ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಯೋಗ ಗುರು ಬಾಬಾ ರಾಮದೇವ್ ಆಸ್ತಿ 1152 ಕೋಟಿ ರೂ.! (Baba Ramdev | black money | CBI | assets of Ramdev)
PR

ಆದಾಯದ ಮೂಲ ಏನು?
ಮೇಲ್ನೋಟಕ್ಕೆ ಕಾಣುತ್ತಿರುವುದು ಯೋಗ ತರಬೇತಿ, ಅದಕ್ಕೆ ಸಂಬಂಧಪಟ್ಟ ಸಿಡಿ-ಪುಸ್ತಕಗಳ ಮಾರಾಟ, ಆಯುರ್ವೇದ ಔಷಧಿಗಳ ಮಾರಾಟ. ಇದನ್ನು ಹೊರತುಪಡಿಸಿದರೆ ಯಾವುದೇ ಉದ್ಯಮದಲ್ಲಿ ಅವರು ತೊಡಗಿಸಿಕೊಂಡಿಲ್ಲ. ಆದರೆ ತನ್ನ ಭಕ್ತರಿಂದ ಭಾರೀ ದೇಣಿಗೆಗಳನ್ನು ಸ್ವೀಕರಿಸುತ್ತಿರುವುದಾಗಿ ಸ್ವತಃ ರಾಮದೇವ್ ಒಪ್ಪಿಕೊಂಡಿದ್ದಾರೆ.

ಇದನ್ನೇ ಇತ್ತೀಚೆಗೆ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದಿಗ್ವಿಜಯ್ ಸಿಂಗ್ ಪ್ರಶ್ನಿಸಿರುವುದು. ತಾವು ಭಕ್ತರಿಂದ ಪಡೆಯುವ ಹಣ ಸಾಚಾ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು ಎಂದು ಅವರು ರಾಮದೇವ್ ಅವರಿಗೆ ತಾಕೀತು ಮಾಡಿದ್ದರು.

ವರದಿಗಳ ಪ್ರಕಾರ ರಾಮದೇವ್ ಅವರಿಗೆ ಆರ್ಯುವೇದ ಔಷಧಿಗಳಿಂದ ಮಾಸಿಕ 25 ಕೋಟಿ ರೂಪಾಯಿಗಳ ಆದಾಯವಿದೆ. ಒಟ್ಟಾರೆ ಔಷಧಿಗಳ ಮಾರಾಟದಿಂದಲೇ 300 ಕೋಟಿ ರೂಪಾಯಿಗಳ ವಾರ್ಷಿಕ ವಹಿವಾಟು ನಡೆಯುತ್ತದೆ. ಉಳಿಯುವ ಲಾಭ ಶೇ.20ರಷ್ಟು, ಅಂದರೆ ಸುಮಾರು 60 ಕೋಟಿ ರೂಪಾಯಿಗಳು.

ಯೋಗದ ಪುಸ್ತಕ ಮತ್ತು ಸಿಡಿಗಳ ಮಾರಾಟದಿಂದ 10 ಕೋಟಿ ರೂಪಾಯಿ ಆದಾಯವಿದೆ. ದೇಶದ ಮೂಲೆ ಮೂಲೆಗಳಲ್ಲಿ ರಾಮದೇವ್ ಏರ್ಪಡಿಸುವ ವಿಶೇಷ ಯೋಗ ತರಬೇತಿ ಶಿಬಿರಗಳಿಂದ ವರ್ಷಕ್ಕೆ ಸುಮಾರು 25 ಕೋಟಿ ರೂಪಾಯಿಗಳು ಹರಿದು ಬರುತ್ತವೆ. ಪ್ರತಿ ವರ್ಷ 50 ಸಾವಿರಕ್ಕೂ ಹೆಚ್ಚು ಮಂದಿಗೆ ಈ ತರಬೇತಿ ನೀಡಲಾಗುತ್ತದೆ. ಒಬ್ಬರಿಗೆ ರಾಮದೇವ್ ಐದು ಸಾವಿರ ರೂಪಾಯಿಗಳನ್ನು ವಿಧಿಸುತ್ತಾರೆ.
(ಮುಂದಿನ ಪುಟ ನೋಡಿ)