ಬಾಲಿವುಡ್ ಎಂದರೆ ಅಲ್ಲಿ ಗಾಸಿಪ್ ಅವಿಭಾಜ್ಯ ಅಂಗ. ನಟ ನಟಿಯರ ನಡುವಿನ ಅಫೇರ್ ತುಂಬಾ ಕಾಮನ್ ವಿಚಾರ ಇಂದೊಬ್ಬ ನಟಿಯೊಂದಿಗೆ ತಿರುಗುತ್ತಿದ್ದ ನಟ ನಾಳೆ ಖುಲ್ಲಂಖುಲ್ಲಾ ಆಗಿ ತನ್ನ ಮತ್ತೊಬ್ಬ ಪ್ರೇಯಸಿಯೊಂದಿಗೆ ಇನ್ನೊಂದು ಪಾರ್ಟಿಯಲ್ಲಿ ಕಾಣಸಿಗುತ್ತಾನೆ. ಹಾಗಾಗಿ ನಟನಟಿಯರ ಪ್ರೀತಿ-ಪ್ರೇಮದ ವಿಚಾರಕ್ಕೆ ಬಂದಾಗ ಒಂದು ವರುಷ ಜೋಡಿಯಾಗಿ ಕಾಣೋದೇ ಹೆಚ್ಚು ಎಂಬಂಥಾ ಪರಿಸ್ಥಿತಿ ಇದೆ. ಹಾಗಿದ್ದರೂ, ಅಪರೂಪಕ್ಕೊಮ್ಮೆ ಕೆಲವು ನಿರಂತರ ಪ್ರೇಮ ಕಥಾನಕಗಳೂ ಇಲ್ಲದಿಲ್ಲ. ಅಭಿಷೇಕ್- ಐಸ್ವರ್ಯಾ ರೈ, ಕಾಜೋಲ್- ಅಜಯ್ ದೇವಗನ್, ಅಮಿತಾಬ್- ಜಯಾ ಬಚ್ಚನ್... ಹೀಗೆ ಕೆಲವೇ ಕೆಲವು ಉದಾಹರಣೆಗಳು ಕಣ್ಣ ಮುಂದಿವೆ. ಅಂಥ ಅಪರೂಪಿಗಳಲ್ಲಿ ಬಿಪಾಶಾ- ಜಾನ್ ಕೂಡಾ ಒಬ್ಬರು.
ಬಾಲಿವುಡ್‌ನ ಹಾಟ್ ಬೆಡಗಿ ಬಿಪಾಶಾ ಬಸು ಹಾಗೂ ಯುವತಿಯರ ಹೃದಯಕಳ್ಳ ಜಾನ್ ಅಬ್ರಾಹಂ ಅವರ ನಡುವಿನ ಪ್ರೀತಿಗೆ ಇದೀಗ ಭರ್ಜರಿ 9 ವರ್ಷ ತುಂಬಿದೆ. ಜಿಸ್ಮ್ ಚಿತ್ರದ ಸಂದರ್ಭದಲ್ಲಿ ಅಂಕುರಿಸಿದ ಪ್ರೇಮ ಇನ್ನೂ ಗಟ್ಟಿಯಾಗಿದೆ. ಈಗ ಅವರಿಬ್ಬರ ಪ್ರೇಮಕ್ಕೆ ಬರೋಬ್ಬರಿ 9 ವರ್ಷ!
ಬಾಲಿವುಡ್ಡಿನ ಗ್ಲ್ಯಾಮರ್ ಜಗತ್ತಿನಲ್ಲಿ ಪ್ರೇಮವನ್ನು ಸಂಭಾಳಿಸಿಕೊಳ್ಳುವುದು ಸುಲಭದ ಮಾತಲ್ಲ. ಆಗೀಗ ಅವರಿಬ್ಬರ ಪ್ರೇಮಕ್ಕೆ ಹಲವು ವಿಘ್ನಗಳು ಬಂದರೂ ಈಗಲೂ ಗಟ್ಟಿಯಾಗಿದೆ. ಬಿಪಾಶಾಗೂ ಸ್ಪತಃ ಈ ಬಗ್ಗೆ ಹೆಮ್ಮೆಯಿದೆ. ಜಾನ್ ನನ್ನ ಜಾನ್ ಎನ್ನುತ್ತಾಳೆ ಬಿಪಾಶಾ. ಅತ್ತ ಜಾನ್ ಬಿಪಾಶಾ ತನ್ನ ಜಾನೇ ಮನ್ ಅಂತಿದ್ದಾನೆ.
IFM
ಅದೆಲ್ಲಾ ಸರಿ, 9 ವರ್ಷದ ಪ್ರೇಮ ಅಂತೀರಿ, ಮದ್ವೆ ಯಾವಾಗ ಎಂದರೆ ಬಿಪಾಶಾ ಕೊಡುವ ಉತ್ತರವೇ ಬೇರೆ. ನಮ್ಮ ನಡುವೆ ಅತ್ಯದ್ಭುತ ಅನುಬಂಧವಿದೆ. ನಾವಿಬ್ಬರು ಪರಸ್ಪರ ಗಾಢವಾಗಿ ಪ್ರೀತಿಸ್ತಾ ಇದ್ದೀವಿ. ನನ್ನ ನಡುವೆ ಯಾವ ಅಂತರವೂ ಇಲ್ಲ. ಸುಖ, ಸಂತೋಷ, ನೋವು ಎಲ್ಲವನ್ನೂ ನಾವು ಪರಸ್ಪರ ಸಮಾನವಾಗಿ ಹಂಚಿಕೊಳ್ಳುತ್ತೀವಿ. ದಂಪತಿಗಳಲ್ಲಿ ಇವರುವ ಸಾಮರಸ್ಯ ನಮ್ಮಲ್ಲಿದೆ ಅಂದ ಮೇಲೆ ಮದ್ವೆ ಯಾಕೆ? ನಮೆ ಅದರ ಅಗತ್ಯ ಕಾಣೋದಿಲ್ಲ ಎನ್ನುತ್ತಾಳೆ ಈ ಹಾಟ್ ಬೆಡಗಿ.
ನಮ್ಮಿಬ್ಬರ ಪ್ರೇಮಕ್ಕೆ ಇಬ್ಬರ ಮನೆಯ ಹಿರಿಯರಿಂದಲೂ ಸಮ್ಮತಿಯಿದೆ. ಅವರ ಸಪೋರ್ಟ್ ಕೂಡಾ ನಮಗಿದೆ. ನಾವಿಬ್ಬರೂ ಜೊತೆಯಾಗಿಯೇ ಮುಂಬೈಯಲ್ಲಿ ಬಾಳುತ್ತಿದ್ದೇವೆ. ಹಾಗಾಗಿ ಸದ್ಯಕ್ಕೆ ಮದುವೆ ಬಗ್ಗೆ ಏನೂ ಪ್ಲಾನ್ ಮಾಡಿಲ್ಲ. ಆದರೆ ಇದರರ್ಥ, ನಮಗೆ ಮದುವೆಯೆಬ ಸಂಬಂಧದಲ್ಲಿ ನಂಬಿಕೆಯಿ್ಲಲ ಎಂದಲ್ಲ. ನಾವಿಬ್ಬರೂ, ಮದುವೆಯೆಂಬ ಸಂಬಂಧದ ಬಗ್ಗೆ ಅಪಾರ ಗೌರವ ಹೊಂದಿದ್ದೇವೆ. ಆದರೆ ನಮಗೆ ಸದ್ಯಕ್ಕೆ ಮದುವೆಯಾಗಬೇಕು ಎಂಬ ಒತ್ತಡವೇನೂ ಇಲ್ಲ. ಹಾಗಾಗಿ ಆ ಬಗ್ಗೆ ಸದ್ಯಕ್ಕೆ ಏನೂ ಯೋಚನೆಯಿಲ್ಲ ಎನ್ನುತ್ತಾರೆ ಬಿಪಾಶಾ.