ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಕಳ್ಳರ ಹೆಸರು ಬಹಿರಂಗ ಮಾಡಲಾಗದು: ಸುಪ್ರೀಂಗೆ ಕೇಂದ್ರ (Black money | Supreme Court | Germany | UPA govt)
Bookmark and Share Feedback Print
 
ವಿದೇಶಿ ಬ್ಯಾಂಕುಗಳಲ್ಲಿ ಅಕ್ರಮವಾಗಿ ಕಪ್ಪುಹಣವನ್ನು ಕೂಡಿಟ್ಟಿರುವ ವ್ಯಕ್ತಿಗಳ ಹೆಸರನ್ನು ಬಹಿರಂಗಪಡಿಸಲು ನಿಮಗಿರುವ ಅಡ್ಡಿಯೇನು ಎಂದು ಪ್ರಶ್ನಿಸಿದ್ದ ಸರ್ವೋಚ್ಚ ನ್ಯಾಯಾಲಯಕ್ಕೆ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರ ನಕಾರಾತ್ಮಕ ಪ್ರತಿಕ್ರಿಯೆ ನೀಡಿದೆ. ಕಳ್ಳರ ಹೆಸರುಗಳನ್ನು ಬಹಿರಂಗಪಡಿಸಲು ಸಾಧ್ಯವಿಲ್ಲ ಎಂದು ಸ್ಪಷ್ಟವಾಗಿ ಹೇಳಿದೆ.

ಇದನ್ನೂ ಓದಿ: ಕಳ್ಳರ ಹೆಸರು ಹೇಳಲು ಹಿಂಜರಿಕೆ ಯಾಕೆ? ಕೇಂದ್ರಕ್ಕೆ ಸುಪ್ರೀಂ

ಜರ್ಮನಿಯ ಲೈಚೆನ್‌ಸ್ಟೈನ್ ಬ್ಯಾಂಕ್‌ನಲ್ಲಿ (ಎಲ್‌ಟಿಜಿ ಬ್ಯಾಂಕ್) ಅಕ್ರಮವಾಗಿ ಠೇವಣಿ ಇಟ್ಟಿರುವ ಭಾರತೀಯ ಪ್ರಜೆಗಳ ಹೆಸರುಗಳನ್ನು ಜರ್ಮನಿ ಸರಕಾರವು ಭಾರತಕ್ಕೆ ನೀಡಿತ್ತು. ಇದನ್ನು ಬಹಿರಂಗಪಡಿಸುವಂತೆ ಸರಕಾರಕ್ಕೆ ನಿರ್ದೇಶನ ನೀಡಬೇಕು ಎಂದು 2009ರಲ್ಲಿ ಸುಪ್ರೀಂ ಕೋರ್ಟಿಗೆ ಮನವಿ ಸಲ್ಲಿಸಲಾಗಿತ್ತು.

ಕಳೆದ ವಾರ ಇದರ ವಿಚಾರಣೆ ನಡೆಸಿದ್ದ ಸುಪ್ರೀಂ, ಕೇಂದ್ರ ಸರಕಾರವನ್ನು ತರಾಟೆಗೆ ತೆಗೆದುಕೊಂಡಿತ್ತು. ಜರ್ಮನಿ ಸರಕಾರವು ಅಕ್ರಮ ಠೇವಣಿದಾರರ ಮಾಹಿತಿಯನ್ನು ಭಾರತ ಸರಕಾರಕ್ಕೆ ಹಸ್ತಾಂತರಿಸಿದೆ. ಆದರೆ ಅದನ್ನು ಬಹಿರಂಗಪಡಿಸಲು ಸರಕಾರಕ್ಕೆ ಇಷ್ಟವಿಲ್ಲ ಎಂದು ಸರಕಾರದ ಪರ ವಾದಿಸಿದ್ದ ಸಾಲಿಸಿಟರ್ ಜನರಲ್ ಗೋಪಾಲ ಸುಬ್ರಮಣ್ಯಂ ಹೇಳಿದ್ದರು.

ಈ ಸಂಬಂಧ ಇಂದು ಕೇಂದ್ರ ಸಲ್ಲಿಸಿದ ಅಫಿಡವಿತ್‌ನಲ್ಲಿ, ಜರ್ಮನಿಯ ಲೈಚೆನ್‌ಸ್ಟೈನ್ ಬ್ಯಾಂಕ್‌ನಲ್ಲಿ ಠೇವಣಿ ಹೊಂದಿರುವ 26 ಭಾರತೀಯರ ವಿವರಗಳನ್ನು ಮಾತ್ರ ನೀಡಿತ್ತು. ಇದು ನ್ಯಾಯಾಲಯದ ಅಸಮಾಧಾನಕ್ಕೆ ಕಾರಣವಾಯಿತು.

'ಇದಕ್ಕಾಗಿ 2009ರಲ್ಲೇ ಅರ್ಜಿದಾರರು ಮನವಿ ಸಲ್ಲಿಸಿದ್ದರು. ಈಗ ನೀವು ಸಲ್ಲಿಸಿರುವ ಮಾಹಿತಿ (26 ಮಂದಿ) ಇಷ್ಟೇನಾ ಅಥವಾ ಇನ್ನೂ ಹೆಚ್ಚು ಇದೆಯೇ? ನಾವು ದೇಶದ ಹಣ ಮತ್ತು ಆರ್ಥಿಕತೆಯ ಚಿಲ್ಲರೆ ಕಳ್ಳತನದ ಬಗ್ಗೆ ಮಾತನಾಡುತ್ತಿಲ್ಲ. ಮಹಾನ್ ಅಪರಾಧದ ಕುರಿತು ಮಾತನಾಡುತ್ತಿದ್ದೇವೆಯೇ ಹೊರತು, ಒಪ್ಪಂದಗಳ ಕುರಿತಲ್ಲ' ಎಂದು ನೀಡಿರುವ ಮಾಹಿತಿಯನ್ನೂ ನಿರ್ಬಂಧಗೊಳಿಸಿರುವುದಕ್ಕೆ ಕಿಡಿ ಕಾರಿತು.

ತಾನು ಜರ್ಮನಿ ಸರಕಾರದ ಜತೆ ದ್ವಿಪಕ್ಷೀಯ ಒಪ್ಪಂದಕ್ಕೆ ಬದ್ಧವಾಗಿರುವ ಅನಿವಾರ್ಯತೆಯಲ್ಲಿ ಇರುವುದರಿಂದ, ಅಲ್ಲಿನ ಬ್ಯಾಂಕಿನಲ್ಲಿ ಅಕ್ರಮವಾಗಿ ಇಟ್ಟಿರುವ ಕಪ್ಪುಹಣದ ವಾರಸುದಾರರ ಹೆಸರುಗಳನ್ನು ಬಹಿರಂಗಪಡಿಸಲು ಸಾಧ್ಯವಿಲ್ಲ ಎಂದು ಕೇಂದ್ರ ಸರಕಾರ ಹೇಳಿದ್ದಕ್ಕೆ ಮೇಲಿನಂತೆ ಕೋರ್ಟ್ ಪ್ರತಿಕ್ರಿಯಿಸಿತು.

'ಭಾರತೀಯರು ಎಲ್ಲಾ ವಿದೇಶಿ ಬ್ಯಾಂಕುಗಳಲ್ಲಿ ಕೂಡಿಟ್ಟಿರುವ ಹಣದ ಕುರಿತು ಮಾಹಿತಿ ಬೇಕು ಎಂದು ಅರ್ಜಿದಾರರು ಕೇಳಿದ್ದಾರೆ. ಸಾರ್ವಜನಿಕ ಹಿತಾಸಕ್ತಿ ಹಿನ್ನೆಲೆಯಲ್ಲಿ ನಾವು ಇದನ್ನು ಕೇವಲ ಲೈಚೆನ್‌ಸ್ಟೈನ್ ಬ್ಯಾಂಕ್‌‌ಗೆ ಸೀಮಿತಗೊಳಿಸದೆ, ವಿಸ್ತಾರ ರೂಪದಲ್ಲಿ ನೋಡಬೇಕಾಗಿದೆ' ಎಂದು ಸುಪ್ರೀಂ ತನ್ನ ಅಭಿಪ್ರಾಯವನ್ನು ವ್ಯಕ್ತಪಡಿಸಿತು.

ನಾವು ಎಲ್ಲಾ ವಿದೇಶಗಳ ಜತೆ ಒಪ್ಪಂದಕ್ಕಾಗಿ ಸಮಾಲೋಚನೆ ನಡೆಸುತ್ತಿದ್ದೇವೆ ಎಂದಷ್ಟೇ ಇದಕ್ಕೆ ಕೇಂದ್ರ ಉತ್ತರಿಸಿತು.

ಅದೇ ಹೊತ್ತಿಗೆ, ಹಣಕಾಸು ಕಾರ್ಯದರ್ಶಿಯವರು (ಅಶೋಕ್ ಚಾವ್ಲಾ) ನೇರವಾಗಿ ಉತ್ತರಿಸುವ ಬದಲು ಅಧಿಕಾರಿಯೊಬ್ಬರ ಮೂಲಕ ಕೇಂದ್ರವು ಅಫಿಡವಿತ್ ಸಲ್ಲಿಸಿರುವುದಕ್ಕೆ ನ್ಯಾಯಾಲಯವು ಅಸಮಾಧಾನ ತೋರಿಸಿದೆ.
ಸಂಬಂಧಿತ ಮಾಹಿತಿ ಹುಡುಕಿ