ಪ್ರಶ್ನೆ: 'ಇದು ಕ್ರಿಯೆ ಮತ್ತು ಪ್ರತಿಕ್ರಿಯೆಗಳು ಸಾಗುತ್ತಾ ಇರುತ್ತವೆ. ತಡೆ ಹಾಕಲು ನಮಗೆ ಕ್ರಿಯೆ ಮತ್ತು ಪ್ರತಿಕ್ರಿಯೆ ಎರಡರ ಅಗತ್ಯವೂ ಇದೆ' ಎಂದು ನೀವು 2002ರ ಮಾರ್ಚ್ 1ರಂದು ಜೀ ಟಿವಿಗೆ ನೀಡಿರುವ ಸಂದರ್ಶನದಲ್ಲಿ ಹೇಳಿದ್ದೀರಿ.
ಅಲ್ಲದೆ, 'ಗೋದ್ರಾ ಘಟನೆಯು ಭಾರತ ಮತ್ತು ವಿದೇಶಗಳಿಗೆ ಬಹುದೊಡ್ಡ ಆಘಾತವಾಗಿ ಪರಿಣಮಿಸಿದೆ. ಈ ಗೋದ್ರಾ ಪ್ರಾಂತ್ಯದವರು ಕ್ರಿಮಿನಲ್ ಪ್ರವೃತ್ತಿಯುಳ್ಳವರು ಮತ್ತು ಈ ಹಿಂದೆ ಮಹಿಳಾ ಶಿಕ್ಷಕಿಯರನ್ನು ಕೊಂದಿರುವವರು. ಈಗ ಅವರು ಇಂತಹ ಕ್ರೂರ ಕೃತ್ಯ ಎಸಗಿದ್ದಾರೆ. ಅದಕ್ಕೀಗ ಪ್ರತಿಕ್ರಿಯೆ ಕಂಡು ಬರುತ್ತಿದೆ' ಎಂದು ಆ ಸಂದರ್ಶನದಲ್ಲಿ ನೀವು ತಿಳಿಸಿದ್ದೀರಿ. ದಯವಿಟ್ಟು ಇದನ್ನು ವಿವರಿಸಿ.
ಉತ್ತರ: ಗುಜರಾತ್ ಇತಿಹಾಸವನ್ನು ಓದಿದ ಮಂದಿಗೆ ಈ ರಾಜ್ಯದ ಸುದೀರ್ಘ ಕೋಮುಗಲಭೆಯ ಇತಿಹಾಸದ ಬಗ್ಗೆ ಖಂಡಿತಾ ಅರಿವು ಇರುತ್ತದೆ. ಸಾಕಷ್ಟು ವರ್ಷಗಳಿಂದ, ನಾನು ಹುಟ್ಟಿದ ನಂತರವೂ ಗುಜರಾತ್ ಇಂತಹ ಹಿಂಸಾಚಾರಗಳ ಸರಣಿಗಳಿಗೆ ಸಾಕ್ಷಿಯಾಗಿದೆ.
ನೀವು ಕೇಳಿರುವ ಜೀ ಟಿವಿ ಸಂದರ್ಶನದ (2002ರ ಮಾರ್ಚ್ 1) ಕುರಿತು ಹೇಳುವುದಾದರೆ, ಅದು ನಡೆದು ಎಂಟು ವರ್ಷಗಳೇ ಕಳೆದಿವೆ. ನಾನು ಏನು ಹೇಳಿದ್ದೆ ಎಂಬುದನ್ನು ಖಚಿತವಾಗಿ ಈಗ ನೆನಪಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಆದರೆ ನಾನು ಶಾಂತಿ ಮತ್ತು ಕೇವಲ ಶಾಂತಿಗಾಗಿ ಮನವಿ ಮಾಡಿಕೊಂಡದ್ದಂತೂ ಹೌದು. ಜನತೆ ಹಿಂಸಾಚಾರದಿಂದ ದೂರ ಉಳಿಯಬೇಕು ಮತ್ತು ಸಭ್ಯ ಭಾಷೆಯನ್ನು ಬಳಸಬೇಕು ಎಂದು ಮನ ಒಲಿಸಲು ನಾನು ಯತ್ನಿಸಿದ್ದೆ.
*** *** *** ***
ಪ್ರಶ್ನೆ: ಸೊಹ್ರಾದ್ದೀದ್ದೀನ್ ಶೇಖ್ ಎನ್‌ಕೌಂಟರ್ ನಡೆದ ತಿಂಗಳ ನಂತರ, ಅಂದರೆ 04-12-2007ರಂದು ಸಾರ್ವಜನಿಕ ಸಮಾರಂಭವೊಂದನ್ನು ಉದ್ದೇಶಿಸಿ ಮಾತನಾಡುತ್ತಿದ್ದ ನೀವು, 'ಸೊಹ್ರಾಬುದ್ದೀನ್‌ನನ್ನು ನಾನು ಏನು ಮಾಡಬೇಕಿತ್ತು?' ಎಂದು ಜನರಲ್ಲಿ ಪ್ರಶ್ನಿಸಿದಿರಿ. ಆಗ ಜನ, 'ಕೊಲ್ಲಬೇಕಿತ್ತು' ಎಂದರು. ಆಗ ನೀವು, 'ಅದಕ್ಕಾಗಿ ನನ್ನ ಪೊಲೀಸರು ಸೋನಿಯಾ ಗಾಂಧಿಯ ಅನುಮತಿ ಪಡೆಯಬೇಕಿತ್ತೇ?' ಎಂದು ಮತ್ತೆ ಪ್ರಶ್ನಿಸಿದಿರಿ.