ಪ್ರಶ್ನೆ: ಗೋದ್ರೋತ್ತರ ಹಿಂಸಾಚಾರದ ಬಗ್ಗೆ ಮಾತನಾಡುತ್ತಾ, 'ಪ್ರತಿಯೊಂದು ಕ್ರಿಯೆಗೂ ಸಮಾನವಾದ ಮತ್ತು ವಿರುದ್ಧವಾದ ಪ್ರತಿಕ್ರಿಯೆ ಇರುತ್ತದೆ. ಇದು ನ್ಯೂಟನ್ ನಿಯಮ' ಎಂದು ನೀವು ಹೇಳಿಕೆಯೊಂದನ್ನು ನೀಡಿದ್ದಿರಿ. ಇದನ್ನು 'ಟೈಮ್ಸ್ ಆಫ್ ಇಂಡಿಯಾ' ಪತ್ರಿಕೆ ಪ್ರಕಟಿಸಿದೆ.
ಉತ್ತರ: ವಾಸ್ತವ ವಿಚಾರವೆಂದರೆ 'ಟೈಮ್ಸ್ ಆಫ್ ಇಂಡಿಯಾ' ಪತ್ರಿಕೆಯ ಯಾರೊಬ್ಬರೂ ನನ್ನನ್ನು ಭೇಟಿಯಾಗಿರಲಿಲ್ಲ. ನನ್ನ ತಥಾಕಥಿತ ಕ್ರಿಯೆ-ಪ್ರತಿಕ್ರಿಯೆಗಳು ಸ್ಪಷ್ಟವಾಗಿ ಸುಳ್ಳು ಸಿದ್ಧಾಂತ. ನಾನು ಅಂತಹ ಸಂದರ್ಶನವನ್ನು ನೀಡಿಲ್ಲ ಎಂದು ರಾಜ್ಯ ಸರಕಾರವೇ ನಿರಾಕರಿಸಿತ್ತು. ಈ ಸ್ಪಷ್ಟನೆಯನ್ನು ತುಂಬಾ ತಡವಾಗಿ ಪತ್ರಿಕೆಯು ಮೂಲೆಯೊಂದರಲ್ಲಿ ಪ್ರಕಟಿಸಿತ್ತು.
*** *** *** ***
ಪ್ರಶ್ನೆ: 2002ರಲ್ಲಿ ಅಯೋಧ್ಯೆಯಲ್ಲಿ ವಿಶ್ವ ಹಿಂದೂ ಪರಿಷತ್ ನಡೆಸಲಿದೆ ಎಂದು ಪ್ರಸ್ತಾಪಿಸಲಾಗಿದ್ದ ರಾಮ ಮಹಾಯಜ್ಞ ಕುರಿತು ಗುಜರಾತ್ ಗುಪ್ತಚರ ವಿಭಾಗವು ಸಂಗ್ರಹಿಸಿದ ಮಾಹಿತಿಗಳೇನು?
ಉತ್ತರ: ನಾನು ಗುಜರಾತ್ ಮುಖ್ಯಮಂತ್ರಿಯಾಗಿದ್ದು 2001ರ ಅಕ್ಟೋಬರ್ ತಿಂಗಳಲ್ಲಿ. ಅದಕ್ಕೂ ಮೊದಲು ನಾನು ಪಕ್ಷದಲ್ಲಿ ಸೇವೆ ಸಲ್ಲಿಸುತ್ತಿದ್ದೆ. ರಾಮ ಮಹಾಯಜ್ಞದ ಕುರಿತು ಹೇಳುವುದಾದರೆ, ಇಂತಹ ಗುಪ್ತಚರ ಮಾಹಿತಿಗಳನ್ನು ಸ್ವೀಕರಿಸುವುದು ಡಿಜಿಪಿ ಮತ್ತು ಗೃಹ ಸಚಿವಾಲಯದ ಎಸಿಎಸ್‌ಗಳು.
ಅಯೋಧ್ಯೆಯಲ್ಲಿನ ರಾಮ ಮಹಾಯಜ್ಞಕ್ಕಾಗಿ ಗುಜರಾತಿನಿಂದ ಕೆಲವು ರಾಮಸೇವಕರು ತೆರಳಲಿದ್ದಾರೆ ಎಂಬುದು ನನಗೆ ತಿಳಿದು ಬಂತು. ಆದರೆ ಆ ಕುರಿತ ವಿವರಗಳು ನನಗೆ ತಿಳಿದಿರಲಿಲ್ಲ. ಬಂದೋಬಸ್ತ್ ಮಾಡುವುದು ಪೊಲೀಸ್ ಮತ್ತು ಗೃಹ ಸಚಿವಾಲಯದ ಕರ್ತವ್ಯ.
*** *** *** ***
ಪ್ರಶ್ನೆ: ಗೋದ್ರಾ ಘಟನೆಯು ಪೂರ್ವ ನಿಯೋಜಿತ ಮತ್ತು ಇದರಲ್ಲಿ ಪಾಕಿಸ್ತಾನ ಅಥವಾ ಐಎಸ್ಐ ಕೈವಾಡವಿದೆ ಎಂದು ನೀವು ಹೇಳಿದ್ದೀರಾ? ಹೇಳಿದ್ದರೆ ಯಾವ ಆಧಾರದಲ್ಲಿ?
ಉತ್ತರ: ನಾನು ಯಾವುದೇ ಶಬ್ಧಗಳನ್ನು ನಾನು ವಿಧಾನಸಭೆಯಲ್ಲಿ ಹೇಳಿಲ್ಲ. ಈ ಬಗ್ಗೆ ಮಾಧ್ಯಮಗಳು ನನ್ನಲ್ಲಿ ಪ್ರಶ್ನಿಸಿದ್ದವು. ಆದರೆ ತನಿಖೆ ನಡೆಯದ ಹೊರತು ಏನೂ ಹೇಳಲು ಸಾಧ್ಯವಿಲ್ಲ ಎಂದು ನಾನು ಹೇಳಿದ್ದೆ.