ಪ್ರಶ್ನೆ: 'ಕೋಮುಗಲಭೆಗಳಲ್ಲಿ ಹಿಂದೂಗಳು ಮತ್ತು ಮುಸ್ಲಿಮರ ವಿರುದ್ಧ ಒಂದಾದ ನಂತರ ಒಂದರಂತೆ ಕ್ರಮ ಕೈಗೊಳ್ಳಲಾಗುತ್ತದೆ. ಆದರೆ ಇಲ್ಲಿ ಇದು ನಡೆಯಬಾರದು. ಹಿಂದೂಗಳಿಗೆ ತಮ್ಮ ಕೋಪವನ್ನು ಪ್ರದರ್ಶಿಸಲು ಅವಕಾಶ ನೀಡಬೇಕು' ಎಂದು ಪೊಲೀಸ್ ಅಧಿಕಾರಿಗಳು ಮತ್ತು ಗೃಹ ಸಚಿವಾಲಯಕ್ಕೆ ನೀವು ಹೇಳಿದ್ದಿರಾ? ಹಾಗೆ ಹೇಳಿದ್ದೇ ಹೌದಾದರೆ, ಆ ಸಭೆಯಲ್ಲಿ ಭಾಗವಹಿಸಿದ್ದ ಪೊಲೀಸ್ ಅಧಿಕಾರಿಗಳು ಮತ್ತು ಗೃಹ ಸಚಿವಾಲಯದ ಅಧಿಕಾರಿಗಳ ಪ್ರತಿಕ್ರಿಯೆ ಏನಾಗಿತ್ತು?
ಉತ್ತರ: ಇದು ಆಧಾರ ರಹಿತ ಆಪಾದನೆ. ಏನೇ ಆದರೂ, ಶಾಂತಿ ಮತ್ತು ಕೋಮು ಸೌಹಾರ್ದತೆಯನ್ನು ಕಾಪಾಡಬೇಕು ಎಂದು ನಾನು ಸ್ಪಷ್ಟವಾಗಿ ಸೂಚನೆಗಳನ್ನು ನೀಡಿದ್ದೆ. ಈ ಮನವಿಯನ್ನು ಗೋದ್ರಾದ ಜನತೆಗೆ ಮಾಧ್ಯಮಗಳ ಮೂಲಕವೂ ಮಾಡಲಾಗಿತ್ತು.
*** *** *** ***
ಪ್ರಶ್ನೆ: 28-02-2002 ಮತ್ತು 01-03-2002ರಂದು ಗುಜರಾತ್ ಬಂದ್‌ಗೆ ಕರೆ ನೀಡಿದ್ದು ಯಾರು? ಆಡಳಿತ ಪಕ್ಷದ ಬೆಂಬಲಿಗರು ಈ ಬಂದ್ ಅನ್ನು ಬೆಂಬಲಿಸಿದ್ದರೇ?
ಉತ್ತರ: 27-02-2002ರಂದು ನಾನು ಇಡೀ ದಿನ ಗೋದ್ರಾ ಭೇಟಿಯಲ್ಲಿ ತಲ್ಲೀನನಾಗಿದ್ದೆ. ಮರುದಿನದ ಬಂದ್‌ಗೆ ವಿಶ್ವ ಹಿಂದೂ ಪರಿಷತ್ ಕರೆ ನೀಡಿದೆ ಎಂದು ನನಗೆ ತಿಳಿದದ್ದೇ ಆ ದಿನ ರಾತ್ರಿ. ಈ ಬಂದ್ ಅನ್ನು ಬಿಜೆಪಿ ಬೆಂಬಲಿಸಿತ್ತು ಎನ್ನುವುದು ನನಗೆ ಗೊತ್ತಾದದ್ದು 28-02-2002ರಂದು.