ಪ್ರಶ್ನೆ: ಡಿಜಿಪಿ ಮತ್ತು ಸಿಪಿ ಅವರು ಹಿಂಸಾಚಾರ ಪರಿಸ್ಥಿತಿಯ ಮೇಲ್ವಿಚಾರಣೆ ನಡೆಸಬೇಕಾದ ಬದಲಿಗೆ, ನಿಮ್ಮ ಸಂಪುಟದ ಸಚಿವರಾಗಿದ್ದ ಅಶೋಕ್ ಭಟ್ ಮತ್ತು ಐ.ಕೆ. ಜಡೇಜಾ ಅವರನ್ನು ರಾಜ್ಯ ಪೊಲೀಸ್ ನಿಯಂತ್ರಣ ಕೊಠಡಿ ಮತ್ತು ಅಹಮದಾಬಾದ್ ನಗರ ಪೊಲೀಸ್ ನಿಯಂತ್ರಣ ಕೊಠಡಿಯಲ್ಲಿ ಕೂರಿಸಲು ನಿರ್ಧಾರ ತೆಗೆದುಕೊಂಡಿದ್ದಿರಾ?
ಉತ್ತರ: ಅಂತಹಾ ಯಾವುದೇ ನಿರ್ಧಾರಗಳನ್ನು ತೆಗೆದುಕೊಂಡಿರಲಿಲ್ಲ ಮತ್ತು ಆ ರೀತಿಯ ಚರ್ಚೆಗಳು ಸಭೆಯಲ್ಲಿ ನಡೆದಿಲ್ಲ. ಆ ಆರೋಪ ನನ್ನ ಗಮನಕ್ಕೆ ಬಂದದ್ದು ಮಾಧ್ಯಮಗಳ ಮೂಲಕ. ಪೊಲೀಸ್ ನಿಯಂತ್ರಣ ಕೊಠಡಿಗಳಲ್ಲಿ ಇಬ್ಬರು ಸಚಿವರನ್ನು ನಿಯೋಜನೆಗೊಳಿಸಿದ ಬಗ್ಗೆ ನನ್ನಲ್ಲಿ ಯಾವುದೇ ವೈಯಕ್ತಿಕ ಮಾಹಿತಿಯಿಲ್ಲ.
*** *** *** ***
ಪ್ರಶ್ನೆ: ಗುಲ್ಬರ್ಗಾ ಸೊಸೈಟಿ ಮೇಲಿನ ಗುಂಪೊಂದರ ದಾಳಿ ಕುರಿತ ಮಾಹಿತಿ ನೀವು ಸ್ವೀಕರಿಸಿದ್ದೀರಾ? ಹೌದೆಂದಾದರೆ, ಯಾವಾಗ ಮತ್ತು ಯಾರ ಮೂಲಕ? ನೀವು ಈ ಸಂಬಂಧ ಯಾವ ಕ್ರಮ ತೆಗೆದುಕೊಂಡಿದ್ದೀರಿ?
ಉತ್ತರ: ಗುಲ್ಬರ್ಗಾ ಸೊಸೈಟಿ ಮೇಲೆ ದಾಳಿ ನಡೆದ ದಿನ ರಾತ್ರಿ ಕಾನೂನು ಸುವ್ಯವಸ್ಥೆ ಪರಾಮರ್ಶೆ ಸಭೆಯಲ್ಲಿ ನನಗೆ ಈ ಬಗ್ಗೆ ಮಾಹಿತಿ ನೀಡಲಾಯಿತು.
*** *** *** ***
ಪ್ರಶ್ನೆ: ನಮಗೆ ಮಾಜಿ ಸಂಸದ ಎಹ್ಸಾನ್ ಜಾಫ್ರಿ ಗೊತ್ತಿದ್ದರೇ? ಅವರು ಸಹಾಯಕ್ಕಾಗಿ ನಿಮಗೆ ದೂರವಾಣಿ ಕರೆ ಮಾಡಿದ್ದರೇ? ಮಾಡಿದ್ದರೆ, ನೀವು ಯಾವ ಕ್ರಮ ಕೈಗೊಂಡಿದ್ದೀರಿ?
ಉತ್ತರ: ಅವರ ಬಗ್ಗೆ ನನಗೇನೂ ಗೊತ್ತಿರಲಿಲ್ಲ. ಆದರೆ ಅವರು ಸಂಸದರಾಗಿದ್ದರು ಮತ್ತು ಗುಲ್ಬರ್ಗಾ ಸೊಸೈಟಿ ದಾಳಿಯಲ್ಲಿ ಸಾವನ್ನಪ್ಪಿದರು ಎಂದು ನಂತರ ನನಗೆ ತಿಳಿದು ಬಂತು. ಈ ಸಂಬಂಧ ನನಗೆ ಯಾವುದೇ ದೂರವಾಣಿ ಕರೆ ಬಂದಿರಲಿಲ್ಲ. ಯಾರೊಂದಿಗೂ ಮಾತನಾಡಿರಲಿಲ್ಲ.