ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಅನರ್ಹರ ಹೋರಾಟ ಇನ್ನೂ ಬೆಂಬಲಿಸ್ತೀನಿ: ಎಚ್‌ಡಿಕೆ (HD Kumaraswamy | JDS | BJP | Karnataka Crisis | Operation Kamala | Disqualified MLAs)
Bookmark and Share Feedback Print
 
ಶಾಸಕರ ಅನರ್ಹತೆಯ ಸ್ಪೀಕರ್ ಆದೇಶವನ್ನು ಹೈಕೋರ್ಟ್ ಮಾನ್ಯ ಮಾಡಿದ ಬಳಿಕ ಪ್ರತಿಕ್ರಿಯೆ ನೀಡಿರುವ, ರಾಜ್ಯ ಬಿಜೆಪಿ ಸರಕಾರದ ಬಿಕ್ಕಟ್ಟಿನ ರೂವಾರಿ ಎಂದೇ ಬಿಂಬಿಸಲ್ಪಟ್ಟಿರುವ ಮಾಜಿ ಮುಖ್ಯಮಂತ್ರಿ, ಹಾಲಿ ಸಂಸದ ಎಚ್.ಡಿ.ಕುಮಾರಸ್ವಾಮಿ, 16 ಅತೃಪ್ತ ಶಾಸಕರ ಹೋರಾಟವನ್ನು ಇನ್ನೂ ಬೆಂಬಲಿಸುತ್ತೇವೆ ಎಂದು ಹೇಳಿದ್ದಾರೆ.

"ಭ್ರಷ್ಟ" ಬಿ.ಎಸ್.ಯಡಿಯೂರಪ್ಪ ಸರಕಾರದ ವಿರುದ್ಧದ ಈ ಬಂಡಾಯವನ್ನು ಮತ್ತು ಈ ತೀರ್ಪನ್ನು ಪ್ರಶ್ನಿಸುವಲ್ಲಿ ಸುಪ್ರೀಂ ಕೋರ್ಟಿಗೆ ಹೋಗಲು ಪೂರ್ಣ ಬೆಂಬಲ ನೀಡುವುದಾಗಿ ಕುಮಾರಸ್ವಾಮಿ ಶುಕ್ರವಾರ ಹೇಳಿದರು.

ಎಲ್ಲ ಬಿಜೆಪಿ ಬಂಡಾಯ ಶಾಸಕರು ಒಗ್ಗಟ್ಟಾಗಿದ್ದಾರೆ ಎಂದ ಅವರು, ಯಡಿಯೂರಪ್ಪ ಸರಕಾರದ ಮತ್ತಷ್ಟು ಹೊಸ ಭ್ರಷ್ಟಾಚಾರಗಳನ್ನು ಬಯಲಿಗೆಳೆಯುವ ಕಾಯಕವನ್ನು ಮುಂದುವರಿಸುವುದಾಗಿಯೂ ಜೆಡಿಎಸ್ ನಾಯಕ ಕುಮಾರಸ್ವಾಮಿ ಘೋಷಿಸಿದರು.

ಇದನ್ನೂ ಓದಿ: 11 ಬಂಡಾಯ ಶಾಸಕರ ಅನರ್ಹತೆ: ಕೋರ್ಟಿನಲ್ಲಿ ಬಿಜೆಪಿಗೆ ಜಯ
ಸತ್ಯಕ್ಕೆ ದೊರೆತ ಜಯ ಎಂದ ಮುಖ್ಯಮಂತ್ರಿ

[ ವೆಬ್‌ದುನಿಯಾದ ಎಲ್ಲ ಕಾಮೆಂಟಿಗರಲ್ಲಿ ಮನವಿ: ಅಶ್ಲೀಲ, ಅಸಭ್ಯ, ಹೊಲಸು ಪದಗಳು ಬೇಡವೇ ಬೇಡ. ಅದರೊಂದಿಗೆ ಕಾಪಿ ಪೇಸ್ಟ್ ಮಾಡುವ ಕೆಟ್ಟ ಚಾಳಿಯೂ ಬೇಡ. ತಮ್ಮ ಹೆಸರು ಬರೆಯುವ ಧೈರ್ಯವಿಲ್ಲದೆ ಬೇರೆಯವರ ಹೆಸರಲ್ಲಿ ಕೊಳಕು ಬರೆಯುವುದೂ ಬೇಡ. ಇಂಥದ್ದು ಕಂಡರೆ, ಓದುಗರು ದಯವಿಟ್ಟು ಕೂಡಲೇ ರಿಪೋರ್ಟ್ ಅಬ್ಯೂಸ್ ಮಾಡುವ ಮೂಲಕ ದಯವಿಟ್ಟು ಸಭ್ಯವಾದ ಚರ್ಚೆಗೆ ಈ ವೇದಿಕೆಯನ್ನು ಬಳಸಿಕೊಳ್ಳಿ. ]
ಸಂಬಂಧಿತ ಮಾಹಿತಿ ಹುಡುಕಿ