ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಬೆಂಗಳೂರಲ್ಲಿ ಭಿನ್ನರ ಮಸಲತ್ತು, ದೆಹಲಿಯಲ್ಲಿ ಸಿಎಂ ಸರ್ಕಸ್ಸು
(BS Yeddyurappa | KS Eshwarappa | Anant Kumar | Jagadish Shetter)
ಬೆಂಗಳೂರಲ್ಲಿ ಭಿನ್ನರ ಮಸಲತ್ತು, ದೆಹಲಿಯಲ್ಲಿ ಸಿಎಂ ಸರ್ಕಸ್ಸು
ನಾನು ಹೇಳಿದ್ದರಿಂದಲೇ ಸಭೆ: ಸಿಎಂ ಬೆಂಗಳೂರಿನಲ್ಲಿ ಸೋಮವಾರ ಸಂಜೆ ನಡೆದಿರುವ ಸಭೆಯನ್ನು ಮಾಡಲು ಹೇಳಿದ್ದು ಯಡಿಯೂರಪ್ಪನವರೇ ಅಂತೆ. ಹಾಗೆಂದು ಸ್ವತಃ ಸಿಎಂ ಹೇಳಿಕೊಂಡಿದ್ದಾರೆ.
ಬೆಂಗಳೂರಿನಲ್ಲಿ ಈಶ್ವರಪ್ಪ ಬಣದ ಸಭೆ ನಡೆದಿದೆಯಲ್ಲ ಎಂದು ಪ್ರಶ್ನಿಸಿದಾಗ, ಅದು ಭಿನ್ನರ ಸಭೆಯಲ್ಲ. ನಾನು ಹೇಳಿದ್ದರಿಂದಲೇ ಆ ಸಭೆ ನಡೆದಿದೆ. ವಿಧಾನಸಭೆಯ ಉಪಚುನಾವಣೆಗೆ ಕಾರ್ಯತಂತ್ರ ಹೆಣೆಯುವ ಸಲುವಾಗಿ ಶೆಟ್ಟರ್ ನಿವಾಸದಲ್ಲಿ ಸಮಾಲೋಚನೆ ನಡೆಸಲಾಗಿದೆ. ನಾನು ದೆಹಲಿಗೆ ಬಂದಿರುವುದರಿಂದ ಅಲ್ಲಿ ಸಭೆ ನಡೆದಿದೆ ಎಂದಿದ್ದಾರೆ.
ನಾನು ಸಭೆಯಲ್ಲಿ ಪಾಲ್ಗೊಂಡಿಲ್ಲ ಅಥವಾ ಶಾಸಕರು ಒಟ್ಟು ಸೇರಿದ್ದಾರೆ ಎಂದ ಕೂಡಲೇ ಅದು ಭಿನ್ನರ ಸಭೆ ಅಥವಾ ನನ್ನ ವಿರುದ್ಧದ ಸಭೆ ಎಂದುಕೊಳ್ಳಬೇಕಾಗಿಲ್ಲ. ನಮ್ಮಲ್ಲಿ ಭಿನ್ನಮತವಿಲ್ಲ, ಒಟ್ಟಾಗಿದ್ದೇವೆ. ಪಕ್ಷ ಮತ್ತು ಸರಕಾರದ ಹಿತದೃಷ್ಟಿಯಿಂದ ಮಹತ್ವದ್ದಾಗಿರುವ ಚುನಾವಣೆಯನ್ನು ಯಶಸ್ವಿಯಾಗಿ ಎದುರಿಸುತ್ತೇವೆ ಎಂದು ದೆಹಲಿಯಲ್ಲಿ ಪ್ರತಿಕ್ರಿಯಿಸಿದರು.