ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಸಿಎಂ ವಿರುದ್ಧ ಕೇಸು: ಕುಮಾರಸ್ವಾಮಿಗೂ ಬಂತು ಕುತ್ತು! (CM Yaddyurappa | Kumaraswamy | Denofication | Land Scam | Case Against CM | Governor)
Bookmark and Share Feedback Print
 
WD
ಮುಖ್ಯಮಂತ್ರಿ ಯಡಿಯೂರಪ್ಪ ವಿರುದ್ಧದ ಭೂಹಗರಣ ಆರೋಪಕ್ಕೆ ಸಂಬಂಧಿಸಿ, ರಾಜ್ಯಪಾಲರಿಂದ ದೊರೆತ ಅನುಮತಿಯ ಅಸ್ತ್ರದೊಂದಿಗೆ, ನ್ಯಾಯಾಲಯದ ಮೊರೆ ಹೊಕ್ಕವರಿಗೆ ಸೋಮವಾರ ಶಾಕ್ ಕಾದಿತ್ತು. ರಾಚೇನಹಳ್ಳಿಯಲ್ಲಿ ಡೀನೋಟಿಫೈ ಮಾಡಲಾದ ಜಮೀನಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯ ಹೆಸರೂ ಆರೋಪಿ ಪಟ್ಟಿಯಲ್ಲಿ ಸೇರಿಸುವಂತೆ ಕೋರಿ ಮುಖ್ಯಮಂತ್ರಿ ಅಳಿಯ ಸೋಹನ್ ಕುಮಾರ್ ಅವರು ವಿಶೇಷ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ.

ಮುಖ್ಯಮಂತ್ರಿ ವಿರುದ್ಧ ಮತ್ತೆ 3 ಕೇಸು ದಾಖಲು, ಫೆ.1ಕ್ಕೆ ವಿಚಾರಣೆ

ಶನಿವಾರ ಒಂದನೇ ಕಂತಿನಲ್ಲಿ ದಾಖಲಿಸಲಾದ ಎರಡು ಫೀರ್ಯಾದುಗಳಲ್ಲಿ ಒಂದು ಪ್ರಕರಣವು ರಾಚೇನಹಳ್ಳಿಯ ಸರ್ವೇ ನಂಬರ್‌ಗೆ ಸಂಬಂಧಿಸಿದ್ದಾಗಿತ್ತು. ಅದೇ ಜಮೀನಿನಲ್ಲಿ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ 60 ಎಕರೆ ಡೀನೋಟಿಫೈ ಮಾಡಿದ್ದರಿಂದಾಗಿ ಅವರ ಹೆಸರನ್ನೂ ಆರೋಪಿ ಪಟ್ಟಿಯಲ್ಲಿ ಸೇರಿಸಬೇಕು ಎಂದು ಕೋರಿ ಸೋಹನ್ ಕುಮಾರ್ ವಕೀಲರಾದ ಸಂದೀಪ್ ಪಾಟೀಲ್ ಅರ್ಜಿ ಸಲ್ಲಿಸಿದ್ದಾರೆ.

ಈ ಅರ್ಜಿಗೆ ತಕರಾರು ಅರ್ಜಿ ಸಲ್ಲಿಸುವಂತೆ ನ್ಯಾಯಾಧೀಶ ಹಿಪ್ಪರಗಿ ಅವರು ಫೀರ್ಯಾದಿದಾರರಾದ ಸಿರಾಜಿನ್ ಬಾಷ್ ಮತ್ತು ಬಾಲರಾಜ್ ಅವರ ವಕೀಲರಿಗೆ ಸೂಚಿಸಿದ್ದು, ಮುಂದಿನ ಸೋಮವಾರ (ಜ.31)ರಂದು ಆಕ್ಷೇಪಣಾ ಅರ್ಜಿಯನ್ನು ಸಲ್ಲಿಸುವುದಾಗಿ ವಕೀಲ ಹನುಮಂತರಾಯ ಅವರು ಸುದ್ದಿಗಾರರಿಗೆ ತಿಳಿಸಿದ್ದಾರೆ.

ಅದೇ ರೀತಿಯಾಗಿ, ಈಗಾಗಲೇ ಈ ಪ್ರಕರಣದ ಕುರಿತು ನ್ಯಾಯಮೂರ್ತಿ ಪದ್ಮರಾಜ್ ಆಯೋಗ ಅಥವಾ ಲೋಕಾಯುಕ್ತರಲ್ಲಿ ಯಾರು ತನಿಖೆ ನಡೆಸಬೇಕು ಎಂಬ ಅರ್ಜಿಯು ಹೈಕೋರ್ಟಿನಲ್ಲಿ ವಿಚಾರಣೆ ಹಂತದಲ್ಲಿದೆ. ಹೀಗಿರುವಾಗ ತಾವು ಈ ಕೇಸು ದಾಖಲಿಗೆ ಸಂಬಂಧಿಸಿ ಆಕ್ಷೇಪಣೆ ಸಲ್ಲಿಸುತ್ತಿರುವುದಾಗಿ ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.

ಇದರ ಅನುಸಾರ ನ್ಯಾಯಾಧೀಶರು, ತಕರಾರು ಅರ್ಜಿ ಸಲ್ಲಿಸಲು ಸೂಚಿಸುವಂತೆಯೂ, ಎರಡೂ ಕಡೆಯ ವಾದ ವಿವಾದಗಳನ್ನು ಆಲಿಸಿ, ಪ್ರಕರಣ ಇತ್ಯರ್ಥಗೊಳಿಸೋಣ ಎಂದಿದ್ದಾರೆ. ಹೀಗಾಗಿ 31ಕ್ಕೆ ತಕರಾರು ಅರ್ಜಿ ಸಲ್ಲಿಸುವುದಾಗಿ ಹನುಮಂತರಾಯ ತಿಳಿಸಿದ್ದಾರೆ.

ಈ ಎಲ್ಲ ಪ್ರಕರಣಗಳ ಹಿಂದೆ ದೇವೇಗೌಡ ಮತ್ತು ಮಕ್ಕಳ ಕೈವಾಡವಿದೆ ಎಂದು ಹೇಳುತ್ತಲೇ ಬಂದಿದ್ದ ಮುಖ್ಯಮಂತ್ರಿ ಯಡಿಯೂರಪ್ಪ, ಅಪ್ಪ ಮಕ್ಕಳ ಭೂಹಗರಣಗಳನ್ನು ಒಂದೊಂದಾಗಿ ಬಯಲು ಮಾಡುತ್ತೇನೆ, ಸದ್ಯಕ್ಕೆ ಕಾಂಗ್ರೆಸ್ ಬಗ್ಗೆ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಸೋಮವಾರ ಬೆಳಿಗ್ಗೆಯೂ ಗುಡುಗಿರುವುದು ಇಲ್ಲಿ ಸ್ಮರಣಾರ್ಹ.
ಸಂಬಂಧಿತ ಮಾಹಿತಿ ಹುಡುಕಿ