ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಜೀವನದಲ್ಲಿ ಎಂದೂ ಸೋಲುವುದಿಲ್ಲ-ಆರೋಪಕ್ಕೆ ಜಗ್ಗಲ್ಲ: ರೆಡ್ಡಿ (Janardana Reddy | Dhananjay Kumar | Yeddyurappa | Congress)
Bookmark and Share Feedback Print
 
NRB
'ಅನಂತಪುರಂ ಮೈನಿಂಗ್ ಕಾರ್ಪೋರೇಷನ್‌ಗೆ ನಾನು 2005ರಿಂದಲೇ ಮಾಲೀಕನಾಗಿದ್ದೇನೆ. ಅಲ್ಲದೇ ಯಾವುದೇ ರೀತಿಯ ಅಕ್ರಮ ನಡೆಸಿಲ್ಲ. ಅನಾವಶ್ಯಕವಾದ ಬೆದರಿಕೆ, ಆರೋಪಗಳಿಗೆ ಬೆದರುವವನು ಅಲ್ಲ. ನಾನು ಜೀವನದಲ್ಲಿ ಎಂದೂ ಸೋಲುವುದಿಲ್ಲ' ಹೀಗೆಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರ ಆರೋಪಕ್ಕೆ ಮಂಗಳವಾರ ಬೆಳಿಗ್ಗೆ ಸಚಿವ ಜನಾರ್ದನ ರೆಡ್ಡಿ ದಾಖಲೆ ಸಹಿತ ತಿರುಗೇಟು ನೀಡಿದ ಪರಿ ಇದು.

ತಾಜಾ ಸುದ್ದಿಗಳು ತಕ್ಷಣ ಲಭ್ಯವಾಗಲು ಟ್ವಿಟ್ಟರ್‌ನಲ್ಲಿ ನಮ್ಮನ್ನು ಫಾಲೋ ಮಾಡಿ

ಅಪರಂಜಿ ಚಿನ್ನ ಎಂದು ಹೇಳಿಕೊಳ್ಳುತ್ತಿರುವ ಜನಾರ್ದನ ರೆಡ್ಡಿ, ಅನಂತಪುರಂ ಮೈನಿಂಗ್ ಕಂಪನಿಯನ್ನು ತಮ್ಮ ಹೆಸರಿನಲ್ಲಿ ನೋಂದಾಯಿಸಿಕೊಂಡು ರಾಜ್ಯದಲ್ಲಿ ಅಕ್ರಮ ಗಣಿದಂಧೆ ನಡೆಸುತ್ತಿದ್ದಾರೆ ಎಂದು ಕುಮಾರಸ್ವಾಮಿ ಸೋಮವಾರ ಸಂಜೆ ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದ್ದರು. ಅದಕ್ಕೆ ಪ್ರತ್ಯುತ್ತರ ಎಂಬಂತೆ ಇಂದು ಬೆಳಿಗ್ಗೆ ಬಿಜೆಪಿ ವಕ್ತಾರ ಧನಂಜಯ್ ಕುಮಾರ್ ಮತ್ತು ರೆಡ್ಡಿ ಜಂಟಿಯಾಗಿ ಸುದ್ದಿಗೋಷ್ಠಿ ನಡೆಸಿದರು.

ನಾನು ಈಗಲೂ ಅಪರಂಜಿ ಚಿನ್ನವೇ ಆಗಿದ್ದೇನೆ. ಅನಂತಪುರಂ ಮೈನಿಂಗ್‌ನಿಂದ ಕಾನೂನುಬದ್ದವಾಗಿ ಅದಿರು ಖರೀದಿ, ಸಾಗಾಟ ವ್ಯವಹಾರ ಮಾಡಿದ್ದೇವೆ. ಅಷ್ಟೇ ಅಲ್ಲ ಬ್ಲಾಕ್ ಗೋಲ್ಡ್ ಮೈನಿಂಗ್ 1950ರಲ್ಲಿಯೇ ಲೀಸ್ ಪಡೆದು ಕಾರ್ಯನಿರ್ವಹಿಸುತ್ತಿತ್ತು. ಆದರೆ 1992ರಲ್ಲಿ ಅದರ ಪರವಾನಿಗೆ ಪುನರ್ ನವೀಕರಣ ಆಗಿರಲಿಲ್ಲವಾಗಿತ್ತು. 2004ರಲ್ಲಿ ಸ್ಟಾಕ್ ಆಗಿರುವ ಸುಮಾರು ಮೂರುವರೆ ಲಕ್ಷ ಟನ್ ಅದಿರನ್ನು ಲಿಫ್ಟ್ ಮಾಡಲು ಅನುಮತಿ ನೀಡಬೇಕೆಂದು ಕೋರಿ ಹೈಕೋರ್ಟ್ ಮೆಟ್ಟಿಲೇರಿದ್ದರು. ಆಗ ಹೈಕೋರ್ಟ್ ಅನುಮತಿ ಕೊಟ್ಟಿತ್ತು. ಹಾಗಾಗಿ ಅನಂತಪುರಂ ಮೈನಿಂಗ್ ಕಂಪನಿ ಅಂದರೆ ನಾನು 1,90, 000ಟನ್ ಅದಿರನ್ನು ಖರೀದಿ ಮಾಡಿದ್ದೇವೆ. ಅದಕ್ಕೆ ಬೇಕಾದ ದಾಖಲೆ ಕೂಡ ನನ್ನಲ್ಲಿದೆ ಎಂದರು. ಆದರೆ ಕುಮಾರಸ್ವಾಮಿ ಅದನ್ನೇ ದೊಡ್ಡ ವಿಷಯ ಎಂಬಂತೆ ದಾಖಲೆ ಸಹಿತ ಆರೋಪ ಬಯಲು ಎಂದು ಹೇಳಿರುವುದು ಹಾಸ್ಯಾಸ್ಪದ ಎಂದು ದೂರಿದರು.

ಬ್ಲಾಕ್ ಗೋಲ್ಡ್ ಮೈನಿಂಗ್ ಕಂಪನಿ ಬಗ್ಗೆ ಸಾಕಷ್ಟು ವ್ಯಾಜ್ಯಗಳು ಕೋರ್ಟ್ ಮೆಟ್ಟಿಲೇರಿತ್ತು. ಆ ಬಗ್ಗೆ ಬ್ಲಾಕ್ ಗೋಲ್ಡ್‌ ಸ್ಟಾಕ್ ಲಿಫ್ಟ್ ಬಗ್ಗೆ ಹೈಕೋರ್ಟ್ ನೀಡಿರುವ ಆದೇಶದ ವಿರುದ್ದ ರಾಜ್ಯ ಸರಕಾರ ಸುಪ್ರೀಂಕೋರ್ಟ್ ಮೆಟ್ಟಿಲೇರಿತ್ತು. ನಂತರ 2006 ಮೇ 6ಕ್ಕೆ ಅಧಿಕಾರಿಗಳು ಆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ಬಳಿಕ, ಇಲ್ಲಿ ಯಾವುದೇ ರೀತಿಯ ಹೊಸ ಮೈನಿಂಗ್ ಆಗಿಲ್ಲ, ಎಂಟು ಡಂಪ್ಸ್‌ಗಳಲ್ಲಿ ಇದ್ದ ಅದಿರು ತೆಗೆಯಲಾಗಿದೆ ಎಂದು ಸುಪ್ರೀಂಗೆ ವರದಿ ನೀಡಿದ್ದರು. ಆ ನಂತರ 2006 ಜುಲೈ 6ರಂದು ಮುಖ್ಯಮಂತ್ರಿಯಾಗಿದ್ದ ಎಚ್.ಡಿ.ಕುಮಾರಸ್ವಾಮಿ ವಿರುದ್ಧ 150 ಕೋಟಿ ರೂಪಾಯಿ ಲಂಚ ಸ್ವೀಕರಿಸಿರುವ ಬಗ್ಗೆ ಆರೋಪಿಸಿದ್ದೆ. ಅದಕ್ಕೆ ಈಗಲೂ ಬದ್ದ ಎಂದು ಪುನರುಚ್ಚರಿಸಿದರು.

ಬ್ಲಾಕ್ ಗೋಲ್ಡ್ ಮೈನಿಂಗ್ ಕಂಪನಿ ಈಗ ಮೋದಿ ಅವರ ಒಡೆತನದಲ್ಲಿದೆ. ಇದೇ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ಅವರಿಂದಲೇ 150 ಕೋಟಿ ರೂಪಾಯಿ ಲಂಚ ಸ್ವೀಕರಿಸಿದ ಸಿಡಿ ನನ್ನ ಬಳಿ ಇದೆ. ಆದರೆ ಗಣಿ ಮಾಲೀಕರ ಪ್ರಾಣಕ್ಕೆ ಅಪಾಯ ಆಗಬಾರದು ಎಂಬ ದೃಷ್ಟಿಯಲ್ಲಿ ಸಿಡಿ ಬಿಡುಗಡೆ ಮಾಡಿಲ್ಲ ಎಂದರು.

ಪತ್ರಿಕಾಗೋಷ್ಠಿಯುದ್ದಕ್ಕೂ ದಾಖಲೆ ಸಹಿತ ವಿವರಣೆ ನೀಡಿ, ತಾವು ಯಾವುದೇ ಅಕ್ರಮ ಗಣಿಗಾರಿಕೆ ನಡೆಸಿಲ್ಲ, ಅನಾವಶ್ಯಕವಾಗಿ ತಮ್ಮ ಮೇಲೆ ಗೂಬೆ ಕೂರಿಸುತ್ತಿದ್ದಾರೆಂದು ಸಮಜಾಯಿಷಿ ನೀಡಿದರು.

ಸಿಬಿಐ ತನಿಖೆ ಪ್ರಶ್ನೆಯೇ ಇಲ್ಲ-ಧನಂಜಯ್ ಕುಮಾರ್: ರಾಜ್ಯದಲ್ಲಿ ಬಿಜೆಪಿ ಅಧಿಕಾರದ ಗದ್ದುಗೆ ಏರಿದ ನಂತರ ಸಾಕಷ್ಟು ಅಭಿವೃದ್ದಿ ಕಾರ್ಯಗಳನ್ನು ಮಾಡಿದೆ. ಆದರೆ ಪ್ರತಿಪಕ್ಷದ ಮಿತ್ರರು ಅನಾವಶ್ಯಕವಾಗಿ ಜನಜೀವನಕ್ಕೆ ಹೊರತಾಗಿರುವ ಗಣಿಗಾರಿಕೆಯ ಬಗ್ಗೆಯೇ ಗಲಾಟೆ ಎಬ್ಬಿಸಿ ಕಲಾಪದಲ್ಲಿ ಚರ್ಚೆ ನಡೆಸಿರುವುದು ದುರಾದೃಷ್ಟಕರ ಸಂಗತಿ ಎಂದು ಬಿಜೆಪಿ ವಕ್ತಾರ ಧನಂಜಯ್ ಕುಮಾರ್ ಹೇಳಿದರು.

ನಗರದ ಖಾಸಗಿ ಹೊಟೇಲ್‌ನಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಆರಂಭಿಕವಾಗಿ ಮಾತನಾಡಿದ ಅವರು, ಈಗಾಗಲೇ ಲೋಕಾಯುಕ್ತ ಕಾಯ್ದೆಗೆ ತಿದ್ದುಪಡಿ ತರಲಾಗಿದೆ. ಅಲ್ಲದೇ ವಿದೇಶಕ್ಕೆ ಮಾರಾಟವಾಗಿರುವ ಅದಿರು ಸಾಗಣೆ ಬಗ್ಗೆ ತನಿಖೆ ನಡೆಸಲು ಸಿಬಿಐ ನೆರವು ಪಡೆಯಲು ಕೂಡ ಸಿಬಿಐಗೆ ಅಧಿಕಾರ ನೀಡಲಾಗಿದೆ ಎಂದರು. ಆ ನಿಟ್ಟಿನಲ್ಲಿ ನಾನು ಎಚ್.ಡಿ.ಕೆ., ದೇಶಪಾಂಡೆ ಸೇರಿದಂತೆ ವಿಪಕ್ಷ ನಾಯಕರಲ್ಲಿ ಕೈಮುಗಿದು ಪ್ರಾರ್ಥನೆ ಮಾಡುತ್ತೇನೆ, ನಿಮ್ಮಲ್ಲಿ ಇರುವ ಎಲ್ಲಾ ದಾಖಲೆಗಳನ್ನು ಲೋಕಾಯುಕ್ತರಿಗೆ ಒದಗಿಸಿ ತನಿಖೆಗೆ ಸಹಕಾರ ನೀಡಬೇಕೆಂದು ಎಂದು ಈ ಸಂದರ್ಭದಲ್ಲಿ ಹೇಳಿದರು.

ಆದರೆ ಅಕ್ರಮ ಗಣಿ ಹಗರಣವನ್ನು ಸಿಬಿಐಗೆ ಒಪ್ಪಿಸುವುದನ್ನು ಭಾರತೀಯ ಜನತಾ ಪಕ್ಷ ಸುತಾರಾಂ ಒಪ್ಪುವುದಿಲ್ಲ, ಆ ನೆಲೆಯಲ್ಲಿ ಪ್ರತಿಪಕ್ಷ ಮುಖಂಡರು ಲೋಕಾಯುಕ್ತದ ಬಗ್ಗೆ ವಿಶ್ವಾಸ ಇದೆಯೋ, ಇಲ್ಲವೋ ಎನ್ನುವುದನ್ನು ಸ್ಪಷ್ಟಪಡಿಸಬೇಕು. ಏಕಾಏಕಿ ಗಣಿ ಹಗರಣ ನಡೆದಿದೆ ಎಂದು ಆರೋಪಿಸಿರುವ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಅಧಿಕಾರದಲ್ಲಿದ್ದಾಗ ಯಾಕೆ ತನಿಖೆಗೆ ಮುಂದಾಗಿಲ್ಲ ಎಂದು ಧನಂಜಯ್ ಪ್ರಶ್ನಿಸಿದರು.

ಸಿಬಿಐ ಉದ್ದೇಶ ಭಾರತೀಯ ಜನತಾ ಪಕ್ಷದ ಮುಖಂಡರ ಮುಖಕ್ಕೆ ಮಸಿ ಬಳಿದು, ಕಾಂಗ್ರೆಸ್ ಮುಖಂಡರನ್ನು ರಕ್ಷಿಸುವುದೇ ಆಗಿದೆ. ಸಿಬಿಐ ಅಂದ್ರೇನೆ, ಕಾಂಗ್ರೆಸ್ ಇನ್ವೆಷ್ಟಿಗೇಷನ್ ಆಫ್ ಬ್ಯುರೋ ಆಗಿದೆ. ವಿಪಕ್ಷಗಳು ಅಕ್ರಮ ಗಣಿ ಹಗರಣ ತನಿಖೆಗೆ ಲೋಕಾಯುಕ್ತರಿಗೆ ಸಂಪೂರ್ಣ ಸಹಕಾರ ನೀಡಬೇಕು ಎಂದು ಮನವಿ ಮಾಡಿಕೊಂಡರು.

ನಾವು ಅಪ್ಪಟ ಅಪರಂಜಿ-ಕೈ ಗಣಿ ದಂಧೆ ಬಯಲು

ಎಚ್‌ಡಿಕೆಯಿಂದ ರೆಡ್ಡಿ ಗಣಿದಂಧೆ ದಾಖಲೆ ಸಹಿತ ಬಹಿರಂ
ಸಂಬಂಧಿತ ಮಾಹಿತಿ ಹುಡುಕಿ