರನ್ನು ಕಾಂಗ್ರೆಸ್ ಅಪಹಾಸ್ಯ ಮಾಡಿದೆ. 'ತನ್ನ ಪಕ್ಷದವರೆಂಬ ಕಾರಣಕ್ಕೆ' ಅಡ್ವಾಣಿ ಸಂತೃಪ್ತರಾಗಿದ್ದಾರೆ ಎಂದು ಪಕ್ಷದ ವಕ್ತಾರ ಮೋಹನ್ ಪ್ರಕಾಶ್ ಮೂದಲಿಸಿದ್ದಾರೆ.

ಇದನ್ನೂ ಓದಿ: ಗಲಭೆಯಲ್ಲಿ ಮೋದಿಗೆ ಕ್ಲೀನ್ ಚಿಟ್; ಅಡ್ವಾಣಿ ಫುಲ್ ಖುಷ್

'ಸರ್ವೋಚ್ಚ ನ್ಯಾಯಾಲಯ ರಚಿಸಿದ ಸಮಿತಿ ಸಲ್ಲಿಸಿರುವ ವರದಿಯಲ್ಲಿ ಗುಜರಾತ್ ಗಲಭೆಗೆ ಸಂಬಂಧಿಸಿದಂತೆ, ಮೋದಿಯ ಪಾತ್ರವನ್ನು ಸಾಬೀತು ಪಡಿಸಲು ಯಾವುದೇ ಪ್ರಬಲ ಸಾಕ್ಷಾಧಾರಗಳು ಲಭ್ಯವಾಗಿಲ್ಲ ಎನ್ನುವ ಹಿನ್ನೆಲೆಯಲ್ಲಿ ಕ್ಲೀನ್ ಚಿಟ್ ನೀಡಿರುವುದು ತುಂಬಾ ಸಂತೋಷ ಸಂಗತಿ' ಎಂದು ಅಡ್ವಾಣಿ ತಮ್ಮ ಬ್ಲಾಗ್‌ನಲ್ಲಿ ತಿಳಿಸಿರುವುದಕ್ಕೆ ಕಾಂಗ್ರೆಸ್ ಈ ರೀತಿ ಪ್ರತಿಕ್ರಿಯಿಸಿದೆ.

ಗುಜರಾತ್ ಗಲಭೆಗಳ ಕುರಿತು ನಡೆಯುತ್ತಿರುವ ತನಿಖೆಗಳಲ್ಲಿ ಒಂದನ್ನು ಸಿಟ್ ನಡೆಸಿದ್ದು, ಅದರ ವರದಿಯನ್ನು ಸುಪ್ರೀಂ ಕೋರ್ಟಿಗೆ ಮುಚ್ಚಿದ ಲಕೋಟೆಯಲ್ಲಿ ನೀಡಲಾಗಿದೆ. ಮೋದಿ, ಬಿಜೆಪಿ ಅಥವಾ ಅಡ್ವಾಣಿಯವರು ಗುಜರಾತಿನಲ್ಲಿ ನಡೆದಿರುವ ಘಟನೆಗಳ ಆಪಾದನೆಗಳ ಜವಾಬ್ದಾರಿಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಕಾಂಗ್ರೆಸ್ ವಕ್ತಾರ ಮೋಹನ್ ಪ್ರಕಾಶ್ ತಿಳಿಸಿದರು.

ಬಿಜೆಪಿ ಆಡಳಿತವಿರುವ ರಾಜ್ಯದಲ್ಲಿ ಮೋದಿ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಅಮಾಯಕರು ಪ್ರಾಣ ಕಳೆದುಕೊಂಡಾಗ ಅಡ್ವಾಣಿಯವರು ಈ ದೇಶದ ಉಪ ಪ್ರಧಾನಿ ಮತ್ತು ಗೃಹಸಚಿವರಾಗಿದ್ದರು. ಅವರು ಜವಾಬ್ದಾರರಾಗದೆ ಇನ್ಯಾರು ಹೊರಲು ಸಾಧ್ಯವಿದೆ ಎಂದೂ ಪ್ರಶ್ನಿಸಿದರು.

ಪ್ರತಿ ಬಾರಿ ತನ್ನ ಪರವಾಗಿ ತನಿಖಾ ಸಂಸ್ಥೆಯೊಂದು ವರದಿ ಸಲ್ಲಿಸಿದಾಗ ಅದರ ರಾಜಕೀಯ ಲಾಭವನ್ನು ಪಡೆಯಲು ಬಿಜೆಪಿ ಯತ್ನಿಸುತ್ತದೆ. ಆದರೆ ತನ್ನ ಪರವಾಗಿ ವರದಿಗಳನ್ನು ನೀಡದೇ ಇದ್ದ ಸಂದರ್ಭದಲ್ಲಿ ಸಾಂವಿಧಾನಿಕ ಸಂಸ್ಥೆಗಳು ಮತ್ತು ತನಿಖಾ ಸಂಸ್ಥೆಗಳ ಕಾರ್ಯ ನಿರ್ವಹಣೆ ಕುರಿತು ಶಂಕೆಗಳನ್ನು ವ್ಯಕ್ತಪಡಿಸುತ್ತದೆ ಎಂದು ಟೀಕಿಸಿದರು.

ಸಂಬಂಧಿತ ಮಾಹಿತಿ ಹುಡುಕಿ