ಸಾವಿರ ಕೋಟಿ ಒಡೆಯ ಬಾಬಾ... 'ಸ್ಟಾರ್ ನ್ಯೂಸ್' ವಾರ್ತಾವಾಹಿನಿ ವರದಿಯ ಪ್ರಕಾರ ಬಾಬಾ ರಾಮದೇವ್ ಹೊಂದಿರುವ ಒಟ್ಟು ಆಸ್ತಿ 1,152 ಕೋಟಿ ರೂಪಾಯಿ.
ಅವರು ಹರಿದ್ವಾರದಲ್ಲಿ 1,000 ಎಕರೆ ಜಮೀನು ಹೊಂದಿದ್ದಾರೆ. ಇದರ ಅಂದಾಜು ಮೌಲ್ಯ 300 ಕೋಟಿ ರೂ. ಸುಮಾರು 100 ಎಕರೆ ವಿಸ್ತಾರದಲ್ಲಿನ ಆಶ್ರಮವೀಗ 100 ಕೋಟಿ ತೂಗುತ್ತಿದೆ.
ಹರಿದ್ವಾರದಲ್ಲೇ ರಾಮದೇವ್ ನಿರ್ಮಿಸಿರುವ ಫುಡ್ ಪಾರ್ಕ್‌ಗೆ 500 ಕೋಟಿ ವೆಚ್ಚ ಮಾಡಲಾಗಿದೆ. ಅಲ್ಲೇ ಪಕ್ಕದಲ್ಲಿ 25 ಕೋಟಿ ರೂಪಾಯಿಗಳ ಬೃಹತ್ ಕಟ್ಟಡವೊಂದಿದೆ.
ಹಿಮಾಚಲ ಪ್ರದೇಶದ ಸೋಲನ್‌ನಲ್ಲಿ 20 ಕೋಟಿ ಬೆಲೆ ಬಾಳುವ 96 ಎಕರೆ ಜಮೀನು ಹೊಂದಿದ್ದಾರೆ. ವಿದೇಶಗಳ ಲೆಕ್ಕಾಚಾರಕ್ಕೆ ಹೋಗುವುದಾದರೆ, ಸ್ಕಾಟ್ಲೆಂಡಿನಲ್ಲಿ 14 ಕೋಟಿ ರೂಪಾಯಿ ಮೌಲ್ಯದ 750 ಎಕರೆ ಜಮೀನು ರಾಮದೇವ್ ಒಡೆತನದಲ್ಲಿದೆ. ಅಮೆರಿಕಾದ ಹೌಸ್ಟನ್‌ನಲ್ಲಿ 99 ಎಕರೆ ಜಮೀನಿದೆ. ಇದರ ರೇಟು ಈಗಿನ ಲೆಕ್ಕದಲ್ಲಿ 98 ಕೋಟಿ ರೂಪಾಯಿಗಳು. (ಮುಂದಿನ ಪುಟ ನೋಡಿ)