ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ | ಸಂದರ್ಶನ | ಹಾಲಿವುಡ್ | ಕಿರುತೆರೆ
ಮುಖ್ಯ ಪುಟ ಮನರಂಜನೆ » ಬಾಲಿವುಡ್‌ » ಹಾಲಿವುಡ್ » ಮುಂಬೈ ನಂತರ ಚೀನಾ
ಹಾಲಿವುಡ್
Feedback Print Bookmark and Share
 
ಮುಂಬೈ ಕೊಳಗೇರಿಯನ್ನು ಆಧಾರವಾಗಿರಿಸಿಕೊಂಡು 'ಸ್ಲಮ್‌ಡಾಗ್ ಮಿಲಿಯನೇರ್' ಚಿತ್ರ ನಿರ್ಮಿಸಿರುವ ಆಸ್ಕರ್ ಪ್ರಶಸ್ತಿ ವಿಜೇತ ಬ್ರಿಟನ್ ನಿರ್ದೇಶಕ ಡ್ಯಾನಿ ಬೋಯ್ಲೆ ಇದೀಗ ಇಂತಹುದೇ ಚಿತ್ರವೊಂದನ್ನು ಚೀನಾದಲ್ಲಿ ನಿರ್ಮಿಸಲು ಉತ್ಸುಕತೆಯನ್ನು ತೋರಿಸಿದ್ದಾರೆ. ಆದರೆ ಇದು ಸೌರಶಕ್ತಿ ಸಂಬಂಧಿ ಚಿತ್ರವಾಗಲಿದೆ. ಮುಂಬೈಯಂತೆ ಬೀಜಿಂಗ್ ಹಾಗೂ ಶಾಂಗ್‌ಗಾಯ್ ನಗರಗಳು ಸಾಮ್ಯತೆಯನ್ನು ಹೊಂದಿರುವುದರಿಂದ ಡ್ಯಾನಿ ಚಿತ್ರ ನಿರ್ಮಿಸಲು ಇಚ್ಛೆ ವ್ಯಕ್ತಪಡಿಸಿದ್ದಾರೆ. ಇದೇ ವೇಳೆ 'ಶಾಂಗ್‌ಗಾಯ್ ಚಲನಚಿತ್ರೋತ್ಸವ' ಜೂನ್ 13ರಿಂದ 21ರ ತನಕ ಜರಗಲಿದ್ದು, ಮುಖ್ಯ ತೀರ್ಪುಗಾರರಾಗಿ ಡ್ಯಾನಿ ಬೋಯ್ಲೆ ಆಯ್ಕೆಯಾಗಿದ್ದಾರೆ. ಎಂಟು ಆಸ್ಕರ್ ಪ್ರಶಸ್ತಿ ವಿಜೇತ ಚಿತ್ರ 'ಸ್ಲಮ್‌ಡಾಗ್ ಮಿಲಿಯನೇರ್' ಚಿತ್ರ ಇದೀಗ ಚೀನಾದಲ್ಲಿ ಪ್ರದರ್ಶನ ಕಾಣುತ್ತಿದೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಮುಂಬೈ ನಂತರ ಚೀನಾ