ಕ್ರಿಮಿನಲ್ ಪ್ರಕರಣಗಳನ್ನು ಎದುರಿಸುತ್ತಿದ್ದ ಸಂತಾ ಸಿಂಗ್ ಛತ್ವಾಲ್, 'ಸಿಲ್ಲಿ' ನಟ ಸೈಫ್ ಆಲಿ ಖಾನ್, ಶರಣಾಗತನಾಗಿದ್ದ ಕಾಶ್ಮೀರ ಉಗ್ರ ಗುಲಾಂ ಮೊಹಮ್ಮದ್ ಮಿರ್ ಮುಂತಾದ ವಿವಾದಿತ ವ್ಯಕ್ತಿಗಳಿಗೆ ದೇಶದ ಅತ್ಯುನ್ನತ ಪದ್ಮ ಪ್ರಶಸ್ತಿಗಳನ್ನು 'ಹಂಚಿದ' ವರ್ಷ 2010. ಈ ವರ್ಷ ಯಾವ ಆಧ್ವಾನಗಳು ನಡೆಯಲಿವೆಯೋ ಗೊತ್ತಿಲ್ಲ, ಇದುವರೆಗೆ 1,303 ಮಂದಿಯ ಹೆಸರುಗಳನ್ನು ಸರಕಾರ ಸ್ವೀಕರಿಸಿದೆ.
ಅವರಲ್ಲಿ ದಿವಂಗತ ಪಂಡಿತ್ ಪುಟ್ಟರಾಜ ಗವಾಯಿ, ದಿವಂಗತ ವಿಷ್ಣುವರ್ಧನ್, ಬಾಳಪ್ಪ ಏಣಗಿ, ಗಿರೀಶ್ ಕಾಸರವಳ್ಳಿ, ದೇಜಗೌ ಮುಂತಾದವರೂ ಸೇರಿದಂತೆ ಒಟ್ಟಾರೆ ಕರ್ನಾಟಕದವರ ಸಂಖ್ಯೆ ಸರಿಸುಮಾರು 90.
ಜಯಂತಿ. ಬಿ., ಜಯಮಾಲ, ಡಾ. ಜಿ.ಎಸ್. ಶಿವರುದ್ರಪ್ಪ, ಗಿರೀಶ್ ಕಾಸರವಳ್ಳಿ, ಡಾ. ಎಂ. ಚಿದಾನಂದ ಮೂರ್ತಿ, ಪಾವಗಡ ಪ್ರಕಾಶ್ ರಾವ್, ಚಂದ್ರಶೇಖರ ಕಂಬಾರ, ಡಾ. ಎಲ್. ಬಸವರಾಜು, ಟಿ.ಜೆ.ಎಸ್. ಜಾರ್ಜ್, ಡಾ. ಎಂ. ಮೋಹನ್ ಆಳ್ವ, ಡಿ. ವೀರೇಂದ್ರ ಹೆಗ್ಗಡೆ, ಡಾ. ಜಿ. ಶಂಕರ್, ಕ್ರಿಸ್ ಗೋಪಾಲಕೃಷ್ಣ, ಡಾ. ಕೆ.ಎ. ಅಶೋಕ್ ಪೈ, ಅಜೀಮ್ ಪ್ರೇಮ್‌ಜಿ, ಡಾ. ಬಿ.ವಿ. ಆಚಾರ್ಯ ಮುಂತಾದ ಗಣ್ಯರು ಕೂಡ ಈ ಪಟ್ಟಿಯಲ್ಲಿದ್ದಾರೆ.
ವಿಷ್ಣುವರ್ಧನ್ ಅವರಿಗೆ ಮರಣೋತ್ತರವಾಗಿ ಕಳೆದ ವರ್ಷ ಪದ್ಮ ಪ್ರಶಸ್ತಿ ನೀಡಬೇಕೆಂಬ ಬೇಡಿಕೆಯಿತ್ತು. ಆದರೆ ಕೇಂದ್ರ ಇದನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ. ಈ ಬಾರಿ ಮತ್ತೆ ಅವರ ಹೆಸರನ್ನು ಪ್ರಶಸ್ತಿಗಾಗಿ ನಾಮಕರಣ ಮಾಡಲಾಗಿದೆ. ಪುಟ್ಟರಾಜ ಗವಾಯಿಯವರಿಗೆ ಪದ್ಮಭೂಷಣ ಸಿಕ್ಕಿದೆ. ಪದ್ಮವಿಭೂಷಣಕ್ಕಾಗಿ ಅವರ ಹೆಸರನ್ನು ರವಾನಿಸಲಾಗಿದೆ.
ಒಟ್ಟಾರೆ 1,303 ಹೆಸರುಗಳಲ್ಲಿ ಅತಿ ಹೆಚ್ಚು ನಾಮಕರಣಗೊಂಡಿರುವುದು ಸಮಾಜ ಸೇವೆ, ಆರೋಗ್ಯ ಮತ್ತು ವೈದ್ಯಕೀಯ, ವಿಜ್ಞಾನ ಮತ್ತು ಇಂಜಿನಿಯರಿಂಗ್ ವಿಭಾಗಗಳಲ್ಲಿ. ಇಬ್ಬರು ಮಾಜಿ ಮುಖ್ಯಮಂತ್ರಿಗಳ ಹೆಸರು (ರಮೇಶ್ ಪೋಖ್ರಿಯಾಲ್, ಗಿರಿಧರ್ ಗಮಾಂಗ್) ಕೂಡ ಪಟ್ಟಿಯಲ್ಲಿ ಸ್ಥಾನ ಪಡೆದಿದೆ.
ಬಾಲಿವುಡ್ ತಾರೆಗಳಾದ ಸಲ್ಮಾನ್ ಖಾನ್, ಜಯಪ್ರದಾ, ಪ್ರಿಯಾಂಕಾ ಛೋಪ್ರಾ, ಶಶಿಕಪೂರ್, ಬಪ್ಪಿ ಲಹಿರಿ, ಯೋಗಗುರು ಬಾಬಾ ರಾಮದೇವ್ ಮುಂತಾದವರು ಪಟ್ಟಿಯಲ್ಲಿದ್ದಾರೆ. ಈ ಪಟ್ಟಿಯಲ್ಲಿರುವವರು ಮಾತ್ರವಲ್ಲದೆ, ಪ್ರಶಸ್ತಿ ಸಮಿತಿಯು ಇನ್ನಿತರರ ಹೆಸರುಗಳನ್ನು ಕೂಡ ಸ್ವಯಂ ಪ್ರೇರಿತವಾಗಿ ಪ್ರಶಸ್ತಿಗೆ ಪರಿಗಣಿಸುವ ಅಧಿಕಾರವನ್ನು ಹೊಂದಿದೆ.
ಇವು ದೇಶದ ಉನ್ನತ ಪ್ರಶಸ್ತಿಗಳು... ಭಾರತ ಸರಕಾರವು ನಾಗರಿಕರಿಗೆ ನೀಡುವ ಪರಮೋಚ್ಚ ಗೌರವ ಭಾರತ ರತ್ನ. ನಂತರದ ಮೂರು ಸ್ಥಾನಗಳಲ್ಲಿ ಕ್ರಮವಾಗಿ ಪದ್ಮ ವಿಭೂಷಣ, ಪದ್ಮಭೂಷಣ, ಪದ್ಮಶ್ರೀ ಪ್ರಶಸ್ತಿಗಳಿವೆ.
ಇದುವರೆಗಿನ ಇತಿಹಾಸವನ್ನು ಗಮನಿಸಿದಾಗ ಭಾರತ ರತ್ನ ಲಭಿಸಿರುವುದು 41 ಮಂದಿಗೆ ಮಾತ್ರ. 264 ಗಣ್ಯರಿಗೆ ಪದ್ಮವಿಭೂಷಣ, 1111 ಮಂದಿಗೆ ಪದ್ಮಭೂಷಣ ಹಾಗೂ 2336 ಮಂದಿಗೆ ಪದ್ಮಶ್ರೀ ಪ್ರಶಸ್ತಿಗಳನ್ನು ದಯಪಾಲಿಸಲಾಗಿದೆ.
2011ರ ಪದ್ಮ ಪ್ರಶಸ್ತಿಗಳಿಗಾಗಿ (ಪದ್ಮ ವಿಭೂಷಣ, ಪದ್ಮಭೂಷಣ, ಪದ್ಮಶ್ರೀ) ನಾಮಕರಣಗೊಂಡಿರುವ ಕರ್ನಾಟಕದ ವಿವಿಧ ಕ್ಷೇತ್ರಗಳ ಗಣ್ಯರ ಹೆಸರುಗಳು ಇಂತಿವೆ.
ಕಲೆ: ಸಿನಿಮಾ, ನಟನೆ, ಸಂಗೀತ, ಸಂಸ್ಕೃತಿ * ಪಂಡಿತ್ ಡಾ. ಪುಟ್ಟರಾಜ್ ಗವಾಯಿ * ಬಾಳಪ್ಪ ಏಣಗಿ * ಡಾ. ವಿಷ್ಣುವರ್ಧನ್ * ಗಿರೀಶ್ ಕಾಸರವಳ್ಳಿ * ಜಯಂತಿ. ಬಿ. * ಡಾ. ಜಯಮಾಲ ರಾಮಚಂದ್ರ * ಈಶ್ವರಪ್ಪ ಗುರಪ್ಪ ಅಂಗಡಿ * ಪ್ರಬೋಧ್ ಚಂದ್ರ ಡೇ ಆಲಿಯಾಸ್ ಮನ್ನಾ ಡೇ * ವಿ.ಕೆ. ಮೂರ್ತಿ * ದಿವಂಗತ ವಿಲ್ಫಿ ರೆಬಿಂಬಸ್ * ರುದ್ರಪಟ್ನ ಕೃಷ್ಣ ಶಾಸ್ತ್ರಿ ಶ್ರೀಕಂಠನ್ * ಮಲ್ಲೇನಹಳ್ಳಿ ಆರ್. ಬಸಪ್ಪ * ಶ್ಯಾಮಲಾ ಜಿ. ಭಾವೆ * ಎಂ.ಬಿ. ಬುಡೆನ್‌ಸಾಬ್ * ಬಸವರಾಜು ಎಸ್. ಗೌಡ * ಬಸವೇ ಗೌಡ * ಹರಪ್ಪನಹಳ್ಳಿ ಕಮಲನಾಥ್ * ಬಾಲನ್ ನಂಬಿಯಾರ್ * ಸುಬ್ಬ ರಾವ್ ರಮಾನಾಥನ್ * ಮಾಯಾ ರಾವ್ * ಡಾ. ಆರ್. ಸತ್ಯನಾರಾಯಣ * ಬಸ್ತಿ ಸದಾಶಿವ ಶೆಣೈ * ಪಂಡಿತ್ ವಿನಾಯಕ ತೊರವಿ * ಪ್ರೊ. ಅಂದಾನಿ ವಿ.ಜಿ. * ಡಾ. ಪಂಡಿತ್ ನರಸಿಂಹಲು ವದಾವತಿ
ಸಾಹಿತ್ಯ-ಶಿಕ್ಷಣ: * ಡಾ. ಜಿ.ಎಸ್. ಶಿವರುದ್ರಪ್ಪ * ದೇಜಗೌ * ಡಾ. ಎಂ. ಚಿದಾನಂದ ಮೂರ್ತಿ * ಪಾವಗಡ ಪ್ರಕಾಶ್ ರಾವ್ * ಚಂದ್ರಶೇಖರ ಕಂಬಾರ * ಡಾ. ಎಲ್. ಬಸವರಾಜು * ಟಿ.ಜೆ.ಎಸ್. ಜಾರ್ಜ್ * ಡಾ. ಎಂ. ಮೋಹನ್ ಆಳ್ವ * ಸಿ.ವಿ. ಗೋಪಿನಾಥ್ * ಸಯ್ಯದ್ ಶಾ ಕುಸ್ರೊ ಹುಸೈನಿ * ಆರ್.ಪಿ. ಪ್ರಸನ್ನ ಕುಮಾರ್ * ಡಾ. ದೇವನೂರ ಮಹಾದೇವ್ * ಡಾ. ರಾಮದಾಸ್ ಮಾಧವ ಪೈ * ಲಕ್ಷ್ಮಿ ಪ್ರಿಯಾ ಎನ್ * ಎಚ್. ಶ್ರೀನಿವಾಸಯ್ಯ * ಎಸ್. ಶಮಾ ಸುಂದರ್ * ಡಾ. ವೆಂಕಟಾಚಾರ್ ಆಲಿಯಾಸ್ ಭಾಷ್ಯಂ ಸ್ವಾಮಿ * ಡಾ. ಎಚ್.ಜೆ. ಲೋಕಪ್ಪ ಗೌಡ * ಪ್ರೊ. ಅಬ್ದುಲ್ ಜಲೀಲ್ ಖಾನ್ ಎಂ. ಪಠಾಣ್
ಸಮಾಜ ಸೇವೆ: * ಡಿ. ವೀರೇಂದ್ರ ಹೆಗ್ಗಡೆ * ಡಾ. ಜಿ. ಶಂಕರ್ * ನಮಿತಾ ಚಾಂಡಿ * ಡಾ. ಪಿ. ಸದಾನಂದ ಮಯ್ಯ * ಡಾ. ದಯಾನಂದ ಪೈ * ಅನಿತಾ ರೆಡ್ಡಿ * ಚೊನಿರಾ ಮಿ. ತಿಮ್ಮಯ್ಯ * ಯಶೋಧಾ ವಿಠಲರಾವ್ ಗುಜ್ಜಾರ್ * ಡಾ. ವೂಡೇ ಪುಟ್ಟಯ್ಯ ಕೃಷ್ಣ * ಡಾ. ಹನುಮಪ್ಪ ಸುದರ್ಶನ್
ವಿಜ್ಞಾನ, ವೈದ್ಯಕೀಯ, ತಂತ್ರಜ್ಞಾನ: * ಡಾ. ಮೈಲಸ್ವಾಮಿ ಅಣ್ಣಾದೊರೈ * ಪ್ರೊ. ಎಂ. ಅಣ್ಣಾಮಲೈ * ಭಾಸ್ಕರ ನಾರಾಯಣ ಅಪ್ಪಣ್ಣ * ಕ್ರಿಸ್ ಗೋಪಾಲಕೃಷ್ಣ * ಪ್ರೊ. ಅಶೋಕ್ ಮಿಶ್ರಾ * ಡಾ. ಜಿತೇಂದ್ರ ಪ್ರಕಾಶ್ * ಡಾ. ಕೊಪ್ಪಿಲಿಲ್ ರಾಧಾಕೃಷ್ಣನ್ * ಪ್ರೊ. ಅಜಯ್ ಕೆ. ಸೂದ್ * ಎಚ್.ಸಿ. ತಿಮ್ಮಯ್ಯ * ಡಾ. ಕೆ.ವಿ. ದೇವಾಡಿಗ * ಪ್ರೊ. ಡಾ. ಚಂದ್ರಕಾಂತ್ ಕೊಕಾಟೆ * ಡಾ. ಪಿ. ಮೋಹನ್ ರಾವ್ * ಡಾ. ಮಿದ್ದೊಲ್ಲು ರಾಮಕೃಷ್ಣ ರೆಡ್ಡಿ * ಡಾ. ಕೆ. ಭುಜಂಗ ಶೆಟ್ಟಿ * ಡಾ. ಸಹಜಾನಂದ್ ಪ್ರಸಾದ್ ಸಿಂಗ್ * ಪ್ರೊ. ಖಡ್ಗ್ ಸಿಂಗ್ ವಲ್ದಿಯಾ * ಪ್ರೊ. ಹೆಬ್ಬಾಳಲು ರಾಮರಾವ್ * ಡಾ. ಮಹಿಪತಿ ಮಧ್ವಾಚಾರ್ಯ ಜೋಷಿ * ಪ್ರೊ. ಡಾ. ತಿರುಮಲಯ್ಯ ವೆಂಕಟ ಮರಿಯಪ್ಪ * ಡಾ. ಕೆ.ಎ. ಅಶೋಕ್ ಪೈ * ಡಾ. ಯು.ಎಸ್. ಕೃಷ್ಣ ನಾಯಕ್ * ಡಾ. ವಿಶ್ವನಾಥಪುರ ಪರಮೇಶ್ವರ * ಡಾ. ಕೆ.ಪಿ.ಆರ್. ಪ್ರಮೋದ್ * ಡಾ. ಗುರುರಾಜ್ ಬಿ. ಸತ್ತೂರ್ * ಅನಂತ್ ದರ್ಶನ್ ಶಂಕರ್ * ಡಾ. ಪಾಟೀಲ್ ಸಿದ್ದಲಿಂಗಪ್ಪ ಶಂಕರ್
ಇತರೆ ವಿಭಾಗಗಳಲ್ಲಿ: * ಡಾ. ಬಿ.ವಿ. ಆಚಾರ್ಯ - ಸಾರ್ವಜನಿಕ ವ್ಯವಹಾರ * ವಿಠಲರಾವ್ ಕೃಷ್ಣರಾವ್ ಯಾಲ್ಗಿ - ಸಾರ್ವಜನಿಕ ವ್ಯವಹಾರ * ಕರ್ನಲ್ ಜಾನ್ ವೇಕ್‌ಫೀಲ್ಡ್ - ಪ್ರವಾಸೋದ್ಯಮ * ಆರ್. ರಾಮಸ್ವಾಮಿ - ವ್ಯಾಪಾರ ಮತ್ತು ಕೈಗಾರಿಕೆ * ಟಿ.ವಿ. ಮೋಹನದಾಸ್ ಪೈ - ವ್ಯಾಪಾರ ಮತ್ತು ಕೈಗಾರಿಕೆ * ಅಜೀಮ್ ಪ್ರೇಮ್‌ಜಿ - ವ್ಯಾಪಾರ ಮತ್ತು ಕೈಗಾರಿಕೆ * ಎ.ಎಸ್. ಚಿನ್ನಸ್ವಾಮಿ ರಾಜು - ವ್ಯಾಪಾರ ಮತ್ತು ಕೈಗಾರಿಕೆ * ಕೆ. ಯತಿರಾಜ್ ವೆಂಕಟೇಶ್ - ಕ್ರೀಡೆ