ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಉಗ್ರರ ಎಲ್ಲ ದಾಳಿ ತಡೆ ಅಸಾಧ್ಯ ಎಂದ ರಾಹುಲ್ ಗಾಂಧಿ (Rahul Gandhi on Mumbai Blast | July 13, 2011 | Terror | Chidambaram | UPA)
PTI
ಭಾರತದ ಭಾವೀ ಪ್ರಧಾನಿ, ಕಾಂಗ್ರೆಸ್ 'ಯುವರಾಜ' ರಾಹುಲ್ ಗಾಂಧಿ ಅವರು ಮತ್ತೆ ವಿವಾದಕ್ಕೆ ಸಿಲುಕಿದ್ದಾರೆ. ದೇಶದಲ್ಲಿ ಪ್ರತಿಯೊಂದು ಭಯೋತ್ಪಾದನಾ ದಾಳಿಯನ್ನು ತಡೆಯುವುದು ಅಸಾಧ್ಯ ಎಂದಿರುವ ಅವರು, ಆದರೂ ಇದುವರೆಗೆ ಶೇ.99ರಷ್ಟು ದಾಳಿಗಳನ್ನೂ ತಡೆಯಲಾಗಿದೆ ಎಂದಿದ್ದಾರೆ. ಇದಕ್ಕೆ ಸರಕಾರ ಕೈಗೊಂಡಿರುವ ಕ್ರಮಗಳು ಮತ್ತು ಸುಧಾರಿತ ಗುಪ್ತಚರ ವ್ಯವಸ್ಥೆಯೇ ಕಾರಣ. ಎಲ್ಲೋ ಕೆಲವು ಉಗ್ರರು ಕಣ್ತಪ್ಪಿಸಿ ದಾಳಿ ನಡೆಸುತ್ತಾರೆ, ಆಫ್ಘಾನಿಸ್ತಾನ, ಇರಾಕ್‌ಗಳಲ್ಲಿ ಪ್ರತಿದಿನವೂ ದಾಳಿ ನಡೆಯುತ್ತಿದೆ ಎಂಬ ಮಾತನ್ನೂ ಆಡಿ ಅಚ್ಚರಿ ಮೂಡಿಸಿದ್ದಾರೆ.

ಕ್ಷಣ ಕ್ಷಣದ ತಾಜಾ ಸುದ್ದಿ, ವಿಶೇಷ ವರದಿ-ಲೇಖನಗಳಿಗಾಗಿ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

13/7 ಮುಂಬೈ ಸರಣಿ ಬಾಂಬ್ ಸ್ಫೋಟ: ದೃಶ್ಯಾವಳಿಗಳು ಇಲ್ಲಿವೆ ಮುಂಬೈ ಸ್ಫೋಟದಲ್ಲಿ ಮೃತರು 18, ವದಂತಿ ಸೃಷ್ಟಿಸ್ಬೇಡಿ: ಚಿದಂಬರಂ

ಗುರುವಾರ ಒರಿಸ್ಸಾ ಭೇಟಿಗಾಗಿ ಆಗಮಿಸಿದ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಾ, ಎಲ್ಲ ದಾಳಿಗಳನ್ನು ತಡೆಯುವುದು ಅಸಾಧ್ಯ ಎಂದರಲ್ಲದೆ, ದೇಶದಲ್ಲಿ ಭಯೋತ್ಪಾದನಾ ದಾಳಿಗಳನ್ನು ತಡೆಯುವ ನಿಟ್ಟಿನಲ್ಲಿ ಪ್ರಯತ್ನಗಳನ್ನು ಮತ್ತಷ್ಟು ಬಲಪಡಿಸಬೇಕಾಗಿದೆ ಎಂದರು.

ಕಳೆದ ಎರಡು ವರ್ಷಗಳಲ್ಲಿ ನಾವು ಅತ್ಯಂತ ಗಂಭೀರ ಹೆಜ್ಜೆಗಳನ್ನಿಟ್ಟಿದ್ದೇವೆ. ಭಯೋತ್ಪಾದನೆ ನಿಗ್ರಹದಲ್ಲಿ ಭಾರೀ ಸುಧಾರಣೆಯನ್ನೂ ಕಂಡಿದ್ದೇವೆ. ಆದರೆ ಎಲ್ಲ ಕಾಲದಲ್ಲಿಯೂ ಭಯೋತ್ಪಾದನೆ ತಡೆಯುವುದು ಸಾಧ್ಯವಾಗದು ಎಂದಿರುವ ರಾಹುಲ್ ಗಾಂಧಿ, ಇರಾಕ್‌ನಲ್ಲಿ ಮತ್ತು ಆಫ್ಘಾನಿಸ್ತಾನದಲ್ಲಿ ಪ್ರತಿದಿನ ದಾಳಿಗಳು ನಡೆಯುತ್ತಿವೆ. ಅಮೆರಿಕದಲ್ಲಿಯೂ ನಡೆದಿದೆ ಎಂದು ಹೋಲಿಕೆ ಮಾಡಿದರು ರಾಹುಲ್ ಗಾಂಧಿ.

ದೇಶದಲ್ಲಿ ನಮ್ಮ ಗುಪ್ತಚರ ಇಲಾಖೆಗಳು ಉತ್ತಮವಾಗಿ ಕಾರ್ಯವೆಸಗುತ್ತಿವೆ ಎಂದು ಶ್ಲಾಘಿಸಿದ ರಾಹುಲ್ ಗಾಂಧಿ, ನಮ್ಮ ಸರಕಾರ ಅಧಿಕಾರಕ್ಕೆ ಬಂದ ಬಳಿಕ ಉಗ್ರರ ದಾಳಿ ನಿಗ್ರಹಿಸುವಲ್ಲಿ ಹೆಚ್ಚಿನ ಯಶಸ್ಸು ಸಾಧಿಸಿದ್ದೇವೆ ಎಂದಿದ್ದಾರೆ.

ವೆಬ್‌ದುನಿಯಾ ಓದುಗರೇ! ಕಾಮೆಂಟ್ ಮಾಡೋ ಮುನ್ನ ಇಲ್ಲೊಮ್ಮೆ ಓದಿ ನೋಡಿ!

ಇವನ್ನೂ ಓದಿ