ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಕೊಲೆಗಾರರ ಮೇಲೆ ಕೋಪವಿಲ್ಲ: ಮಿಷನರಿ ಪತ್ನಿ ಗ್ಲಾಡಿಸ್ (Gladys | Graham Staines | Dara Singh | India)
Bookmark and Share Feedback Print
 
ಹತ್ತು ವರ್ಷಗಳ ಹಿಂದೆ ನನ್ನ ಗಂಡ ಮತ್ತು ಇಬ್ಬರು ಮಕ್ಕಳನ್ನು ಕೊಂದು ಹಾಕಿದವರ ಮೇಲೆ ನನ್ನಲ್ಲೀಗ ಯಾವುದೇ ರೀತಿಯ ದ್ವೇಷ ಉಳಿದಿಲ್ಲ ಎಂದು ಆಸ್ಟ್ರೇಲಿಯಾದ ಮಿಷನರಿ ಗ್ರಹಾಂ ಸ್ಟೈನ್ಸ್ ವಿಧವಾ ಪತ್ನಿ ಗ್ಲಾಡಿಸ್ ಹೇಳಿಕೊಂಡಿದ್ದಾರೆ.

ನಾನು ಕ್ಷಮಾಗುಣವನ್ನು ಹೊಂದಿರುವ ಕಾರಣದಿಂದಾಗಿ, ನನ್ನ ಕುಟುಂಬವನ್ನು ಕೊಂದು ಹಾಕಿದ ವ್ಯಕ್ತಿಗಳ ಬಗ್ಗೆ ನನಗೆ ಯಾವುದೇ ರೀತಿಯ ಕೋಪವಿಲ್ಲ ಎಂದು 59ರ ಹರೆಯದ ಗ್ಲಾಡಿಸ್ ಇಮೇಲ್ ಮೂಲಕ ಸುದ್ದಿಸಂಸ್ಥೆಯೊಂದಕ್ಕೆ ತಿಳಿಸಿದ್ದಾರೆ.

ಸಂಬಂಧಪಟ್ಟ ಸುದ್ದಿಗಳು:
** ಹಿಂದೂಗಳ ಮತಾಂತರ; ಮಿಷನರಿಗಳ ವಿರುದ್ಧ ಸುಪ್ರೀಂ ಕಿಡಿ
** ಮಿಷನರಿ ಗ್ರಹಾಂ ಹತ್ಯೆ; ದಾರಾ ಸಿಂಗ್‌ಗೆ ಗಲ್ಲು ಶಿಕ್ಷೆಯಿಲ್ಲ

1999ರ ಜನವರಿ 22ರಂದು ಒರಿಸ್ಸಾದ ಕಿಯೋಂಜರ್ ಜಿಲ್ಲೆಯ ಮನೋಹರಪುರ ಗ್ರಾಮದಲ್ಲಿ ಚರ್ಚೊಂದರ ಹೊರಗಡೆ ಕಾರಿನಲ್ಲಿ ಮಲಗಿದ್ದ ಮಿಷನರಿ ಗ್ರಹಾಂ ಸ್ಟೈನ್ಸ್, ಅವರ ಇಬ್ಬರು ಮಕ್ಕಳಾದ ಫಿಲಿಪ್ (10) ಮತ್ತು ತಿಮೋತಿ (6) ಎಂಬವರನ್ನು ಹತ್ಯೆಗೈದ ಪ್ರಕರಣದಲ್ಲಿ ದಾರಾ ಸಿಂಗ್‌ ಮತ್ತು ಮಹೇಂದ್ರ ಹೇಂಬ್ರಮ್ ದೋಷಿಗಳೆಂದು ಸುಪ್ರೀಂ ಕೋರ್ಟ್ ಒಪ್ಪಿಕೊಂಡರೂ, ಈ ಅಪರಾಧ 'ಅಪರೂಪದಲ್ಲಿ ಅಪರೂಪದ ಪ್ರಕರಣ' ಆಗಿರದ ಕಾರಣ ಮರಣ ದಂಡನೆ ಶಿಕ್ಷೆ ನೀಡಲು ನಿರಾಕರಿಸಿ, ಹೈಕೋರ್ಟ್ ಪ್ರಕಟಿಸಿದ್ದ ಜೀವಾವಧಿ ಶಿಕ್ಷೆಯನ್ನು ಎತ್ತಿ ಹಿಡಿದ ನಂತರ ಗ್ಲಾಡಿಸ್ ಪ್ರತಿಕ್ರಿಯಿಸಿದ್ದಾರೆ.

ದ್ವೇಷ ಮತ್ತು ಹಿಂಸಾಚಾರವನ್ನು ನಿಯಂತ್ರಿಸಲು ಕ್ಷಮಾಶೀಲತೆಯ ಅಗತ್ಯವಿದೆ. ದೇವರು ಕ್ಷಮಿಸುತ್ತಾನೆ. ಆದರೆ ಪಾಪ ಕೃತ್ಯದ ಲೌಕಿಕ ಪರಿಣಾಮಗಳು ಮುಂದುವರಿಯುತ್ತವೆ. ತಪ್ಪು ಮಾಡಿರುವುದರ ಪರಿಣಾಮಗಳನ್ನು ಕ್ಷಮೆಯು ಬದಲಿಸದು. ಕ್ಷಮಾಶೀಲತೆ ಮತ್ತು ಪಾಪದ ಪರಿಣಾಮಗಳನ್ನು ಮಿಲಿತಗೊಳಿಸಬಾರದು ಎಂದು ಗ್ಲಾಡಿಸ್ ತನ್ನ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಕ್ಷಮಿಸಲಾಗಿದೆ ಎಂಬುದರ ಅರ್ಥ ಭಾರತದ ಸಾಮಾನ್ಯ ನ್ಯಾಯಾಂಗ ಪ್ರಕ್ರಿಯೆಯು ಮುಂದುವರಿಯಬಾರದು ಎಂದೂ ಅರ್ಥವಲ್ಲ ಎಂದು 2005ರಲ್ಲಿ ಭಾರತ ಸರಕಾರದಿಂದ ಪದ್ಮಶ್ರೀ ಪುರಸ್ಕಾರವನ್ನು ಪಡೆದುಕೊಂಡಿರುವ ಆಸ್ಟ್ರೇಲಿಯಾ ಪ್ರಜೆ ಹೇಳಿಕೊಂಡಿದ್ದಾರೆ.

ತನ್ನ ಮಗಳು ಮತ್ತು ತಂದೆಯೊಂದಿಗೆ ಪ್ರಸಕ್ತ ಆಸ್ಟ್ರೇಲಿಯಾದಲ್ಲಿರುವ ಅವರು, ಗ್ರಹಾಂ ಬಯಸಿದ್ದ ದೀನರ ಸೇವೆಯನ್ನು ಮುಂದುವರಿಸುವುದಾಗಿ ಭರವಸೆ ನೀಡಿದ್ದಾರೆ.

ಈ ನಡುವೆ ತನಗೆ ಮರಣ ದಂಡನೆಯನ್ನು ನಿರಾಕರಿಸಿರುವುದು ಮತ್ತು ಜೀವಾವಧಿ ಶಿಕ್ಷೆಯನ್ನು ಸುಪ್ರೀಂ ಕೋರ್ಟ್ ಖಚಿತಗೊಳಿಸಿರುವುದಕ್ಕೆ ಜೈಲಿನಿಂದ ದಾರಾ ಸಿಂಗ್ ಪ್ರತಿಕ್ರಿಯೆ ನೀಡಿದ್ದಾನೆ.

'ಜೀವಾವಧಿ ಶಿಕ್ಷೆಯನ್ನು ಸುಪ್ರೀಂ ಕೋರ್ಟ್ ಪ್ರಕಟಿಸಿರುವುದಾದರೆ, ನಾನು ಅದನ್ನು ಸ್ವೀಕರಿಸುತ್ತೇನೆ. ನಾನು ಅಮಾಯಕ ಎನ್ನುವುದು ನನ್ನ ಆತ್ಮಸಾಕ್ಷಿ ಹೇಳುತ್ತಿದೆ. ಆದರೆ ನ್ಯಾಯಾಲಯದ ಆದೇಶಕ್ಕೆ ತಲೆ ಬಾಗುತ್ತೇನೆ' ಎಂದು ದಾರಾ ಸಿಂಗ್ ಹೇಳಿದ್ದಾನೆ ಎಂದು ಜೈಲು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಕ್ಷಣ ಕ್ಷಣದ ತಾಜಾ ಸುದ್ದಿಗಳಿಗೆ, ವಿಶೇಷ ಸುದ್ದಿಗಳಿಗೆ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ
ಸಂಬಂಧಿತ ಮಾಹಿತಿ ಹುಡುಕಿ