ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಕನ್ನಡದ 11 ಮಂದಿಗೆ ಪದ್ಮ ಪ್ರಶಸ್ತಿ: ವಿಷ್ಣುವರ್ಧನ್‌ಗಿಲ್ಲ (Padma Awards | Sachin Tendulkar | Vishnuvardhan | Karnataka)
Bookmark and Share Feedback Print
 
ಗಣರಾಜ್ಯೋತ್ಸವ ಪ್ರಯುಕ್ತ ರಾಷ್ಟ್ರಪತಿಗಳ ಹೆಸರಿನಲ್ಲಿ ಪ್ರದಾನ ಮಾಡಲಾಗುವ ರಾಷ್ಟ್ರದ ಅತ್ಯುನ್ನತ ಪದ್ಮ ಪ್ರಶಸ್ತಿಗಳನ್ನು ಪ್ರಕಟಿಸಲಾಗಿದ್ದು, ವಿಪ್ರೋ ನಿರ್ಮಾತೃ ಅಜೀಮ್ ಪ್ರೇಮ್‌ಜೀ ಅವರಿಗೆ ಪದ್ಮ ವಿಭೂಷಣ, ಆರ್.ಕೆ. ಶ್ರೀಕಂಠನ್, ಕ್ರಿಸ್ ಗೋಪಾಲಕೃಷ್ಣನ್, ಟಿ.ಜೆ.ಎಸ್. ಜಾರ್ಜ್ ಅವರಿಗೆ ಪದ್ಮಭೂಷಣ ಹಾಗೂ ಗಿರೀಶ್ ಕಾಸರವಳ್ಳಿ, ದೇವನೂರು ಮಹಾದೇವ ಮುಂತಾದ ಕರ್ನಾಟಕದವರಿಗೆ ಪದ್ಮಶ್ರೀ ಘೋಷಿಸಲಾಗಿದೆ.

ಒಟ್ಟಾರೆ ಈ ಬಾರಿ ಕರ್ನಾಟಕಕ್ಕೆ ಸಂದಿರುವ ಪದ್ಮ ಪ್ರಶಸ್ತಿಗಳು 11. ಸಾಹಸಸಿಂಹ ಡಾ. ವಿಷ್ಣುವರ್ಧನ್ ಅವರಿಗೆ ಮರಣೋತ್ತರವಾಗಿ ಈ ಬಾರಿಯಾದರೂ ಪದ್ಮ ಪ್ರಶಸ್ತಿ ನೀಡಬಹುದು ಎಂಬ ನಿರೀಕ್ಷೆ ಸುಳ್ಳಾಗಿದೆ. ಅಲ್ಲದೆ, ಪದ್ಮಭೂಷಣ ಪುರಸ್ಕೃತರಾಗಿದ್ದ ಪಂಡಿತ್ ಪುಟ್ಟರಾಜ ಗವಾಯಿಯವರಿಗೆ ಪದ್ಮವಿಭೂಷಣ ನೀಡಬೇಕು ಎಂಬ ಶಿಫಾರಸನ್ನು ಕೂಡ ಕಡೆಗಣಿಸಲಾಗಿದೆ.

2010ರ ಸಾಲಿನ, 2011ರಲ್ಲಿ ಪ್ರದಾನ ಮಾಡಲಾಗುವ ಒಟ್ಟು ಪದ್ಮ ಪ್ರಶಸ್ತಿಗಳ ಸಂಖ್ಯೆ 128. ಅದರಲ್ಲಿ 13 ಪದ್ಮ ವಿಭೂಷಣ, 31 ಪದ್ಮಭೂಷಣ ಹಾಗೂ 84 ಪದ್ಮಶ್ರೀ ಪ್ರಶಸ್ತಿಗಳಿವೆ. ಒಟ್ಟಾರೆ ಪುರಸ್ಕೃತರಲ್ಲಿ 31 ಮಂದಿ ಮಹಿಳಾ ಗಣ್ಯರಿದ್ದಾರೆ. ಈ ಎಲ್ಲಾ ಪ್ರಶಸ್ತಿಗಳನ್ನು ಗಣರಾಜ್ಯೋತ್ಸವದ ದಿನವಾದ ಜನವರಿ 26ರಂದು ರಾಷ್ಟ್ರಪತಿಯವರು ಪ್ರದಾನ ಮಾಡಲಿದ್ದಾರೆ.

ಇಂದು ಘೋಷಿಸಲಾಗಿರುವ ಪದ್ಮ ಪ್ರಶಸ್ತಿಗಳ ಪುರಸ್ಕೃತರ ಹೆಸರನ್ನುಗಳನ್ನು ಕೆಳಗೆ ನೀಡಲಾಗಿದೆ. ಕರ್ನಾಟಕದ ಪುರಸ್ಕೃತರ ಹೆಸರುಗಳನ್ನು ಬೋಲ್ಡ್ ಮಾಡಲಾಗಿದೆ- ಗಮನಿಸಿ.

ಇವರಿಗೆ ಪದ್ಮವಿಭೂಷಣ:
* ಅಜೀಮ್ ಪ್ರೇಮ್‌ಜೀ, ಉದ್ಯಮ, ಕರ್ನಾಟಕ
* ಡಾ. ಕಪಿಲಾ ವಾತ್ಸಾಯನ, ಕಲೆ, ದೆಹಲಿ
* ಹೋಮೈ ವ್ಯಾರವಾಲ, ಛಾಯಾಗ್ರಹಣ, ಗುಜರಾತ್
* ಎ. ನಾಗೇಶ್ವರ ರಾವ್, ಸಿನಿಮಾ, ಆಂಧ್ರಪ್ರದೇಶ
* ಪರಾಶರನ್ ಕೇಶವ ಅಯ್ಯಂಗಾರ್, ಸಾರ್ವಜನಿಕ ವ್ಯವಹಾರ, ದೆಹಲಿ
* ಡಾ. ಅಖ್ಲಾಕ್ ಉರ್ ರೆಹಮಾನ್ ಕಿದ್ವಾಯಿ, ಸಾರ್ವಜನಿಕ ವ್ಯವಹಾರ, ದೆಹಲಿ
* ವಿಜಯ್ ಕೇಳ್ಕರ್, ಸಾರ್ವಜನಿಕ ವ್ಯವಹಾರ, ದೆಹಲಿ
* ಮಾಂಟೆಕ್ ಸಿಂಗ್ ಅಹ್ಲುವಾಲಿಯಾ, ಸಾರ್ವಜನಿಕ ವ್ಯವಹಾರ, ದೆಹಲಿ
* ಪಲ್ಲೆ ರಾಮ ರಾವ್, ವಿಜ್ಞಾನ, ಆಂಧ್ರಪ್ರದೇಶ
* ಬ್ರಿಜೇಶ್ ಮಿಶ್ರಾ, ಪೌರ ಸೇವೆ, ಮಧ್ಯಪ್ರದೇಶ
* ಪ್ರೊ. ಒಟ್ಟಾಪ್ಲಕ್ಕಾಲ್ ನೀಲಕಂಠನ್ ವೇಲು ಕುರುಪ್, ಸಾಹಿತ್ಯ-ಶಿಕ್ಷಣ, ಕೇರಳ
* ಡಾ. ಸೀತಾಕಾಂತ್ ಮಹಾಪಾತ್ರ, ಸಾಹಿತ್ಯ-ಶಿಕ್ಷಣ, ಒರಿಸ್ಸಾ
* ದಿವಂಗತ ಎಲ್.ಸಿ. ಜೈನ್, ಸಾರ್ವಜನಿಕ ವ್ಯವಹಾರ, ದೆಹಲಿ

ಪದ್ಮಭೂಷಣ ಪಡೆದವರು:
* ರುದ್ರಪಟ್ಣ ಆರ್.ಕೆ. ಶ್ರೀಕಂಠನ್, ಸಂಗೀತ, ಕರ್ನಾಟಕ
* ಕ್ರಿಸ್ ಗೋಪಾಲಕೃಷ್ಣನ್, ಉದ್ಯಮ, ಕರ್ನಾಟಕ
* ಟಿ.ಜೆ.ಎಸ್. ಜಾರ್ಜ್, ಶಿಕ್ಷಣ ಮತ್ತು ಸಾಹಿತ್ಯ, ಕರ್ನಾಟಕ
* ಡಾ. ರಾಮದಾಸ್ ಮಾಧವ್ ಪೈ, ಶಿಕ್ಷಣ ಮತ್ತು ಸಾಹಿತ್ಯ, ಕರ್ನಾಟಕ
* ಡಾ. ಎಸ್.ಪಿ. ಬಾಲಸುಬ್ರಮಣ್ಯಂ, ಗಾಯನ, ತಮಿಳುನಾಡು
* ಶಶಿ ಕಪೂರ್, ಸಿನಿಮಾ, ಮಹಾರಾಷ್ಟ್ರ
* ಚಂದ್ರಾ ಕೊಚ್ಚಾರ್, ಉದ್ಯಮ (ಐಸಿಐಸಿಐ), ಮಹಾರಾಷ್ಟ್ರ
* ಸತ್ಯದೇವ್ ದುಬೇ, ನಾಟಕ, ಮಹಾರಾಷ್ಟ್ರ
* ಮೊಹಮ್ಮದ್ ಜಹುರ್ ಖಯ್ಯಮ್ ಹಶ್ಮಿ, ಸಿನಿಮಾ, ಮಹಾರಾಷ್ಟ್ರ
* ಕ್ರಿಶನ್ ಖನ್ನಾ, ಚಿತ್ರಕಲೆ, ಹರ್ಯಾಣ
* ಮದವೂರು ವಾಸುದೇವನ್ ನಾಯರ್, ಕಥಕ್ಕಳಿ, ಕೇರಳ
* ವಹೀದಾ ರೆಹಮಾನ್, ಸಿನಿಮಾ, ಮಹಾರಾಷ್ಟ್ರ
* ಅರ್ಪಿತಾ ಸಿಂಗ್, ಚಿತ್ರಕಲೆ, ದೆಹಲಿ
* ಸಿ.ವಿ. ಚಂದ್ರಶೇಖರ್, ಭರತನಾಟ್ಯ, ತಮಿಳುನಾಡು
* ದ್ವಿಜೆನ್ ಮುಖರ್ಜಿ, ಕಲೆ, ಪಶ್ಚಿಮ ಬಂಗಾಲ
* ರಾಜಶ್ರೀ ಬಿರ್ಲಾ, ಸಮಾಜ ಸೇವೆ, ಮಹಾರಾಷ್ಟ್ರ
* ಶೋಭನಾ ರಾನಡೆ, ಸಮಾಜ ಸೇವೆ, ಮಹಾರಾಷ್ಟ್ರ
* ಡಾ. ಸೂರ್ಯನಾರಾಯಣನ್ ರಾಮಚಂದ್ರನ್, ವಿಜ್ಞಾನ, ತಮಿಳುನಾಡು
* ಯೋಗೇಶ್ ಚಂದರ್ ದೇವೇಶ್ವರ್, ಉದ್ಯಮ, ಪಶ್ಚಿಮ ಬಂಗಾಲ
* ಡಾ. ಕೆ. ಅಂಜಿ ರೆಡ್ಡಿ, ಉದ್ಯಮ, ಆಂಧ್ರಪ್ರದೇಶ
* ಅನಲ್ಜಿತ್ ಸಿಂಗ್, ಉದ್ಯಮ, ದೆಹಲಿ
* ರಾಜೇಂದ್ರ ಸಿಂಗ್ ಪವಾರ್, ಉದ್ಯಮ, ಹರ್ಯಾಣ
* ಡಾ. ಗುಣಪತಿ ವೆಂಕಟ ಕೃಷ್ಣ ರೆಡ್ಡಿ, ಉದ್ಯಮ, ಆಂಧ್ರಪ್ರದೇಶ
* ಅಜಯ್ ಚೌಧರಿ, ಉದ್ಯಮ, ದೆಹಲಿ
* ಸುರೇಂದ್ರ ಸಿಂಗ್, ಪೌರ ಸೇವೆ, ದೆಹಲಿ
* ಎಂ.ಎನ್. ಬುಚ್, ಪೌರ ಸೇವೆ, ಮಧ್ಯಪ್ರದೇಶ
* ಶ್ಯಾಮ್ ಶರಣ್, ಪೌರ ಸೇವೆ, ದೆಹಲಿ
* ಶಂಖ ಘೋಷ್, ಸಾಹಿತ್ಯ ಮತ್ತು ಶಿಕ್ಷಣ, ಪಶ್ಚಿಮ ಬಂಗಾಲ
* ಕೆ. ರಾಘವನ್ ತಿರುಮುಲ್ಪಾಡ್, ಆಯುರ್ವೇದ, ಕೇರಳ
* ಡಾ. ಕೇಕಿ ಭೈರಾಮ್ಜಿ ಗ್ರಂಥ್, ವೈದ್ಯಕೀಯ, ಮಹಾರಾಷ್ಟ್ರ
* ದಶರಥ ಪಟೇಲ್, ಕಲೆ, ಗುಜರಾತ್

ಪದ್ಮಶ್ರೀ ಪಡೆದವರು:
* ಗಿರೀಶ್ ಕಾಸರವಳ್ಳಿ, ಸಿನಿಮಾ, ಕರ್ನಾಟಕ
* ನಮಿತಾ ಚಾಂಡಿ, ಸಮಾಜ ಸೇವೆ, ಕರ್ನಾಟಕ
* ಅನಿತಾ ರೆಡ್ಡಿ, ಸಮಾಜ ಸೇವೆ, ಕರ್ನಾಟಕ
* ಅನಂತ ದರ್ಶನ ಶಂಕರ್, ಸಾರ್ವಜನಿಕ ವ್ಯವಹಾರ, ಕರ್ನಾಟಕ
* ಪ್ರೊ. ಎಂ. ಅಣ್ಣಾಮಲೈ, ವಿಜ್ಞಾನ ಮತ್ತು ತಂತ್ರಜ್ಞಾನ, ಕರ್ನಾಟಕ
* ಡಾ. ದೇವನೂರು ಮಹಾದೇವ, ಸಾಹಿತ್ಯ ಮತ್ತು ಶಿಕ್ಷಣ, ಕರ್ನಾಟಕ
* ತಬೂ, ಸಿನಿಮಾ, ಮಹಾರಾಷ್ಟ್ರ
* ಉಷಾ ಉತ್ತುಪ್, ಸಂಗೀತ, ಪಶ್ಚಿಮ ಬಂಗಾಲ
* ಕಾಜೋಲ್, ಸಿನಿಮಾ, ಮಹಾರಾಷ್ಟ್ರ
* ಇರ್ಫಾನ್ ಖಾನ್, ಸಿನಿಮಾ, ಮಹಾರಾಷ್ಟ್ರ
* ಎನ್. ಕುಂಜುರಾಣಿ ದೇವಿ, ವೇಟ್‌ಲಿಫ್ಟಿಂಗ್, ಮಣಿಪುರ
* ಸುಶೀಲ್ ಕುಮಾರ್, ಕುಸ್ತಿ, ದೆಹಲಿ
* ವಿವಿಎಸ್ ಲಕ್ಷ್ಮಣ್, ಕ್ರಿಕೆಟ್, ಆಂಧ್ರಪ್ರದೇಶ
* ಗಗನ್ ನಾರಂಗ್, ಶೂಟಿಂಗ್, ಆಂಧ್ರಪ್ರದೇಶ
* ಕೃಷ್ಣಾ ಪೂನಿಯಾ, ಡಿಸ್ಕಸ್ ತ್ರೋ, ರಾಜಸ್ತಾನ
* ನೀಲಂ ಮಾನ್‌ಸಿಂಗ್ ಚೌಧರಿ, ಕಲೆ, ಚಂಡೀಗಢ
* ಮಕರ ಧ್ವಜ ದರೋಗ್, ಕಲೆ, ಜಾರ್ಖಂಡ್
* ಶಾಜಿ ನೀಲಕಂಠನ್ ಕರುಣ್, ಸಿನಿಮಾ, ಕೇರಳ
* ಜಿವ್ಯ ಸೋಮ ಮಾಸೆ, ವಾರ್ಲಿ ಚಿತ್ರಕಲೆ, ಮಹಾರಾಷ್ಟ್ರ
* ಗುರು ಎಂ.ಕೆ. ಸರೋಜಾ, ಭರತನಾಟ್ಯ, ತಮಿಳುನಾಡು
* ಜಯರಾಮ್ ಸುಬ್ರಮಣ್ಯಮ್, ಸಿನಿಮಾ, ತಮಿಳುನಾಡು
* ಪಂಡಿತ್ ಅಜಯ್ ಚಕ್ರವರ್ತಿ, ಕಲೆ, ಪಶ್ಚಿಮ ಬಂಗಾಲ
* ಮಹಾಸುಂದರಿ ದೇವಿ, ಕಲೆ, ಬಿಹಾರ
* ಗಜಂ ಗೋವರ್ಧನ, ಕಲೆ, ಆಂಧ್ರಪ್ರದೇಶ
* ಸುನಯನ ಹಜರಿಲಾಲ್, ಕಥಕ್, ಮಹಾರಾಷ್ಟ್ರ
* ಎಸ್.ಆರ್. ಜಾನಕಿರಾಮನ್, ಕರ್ನಾಟಕ ಸಂಗೀತ, ತಮಿಳುನಾಡು
* ಪೆರುವನಮ್ ಕುಟ್ಟನ್ ಮಾರರ್, ಕಲೆ, ಕೇರಳ
* ಕಲಾಮಂಡಲಂ ಕ್ಷೇಮವತಿ ಪವಿತ್ರನ್, ಮೋಹಿನಿಯಾಟ್ಟಂ, ಕೇರಳ
* ದಾದಿ ದೊರಾಬ್ ಪುದುಮ್ಜೀ, ಕಲೆ, ದೆಹಲಿ
* ಕಂಗೆಂಬಮ್ ಮಂಗಿ ಸಿಂಗ್, ಕಲೆ, ಮಣಿಪುರ
* ಪ್ರಹ್ಲಾದ್ ಸಿಂಗ್ ತಿಪನಿಯಾ, ಕಲೆ, ಮಧ್ಯಪ್ರದೇಶ
* ಮಮ್ರಾಜ್ ಅಗರ್ವಾಲ್, ಸಮಾಜ ಸೇವೆ, ಪಶ್ಚಿಮ ಬಂಗಾಲ
* ಜಾಕಿನ್ ಅರ್ಪುತಮ್, ಸಮಾಜ ಸೇವೆ, ಮಹಾರಾಷ್ಟ್ರ
* ಶೀಲಾ ಪಟೇಲ್, ಸಮಾಜಸೇವೆ, ಮಹಾರಾಷ್ಟ್ರ
* ಕಾನುಭಾಯ್ ಹಂಸುಕಾಭಾಯ್, ಸಮಾಜ ಸೇವೆ, ಗುಜರಾತ್
* ಡಾ. ಮಹೇಶ್ ಹರಿಭಾಯ್ ಮೆಹ್ತಾ, ವಿಜ್ಞಾನ, ಗುಜರಾತ್
* ಕೊಯಂಬತ್ತೂರು ನಾರಾಯಣ ರಾವ್, ವಿಜ್ಞಾನ, ತಮಿಳುನಾಡು
* ಡಾ. ಸುಮನ್ ಸಹಾಯ್, ವಿಜ್ಞಾನ, ದೆಹಲಿ
* ಪ್ರೊ. ಇ.ಎ. ಸಿದ್ಧಿಕ್, ವಿಜ್ಞಾನ, ಆಂಧ್ರಪ್ರದೇಶ
* ಗೋಪಾಲನ್ ನಾಯರ್ ಶಂಕರ್, ವಿಜ್ಞಾನ, ಕೇರಳ
* ಮೆಕ್ಕಾ ರಫೀಕ್ ಅಹ್ಮದ್, ಉದ್ಯಮ, ತಮಿಳುನಾಡು
* ಕೈಲಾಸಂ ರಾಘವೇಂದ್ರ ರಾವ್, ಉದ್ಯಮ, ತಮಿಳುನಾಡು
* ನಾರಾಯಣ ಸಿಂಗ್ ಭಾಟಿ, ಪೌರ ಸೇವೆ, ಆಂಧ್ರಪ್ರದೇಶ
* ಪಿ.ಕೆ. ಸೇನ್, ಪೌರ ಸೇವೆ, ಬಿಹಾರ
* ಶೀತಲ್ ಮಹಾಜನ್, ಕ್ರೀಡೆ, ಮಹಾರಾಷ್ಟ್ರ
* ಹರಭಜನ್ ಸಿಂಗ್, ಪರ್ವತಾರೋಹಣ, ಪಂಜಾಬ್
* ಡಾ. ಪುಕ್ರಾಜ್ ಬಾಫ್ನಾ, ವೈದ್ಯಕೀಯ, ಛತ್ತೀಸ್‌ಗಢ
* ಪ್ರೊ. ಮನ್ಸೂರ್ ಹಸನ್, ವೈದ್ಯಕೀಯ, ಉತ್ತರ ಪ್ರದೇಶ
* ಡಾ. ಶ್ಯಾಮ್ ಪ್ರಸಾದ್ ಮಂಡಲ್, ವೈದ್ಯಕೀಯ, ದೆಹಲಿ
* ಶಿವಪಾದಂ ವಿಠಲ, ವೈದ್ಯಕೀಯ, ತಮಿಳುನಾಡು
* ಮದನೂರು ಅಹ್ಮದ್ ಆಲಿ, ವೈದ್ಯಕೀಯ, ತಮಿಳುನಾಡು
* ಡಾ. ಇಂದಿರಾ ಹಿಂದೂಜಾ, ವೈದ್ಯಕೀಯ, ಮಹಾರಾಷ್ಟ್ರ
* ಡಾ. ಜೋಸ್ ಚಾಕೋ ಪೆರಿಯಾಪುರಂ, ವೈದ್ಯಕೀಯ, ಕೇರಳ
* ಪ್ರೊ. ಎ. ಮಾರ್ತಾಂಡ ಪಿಳ್ಳೈ, ವೈದ್ಯಕೀಯ, ಕೇರಳ
* ಮಹೀಮ್ ಬೋರಾ, ಸಾಹಿತ್ಯ ಮತ್ತು ಶಿಕ್ಷಣ, ಅಸ್ಸಾಂ
* ಪ್ರೊ. ಪುಲ್ಲೇಲಾ ಶ್ರೀರಾಮ ಚಂದ್ರುಡು, ಸಾಹಿತ್ಯ ಮತ್ತು ಶಿಕ್ಷಣ, ಆಂಧ್ರಪ್ರದೇಶ
* ಡಾ. ಪ್ರವೀಣ್ ದರ್ಜಿ, ಸಾಹಿತ್ಯ ಮತ್ತು ಶಿಕ್ಷಣ, ಗುಜರಾತ್
* ಡಾ. ಚಂದ್ರ ಪ್ರಕಾಶ್ ದೇವಳ್, ಸಾಹಿತ್ಯ ಮತ್ತು ಶಿಕ್ಷಣ, ರಾಜಸ್ತಾನ
* ಬಾಲರಾಜ್ ಕೋಮಲ್, ಸಾಹಿತ್ಯ ಮತ್ತು ಶಿಕ್ಷಣ, ದೆಹಲಿ
* ರಜನಿ ಕುಮಾರ್, ಸಾಹಿತ್ಯ ಮತ್ತು ಶಿಕ್ಷಣ, ದೆಹಲಿ
* ಬರೂನ್ ಮಜುಂದಾರ್, ಸಾಹಿತ್ಯ ಮತ್ತು ಶಿಕ್ಷಣ, ಪಶ್ಚಿಮ ಬಂಗಾಲ
* ಡಾ. ಅವೈ ನಟರಾಜನ್, ಸಾಹಿತ್ಯ ಮತ್ತು ಶಿಕ್ಷಣ, ತಮಿಳುನಾಡು
* ಬಾಲಚಂದ್ರ ನೇಮಡೆ, ಸಾಹಿತ್ಯ ಮತ್ತು ಶಿಕ್ಷಣ, ಹಿಮಾಚಲ ಪ್ರದೇಶ
* ರಿಯಾಜ್ ಪಂಜಾಬಿ, ಸಾಹಿತ್ಯ ಮತ್ತು ಶಿಕ್ಷಣ, ಜಮ್ಮು-ಕಾಶ್ಮೀರ
* ಕೊನೆರು ರಾಮಕೃಷ್ಣ ರಾವ್, ಸಾಹಿತ್ಯ ಮತ್ತು ಶಿಕ್ಷಣ, ಆಂಧ್ರಪ್ರದೇಶ
* ಬೌಂಗಿ ಸೈಲೋ, ಸಾಹಿತ್ಯ ಮತ್ತು ಶಿಕ್ಷಣ, ಮಿಜೋರಾಂ
* ಪ್ರೊ. ದೇವಿ ದತ್ ಶರ್ಮಾ, ಸಾಹಿತ್ಯ ಮತ್ತು ಶಿಕ್ಷಣ, ಉತ್ತರಾಖಂಡ
* ನೀಲಾಂಬರ್ ದೇವ್ ಶರ್ಮಾ, ಸಾಹಿತ್ಯ ಮತ್ತು ಶಿಕ್ಷಣ, ಜಮ್ಮು-ಕಾಶ್ಮೀರ
* ಊರ್ವಶಿ ಬುಟಾಲಿಯಾ, ಸಾಹಿತ್ಯ ಮತ್ತು ಶಿಕ್ಷಣ, ದೆಹಲಿ
* ರೀತು ಮೆನನ್, ಸಾಹಿತ್ಯ ಮತ್ತು ಶಿಕ್ಷಣ, ದೆಹಲಿ
* ಪ್ರೊ. ಕೃಷ್ಣ ಕುಮಾರ್, ಸಾಹಿತ್ಯ ಮತ್ತು ಶಿಕ್ಷಣ, ದೆಹಲಿ
* ದೇವಿ ಪ್ರಸಾದ್ ದ್ವಿವೇದಿ, ಸಾಹಿತ್ಯ ಮತ್ತು ಶಿಕ್ಷಣ, ಉತ್ತರ ಪ್ರದೇಶ
* ಮಮಾಂಗ್ ದೈ, ಸಾಹಿತ್ಯ ಮತ್ತು ಶಿಕ್ಷಣ, ಅರುಣಾಚಲ ಪ್ರದೇಶ
* ಡಾ. ಓಂ ಪ್ರಕಾಶ್ ಅಗರ್ವಾಲ್, ಪರಂಪರೆ ಸಂರಕ್ಷಣೆ, ಉತ್ತರ ಪ್ರದೇಶ
* ಮಧುಕರ್ ಕೇಶವ್, ಪುರಾತತ್ವ, ಮಹಾರಾಷ್ಟ್ರ
* ಶಾಂತಿ ತೆರೆಸಾ ಲಾಕ್ರಾ, ನರ್ಸಿಂಗ್, ಅಂಡಮಾನ್
* ಗುಲ್ಶನ್ ನಂದಾ, ಕೈಮಗ್ಗ, ದೆಹಲಿ
* ಡಾ. ಆಜಾದ್ ಮೂಪೇನ್, ಸಮಾಜ ಸೇವೆ, ಯುಎಇ
* ಪ್ರೊ. ಉಪೇಂದ್ರ ಭಕ್ಷಿ, ಸಾರ್ವಜನಿಕ ವ್ಯವಹಾರ, ಬ್ರಿಟನ್
* ಡಾ. ಮಣಿಲಾಲ್ ಭೌಮಿಕ್, ವಿಜ್ಞಾನ, ಅಮೆರಿಕಾ
* ಡಾ. ಸುಬ್ರಾ ಸುರೇಶ್, ವಿಜ್ಞಾನ, ಅಮೆರಿಕಾ
* ಪ್ರೊ. ಕರ್ಲ್ ಹ್ಯಾರಿಂಗ್ಟನ್ ಪಾಟರ್, ಸಾಹಿತ್ಯ ಮತ್ತು ಶಿಕ್ಷಣ, ಅಮೆರಿಕಾ
* ಪ್ರೊ. ಮಾರ್ತಾ ಚೆನ್, ಸಮಾಜ ಸೇವೆ, ಅಮೆರಿಕಾ
* ಸತ್ಪಾಲ್ ಖಾತರ್, ಉದ್ಯಮ, ಸಿಂಗಾಪುರ
* ಗ್ರಾನ್‌ವಿಲ್ಲೆ ಆಸ್ಟಿನ್, ಸಾಹಿತ್ಯ ಮತ್ತು ಶಿಕ್ಷಣ, ಅಮೆರಿಕಾ

ಕರ್ನಾಟಕದ 21 ಪೊಲೀಸ್ ಅಧಿಕಾರಿಗಳು, ಕಾನ್ಸ್‌ಟೇಬಲ್‌ಗಳು, ಸೇನೆಯಲ್ಲಿರುವ ಅಧಿಕಾರಿಗಳಿಗೂ ಗಣರಾಜ್ಯೋತ್ಸವದ ಪ್ರಯುಕ್ತ ನೀಡಲಾಗುವ ಹಲವು ಪ್ರಶಸ್ತಿಗಳು ಸಂದಿವೆ. ಅವುಗಳನ್ನು ಕೆಳಗೆ ನೀಡಲಾಗಿದೆ.

ಮನಪರಿವರ್ತನೆಗಾಗಿನ ಪದಕ (Correctional Service)
* ಎಂ. ವೆಂಕಟಸ್ವಾಮಿ, ಬೆಂಗಳೂರು ಕೇಂದ್ರೀಯ ಕಾರಾಗೃಹ
* ಎಂ.ಸಿ. ವಿಶ್ವನಾಥಯ್ಯ, ಬೆಂಗಳೂರು ಕೇಂದ್ರೀಯ ಕಾರಾಗೃಹ

ರಾಷ್ಟ್ರಪತಿಗಳ ಪೊಲೀಸ್ ಶೌರ್ಯ ಪ್ರಶಸ್ತಿ (Gallantry Medal)
* ಶಂಕರ ಮಹಾದೇವ ಬಿದರಿ, ಪೊಲೀಸ್ ಉಪ ಮಹಾನಿರ್ದೇಶಕ
* ಕೆ.ಕೆ. ವಿಜಯ್ ಕುಮಾರ್, ಮೀಸಲು ಸಬ್ ಇನ್ಸ್‌ಪೆಕ್ಟರ್
* ಕುಂಜಲತ ರಮಾನಂದ್, ಪೊಲೀಸ್ ಕಾನ್ಸ್‌ಟೇಬಲ್
* ಜಿ.ಕೆ. ದಿಲೀಪ್ ಕುಮಾರ್, ಪೊಲೀಸ್ ಕಾನ್ಸ್‌ಟೇಬಲ್

ರಾಷ್ಟ್ರಪತಿಗಳ ಪೊಲೀಸ್ ವಿಶಿಷ್ಟ ಸೇವಾ ಪದಕ (Distinguished service)
* ಆಶಿತ್ ಮೋಹನ್ ಪ್ರಸಾದ್, ಕೆಎಸ್‌ಆರ್‌ಪಿ
* ವಿ.ಎಸ್. ಡಿಸೋಜಾ, ಗುಪ್ತಚರ ವಿಭಾಗ

ಶ್ಲಾಘನೀಯ ಸೇವಾ ಪದಕ (Meritorious Service)
* ಬಿ. ದಯಾನಂದ, ರಾಜ್ಯ ಗುಪ್ತಚರ ವಿಭಾಗ
* ಅಮೃತ್ ಪೌಲ್, ನಕ್ಸಲ್ ವಿರೋಧಿ ಪಡೆ
* ಜೆ. ಅರ್ಜುನ್ ಚಕ್ರವರ್ತಿ, ಬಿಎಂಟಿಸಿ
* ಟಿ.ಜಿ. ಕೃಷ್ಣ ಭಟ್, ಬೆಂಗಳೂರು ಡಿಸಿಪಿ
* ಬಿ. ಚಂದ್ರಮೋಹನ್ ಸಿಂಗ್, ಗುಪ್ತಚರ
* ಶಿವಲಿಂಗಪ್ಪ, ಗೃಹರಕ್ಷಕ ದಳ
* ಬಿ. ಜಯ ಭಂಡಾರಿ, ಡಿಸಿಆರ್‌ಬಿ, ಮಂಗಳೂರು
* ಎಂ. ಕೃಷ್ಣಪ್ಪ, ಮೆಸ್ಕಾಂ, ಮಂಗಳೂರು
* ಎಂ. ಶಂಕರಪ್ಪ, ಸಿಐಡಿ, ಬೆಂಗಳೂರು
* ಎನ್. ರುದ್ರಮುನಿ, ಹಿರಿಯೂರು
* ಎನ್.ಟಿ. ಪ್ರಮೋದ್ ರಾವ್, ಸಿಎಸ್‌ಪಿಎಸ್, ಕುಮಟಾ
* ಮೊಹಮ್ಮದ್ ಬುಡಾನ್, ಗುಪ್ತಚರ ವಿಭಾಗ
* ಎಸ್.ಕೆ. ತಮ್ಮಣ್ಣ ಶಾಸ್ತ್ರಿ, ಗುಪ್ತಚರ ವಿಭಾಗ
* ಎಲ್. ಪುಟ್ಟಸ್ವಾಮಿ, ಡಿಜಿಸಿಆರ್ ಸಬ್‌ಇನ್ಸ್‌ಪೆಕ್ಟರ್
* ಎ.ವಿ. ಪ್ರಕಾಶ್, ಡಿಜಿಸಿಆರ್ ಸಬ್‌ಇನ್ಸ್‌ಪೆಕ್ಟರ್

ಸೇನಾ ಶೌರ್ಯ ಪ್ರಶಸ್ತಿ
* ಲೆ.ಜ. ಬಾಲಚಂದ್ರ ಕುಟ್ಟಪ್ಪ ಚೆಂಗಪ್ಪ - ಪರಮ ವಿಶಿಷ್ಟ ಸೇವಾ ಪದಕ
* ಮೇ.ಜ. ನಿತಿನ್ ಕುಮಾರ್ ಕೋಹ್ಲಿ - ವಿಶಿಷ್ಟ ಸೇವಾ ಪದಕ

ಇದನ್ನೂ ಓದಿ: 2010ರ ಪದ್ಮ ಪ್ರಶಸ್ತಿ ಪಟ್ಟಿಗೆ ಇಲ್ಲಿ ಕ್ಲಿಕ್ ಮಾಡಿ...
ಸಂಬಂಧಿತ ಮಾಹಿತಿ ಹುಡುಕಿ