ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಪ್ರತಿಪಕ್ಷಗಳಿಗೆ ಹತಾಶೆ, ಕುಮಾರ 'ದುರ್ಯೋಧನ': ಸಿಎಂ (Vidhana Soudha | BJP Government | Karnataka Crisis | Vote of Confidence)
Bookmark and Share Feedback Print
 
ವಿಶ್ವಾಸಮತದ ಬಳಿಕ ವಿಧಾನಸೌಧದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಸರಕಾರಕ್ಕೆ ಬಹುಮತವಿಲ್ಲ ಎಂದಿದ್ದ ಪ್ರತಿಪಕ್ಷಗಳಿಗೆ ಹತಾಶೆಯಿಂದಾಗಿ ದಾಂಧಲೆ ನಡೆಸಿವೆ ಎಂದು ಆರೋಪಿಸಿದರು.

ಸಂಸದ ಕುಮಾರಸ್ವಾಮಿ ಇಲ್ಲಿ ದುರ್ಯೋಧನನ ಪಾತ್ರ ವಹಿಸಿದ್ದಾರೆ ಎಂದು ಆರೋಪಿಸಿದ ಅವರು, ಈ ಸಂದರ್ಭ ಮಾಧ್ಯಮ ಪ್ರತಿನಿಧಿಗಳಿಗೆ ಹಲ್ಲೆಗೆ ಕ್ಷಮೆ ಯಾಚನೆ ಮಾಡಿದರು.

ತನಿಖೆ ನಂತರ ತಪ್ಪಿತಸ್ಥ ಪೊಲೀಸರ ಮೇಲೆ ಕ್ರಮ ಕೈಗೊಳ್ಳುವುದಾಗಿ ಹೇಳಿದ ಅವರು, ಯಾರಿಂದ ಯಾರಿಗೆ ಎಷ್ಟು ಹಣ ವಿತರಣೆಯಾಗಿದೆ ಎಂಬುದು ಗೊತ್ತು ಎಂದರಲ್ಲದೆ, ಶೀಘ್ರವೇ ಸಚಿವ ಸಂಪುಟವನ್ನು ಪುನಾರಚನೆ ಮಾಡುವುದಾಗಿ ಹೇಳಿದರು.

ಸ್ಪೀಕರ್ ಕ್ರಮ ಕಾನೂನುಬದ್ಧ : ಮಾಜಿ ರಾಜ್ಯಪಾಲ
ಈ ಮಧ್ಯೆ, ಜಾರ್ಖಂಡ್ ಮಾಜಿ ರಾಜ್ಯಪಾಲ ರಾಮಾ ಜೋಯಿಸ್ ಅವರು ಟಿವಿ-9ಗೆ ಪ್ರತಿಕ್ರಿಯೆ ನೀಡಿ, ಇಂದಿನ ಕಲಾಪದ ಕುರಿತಾಗಿ ರಾಜ್ಯಪಾಲರು ಏನೂ ಮಾಡುವಂತಿಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ.

ಸ್ಪೀಕರ್ ನಡೆಸಿದ ಧ್ವನಿಮತದ ನಿರ್ಣಯ ಕಾನೂನುಬದ್ಧ. ಈ ಕುರಿತು ಸಂವಿಧಾನಕ್ಕೆ ತಿದ್ದುಪಡಿ ಮಾಡಲಾಗಿದೆ ಎಂದ ಅವರು, ಪಕ್ಷಾಂತರ ನಿಷೇಧ ಕಾಯಿದೆಯಡಿ ಸ್ಪೀಕರಿಗೆ ಶಾಸಕರನ್ನು ಅನರ್ಹಗೊಳಿಸುವ ಅಧಿಕಾರವಿದೆ ಎಂದು ಹೇಳಿದ್ದಾರೆ.
ಸಂಬಂಧಿತ ಸುದ್ದಿಗಳು
ಧ್ವನಿಮತದಿಂದ ವಿಶ್ವಾಸಮತ ಗೆದ್ದ ಸರಕಾರ!
ಸ್ಪೀಕರ್ ಕ್ರಮ ತಪ್ಪು; ಅಯ್ಯೋ ದೇವ್ರೇ ಎಂದ ಗೌಡ್ರು!
ಶಾಸಕರನ್ನು ಅನರ್ಹಗೊಳಿಸಿದ ಸ್ಪೀಕರ್!
ವಿಧಾನಸೌಧದಲ್ಲಿ ಏನೆಲ್ಲಾ ಆಯಿತು ಗೊತ್ತೇ... ಇಲ್ಲಿ ಕ್ಲಿಕ್ ಮಾಡಿ
ಗಲಾಟೆ, ಗದ್ದಲ, ಮಾರ್ಷಲ್‌ಗೇ ಏಟು ಕೊಟ್ಟ ಶಾಸಕರು!
ಗೂಳಿಹಟ್ಟಿಯಿಂದ ಅಂಗಿಹರಿದುಕೊಂಡು ಪ್ರತಿಭಟನೆ!
ಸಂಬಂಧಿತ ಮಾಹಿತಿ ಹುಡುಕಿ