ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಪ್ರಜಾಪ್ರಭುತ್ವ-ಪತ್ರಿಕೋದ್ಯಮಕ್ಕೆ ನೇರ ಸಂಬಂಧ: ದೈತೋಟ (Tulu grama | Tulu Sammelana | Ujire | Veerendra Heggade | Dharmasthala)
Bookmark and Share Feedback Print
 
ತುಳುನಾಡಿನ ಪತ್ರಕರ್ತರು ಮಾಧ್ಯಮ ಪ್ರತಿನಿಧಿಗಳಾಗಿ ದೇಶ ವಿದೇಶಗಳಲ್ಲಿ ಒಳ್ಳೆಯ ಹೆಸರುಗಳಿಸಿದ್ದಾರೆ. ಜಗತ್ತಿಗೆ ನೈಜ ಘಟನೆಗಳ ಮಾಹಿತಿಗಳನ್ನು ಕೊಡಬಲ್ಲ ಪ್ರಾಮಾಣಿಕ ಪತ್ರಕರ್ತರ ಅಗತ್ಯವಿದೆ. ಪ್ರಜಾಪ್ರಭುತ್ವ ವ್ಯವಸ್ಥೆ ಬೆಳೆಯಬೇಕಾದರೆ ಪತ್ರಿಕೋದ್ಯಮದ ಸಹಕಾರವೂ ಅತೀ ಅಗತ್ಯ. ಪ್ರಜಾಪ್ರಭುತ್ವ ಹಾಗೂ ಪತ್ರಿಕೋದ್ಯಮದ ನಡುವೆ ನೇರ ಸಂಬಂಧ ಇದೆ ಎಂದು ಟೈಮ್ಸ್ ಆಫ್ ಇಂಡಿಯಾ ಕನ್ನಡ ಪತ್ರಿಕೆಯ ಸಂಪಾದಕ ಈಶ್ವರ ದೈತೋಟ ಹೇಳಿದರು.

ಶನಿವಾರ ಪೂರ್ವಾಹ್ನದ ಪ್ರಥಮ ಗೋಷ್ಠಿ 'ಶಿಕ್ಷಣ, ರಂಗಭೂಮಿ ಮತ್ತು ಮಾಧ್ಯಮದಲ್ಲಿ ಮಾಧ್ಯಮದ ನೆಲೆ' ಎಂಬ ವಿಷಯದ ಕುರಿತು ಅವರು ಉಪನ್ಯಾಸ ನೀಡಿದರು. ಟಿ.ವಿ. ರೇಡಿಯೋ, ಸಿನಿಮಾ, ಅಂತರ್ಜಾಲದ ಪ್ರಭಾವ ಈಗ ಜಾಸ್ತಿಯಾಗುತ್ತಿದೆ ಎಂದು ಅಭಿಪ್ರಾಯಪಟ್ಟರು.

ತುಳು ಪಠ್ಯಪುಸ್ತಕದಲ್ಲಿ ಅಳವಡಿಸುವ ಯೋಜನೆ ಬ್ರಿಟೀಷರಲ್ಲಿತ್ತು!: ತುಳು ಶೈಕ್ಷಣಿಕ ನೆಲೆ ಬಗ್ಗೆ ವಿಷಯ ಮಂಡಿಸಿದ ಮಂಗಳೂರು ವಿ.ವಿ. ಕನ್ನಡ ಅಧ್ಯಯನ ವಿಭಾಗದ ಪ್ರಾಧ್ಯಾಪಕ ಪ್ರೊ. ಕೆ. ಅಭಯಕುಮಾರ್ ಮಾತನಾಡಿ, ಸ್ವಾತಂತ್ರ್ಯ ಪೂರ್ವದಲ್ಲಿ ಪಾಶ್ಚಾತ್ಯ ಮಿಷನರಿಗಳ ಪ್ರಭಾವಿದ್ದರೂ ತುಳು ಭಾಷೆಗಾಗಿ ಸಾಕಷ್ಟು ಕೆಲಸಗಳು ನಡೆದಿದೆ. ರಾಷ್ಟ್ರದಲ್ಲಿ ಮತ ಪ್ರಚಾರದ ಉದ್ದೇಶವಿದ್ದರೂ ಕೂಡ ಬೈಬಲ್‌ನಂತಹ ಮಹಾ ಗ್ರಂಥವನ್ನು ತುಳು ಭಾಷೆಗೆ ಅನುವಾದ ಮಾಡಿ ಅಚ್ಚು ಹಾಕಿಸಿರುವುದು ಇತಿಹಾಸದಿಂದ ತಿಳಿದು ಬರುತ್ತದೆ. ತುಳು ವ್ಯಾಕರಣ ಮತ್ತು ಜನಪದಗಳ ಅಭಿವೃದ್ದಿಗಾಗಿ ಪಠ್ಯ ಪುಸ್ತಕಗಳಲ್ಲಿ ಅಂದು ಇದನ್ನೆಲ್ಲಾ ಅಳವಡಿಸಲು ಬ್ರಿಟೀಷ್ ಅಧಿಕಾರಿಗಳು ಆದೇಶಿಸಿದ ದೃಷ್ಟಾಂತಗಳು ಇವೆ ಎಂದರು.

ಕ್ಲೈಮಾಕ್ಸ್ ನೀತಿ: ಪುತ್ತೂರಿನ ರಂಗ ನಿರ್ದೇಶಕ ಐ.ಕೆ. ಬೊಳುವಾರು ರಂಗಭೂಮಿ ಮತ್ತು ಸಿನಿಮಾ ಕುರಿತು ಉಪನ್ಯಾಸ ನೀಡಿದರು. ರಂಗ ಕಲಾವಿದರು ರಂಗ ಸ್ಥಳದಲ್ಲಿ ಅಭಿನಯಿಸುವ ಪಾತ್ರಗಳು ಕ್ಲೈಮಾಕ್ಸ್ ಸಂದರ್ಭದಲ್ಲಿ ಒಳ್ಳೆಯ ನೀತಿಯನ್ನು ಜನತೆಗೆ ಕೊಟ್ಟು ಹೋಗುತ್ತದೆ. ಸಿನಿಮಾ ಕೂಡ ಬಹುದೊಡ್ಡ ಶಕ್ತಿ ಮಾಧ್ಯಮವಾಗಿ ಭಾಷೆ ಸಂಸ್ಕೃತಿಯ ಬೆಳವಣಿಗೆಗೆ ಸಾಕಷ್ಟು ಶ್ರಮಿಸುತ್ತದೆ ಎಂದರು.

ಇದೇ ಸಂದರ್ಭದಲ್ಲಿ ದಯಾನಂದ ದೆಂದೂರು ಬರೆದ 'ದೆಂದೂರ ಪಂಜುರ್ಲಿ' ಪುಸ್ತಕವನ್ನು ಪ್ರೊ .ಕೆ. ಅಭಯಕುಮಾರ್ ಬಿಡುಗಡೆಗೊಳಿಸಿದರು. ಯೋಗೀಶ್ ಕೈರೋಡಿ ಕಾರ್ಯಕ್ರಮ ನಿರೂಪಿಸಿದರು.

ವರದಿ: ರಿಯಾಝ್ ಜಿ ಉಜಿರೆ

ತುಳು ಸಮ್ಮೇಳನ ಫೋಟೋಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ
ಸಂಬಂಧಿತ ಮಾಹಿತಿ ಹುಡುಕಿ