ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ | ಸಂದರ್ಶನ | ಹಾಲಿವುಡ್ | ಕಿರುತೆರೆ
ಮುಖ್ಯ ಪುಟ ಮನರಂಜನೆ » ಬಾಲಿವುಡ್‌ » ಸಂದರ್ಶನ » ಶಾಹಿದ್ ಕಪೂರ್ ಎಂಬ ಚೆಲುವನ ಬೈಕ್ ಪುರಾಣ (Shahid Kapoor | Paathshaala | Badmaash Company | Mausam | Bollywood)
ಸಂದರ್ಶನ
Bookmark and Share Feedback Print
 
IFM
ಶಾಹಿದ್ ಕಪೂರ್ ಎಂಬ ಸುಂದರಾಂಗ ಸದ್ಯಕ್ಕಂತೂ ಬಾಲಿವುಡ್ಡಿನ ಹಾಟ್ ನಟ. ಈಗ ಚೋಟುದ್ದದ ಗಡ್ಡ ಬಿಟ್ಟು ರಫ್ ಅಂಡ್ ಟಫ್ ಆಗಿಯೂ ಕಾಣಿಸುತ್ತಿದ್ದಾರೆ ಶಾಹಿದ್. ಕರೀನಾ ಕೈಕೊಟ್ಟ ಮೇಲೆ ಚಿತ್ರರಂಗದಲ್ಲಿ ಮತ್ತಷ್ಟು ಹೆಸರು ಮಾಡಿರುವ ಶಾಹಿದ್‌ಗೆ ಬೈಕ್ ಎಂದರೆ ಪಂಚ ಪ್ರಾಣ. ಆದರೆ ಬೈಕ್ ಬಿಡುತ್ತಾ ರಸ್ತೆಯಲ್ಲಿ ಓಡಾಡಲು ಸಾಧ್ಯವಿಲ್ಲವಲ್ಲ ಇವರಿಗೆ ಅಂದುಕೋಬೇಡಿ. ಶಾಹಿದ್ ಮಧ್ಯರಾತ್ರಿಯಲ್ಲೆಲ್ಲಾ ಬೈಕ್ ತೆಗೆದುಕೊಂಡು ಮುಂಬೈನ ಬೀದಿಗಳಲ್ಲಿ ರೈಡ್ ಹೋಗುತ್ತಾರಂತೆ!

ಹೌದು. ಇವರು ವೇಷ ಮೆರೆಸಿ ಹೋಗೋದಿಲ್ಲ. ರಾತ್ರಿಯಾದೊಡನೆ ಶೂಟಿಂಗ್ ಮುಗಿಸಿ ಮನೆಗೆ ಬಂದು ಕೊಂಚ ರೆಸ್ಟ್ ತೆಗೊಂಡ ಮೇಲೆ ಬೈಕ್ ಹತ್ತಿ ಮುಂಬೈನ ಗಲ್ಲಿ ಗಲ್ಲಿಗಳಲ್ಲಿ ಸುತ್ತಾಡುತ್ತಾರಂತೆ. ರಸ್ತೆಯಲ್ಲಿ ಸಿಗ್ನಲ್ ಬಳಿ ಸೆಖೆಯೆಂದು ಹೆಲ್ಮೆಟ್ ತೆಗೆದಾಗ ಕೆಲವರು ಅಚ್ಚರಿಯ ನಗು ಬೀರಿ ಶಾಹಿದ್ ಕಡೆ ನೋಡಿ ಮುಗುಳ್ನಗುತ್ತಾರಂತೆ. ಇನ್ನೂ ಕೆಲವರು ನೋಡಿ ತಮ್ಮ ಪಾಡಿಗೆ ತಾವು ಹೋಗುತ್ತಾರಂತೆ.

ನನಗೆ ಬೈಕ್ ಅಂದ್ರೆ ಪ್ರಾಣ. ದಿನವೂ ಬೈಕ್ ಏರಿ ಕೊಂಚ ರೈಡ್ ಹೋಗದಿದ್ದರೆ ಯಾಕೋ ಬೇಜಾರಾಗುತ್ತದೆ. ಒಂದು ರೈಡ್ ಹೋದ್ರೆ ರಿಲ್ಯಾಕ್ಸ್ ಆದಂತಾಗುತ್ತದೆ. ಪ್ರತಿ ನಟನಿಗೂ ತನ್ನದೇ ಆದ ಖಾಸಗಿ ಲೋಕವಿರುತ್ತದೆ. ನಾನಂತೂ ನನ್ನ ಖಾಸಗಿ ಜಗತ್ತನ್ನು ತುಂಬ ಇಷ್ಟಪಡುತ್ತೇನೆ. ಅದಕ್ಕಾಗಿ ರಾತ್ರಿ ಹೊತ್ತು ಒಂದರ್ಧ ಗಂಟೆ ಬೈಕ್ ತೆಗೊಂಡು ಸುತ್ತಾಡಿ ಬಂದಾಗ ಹಾಯೆನಿಸುತ್ತೆ ಎನ್ನುತ್ತಾರೆ.

IFM
ಹಾಗಾದ್ರೆ ಜನ ನಿಮ್ಮನ್ನು ನೋಡಿ ಮುತ್ತಿಕೊಳ್ಳೋದಿಲ್ವಾ ಎಂದರೆ, ಹಾಗೇನೂ ಇಲ್ಲ. ಸಿಗ್ನಲ್ ಬಂದಾಗ ನಿಲ್ಲಿಸಿದಾಗ ಹೆಲ್ಮೆಟ್ ತೆಗೆದ್ರೆ ಜನ ಮುಖ ಗುರುತಿಸ್ತಾರೆ. ಕೆಲವರು ನೋಡಿ ನಕ್ಕು ಮುಂದೆ ಹೋಗ್ತಾರೆ ಇನ್ನೂ ಕೆಲವರು ಕ್ಯಾರೇ ಅನ್ನದೆ ತಮ್ಮ ಪಾಡಿಗೆ ತಾವಿರ್ತಾರೆ. ನನ್ನನ್ನು ಜನ ಗುರುತಿಬಿಟ್ರೆ ಏನ್ ಮಾಡೋದು ಅಂತ ಬಹುತೇಕ ನಟನಟಿಯರು ಹೀಗೆ ಸಾರ್ವಜನಿಕರಾಗಿ ಬರೋದೇ ಕಡಿಮೆ. ಆದ್ರೆ ನಮ್ಮ ಪಾಡಿಗೆ ನಾವು ಯಾವ ಭಯ, ಮುಜುಗರ ಇಲ್ದೆ, ಎಲ್ಲರಂತೆ ಇದ್ರೆ ಜನರು ನಮ್ಮ ಪಾಡಿಗೆ ನಮ್ಮನ್ನು ಇರಲು ಬಿಡ್ತಾರೆ ಎನ್ನುತ್ತಾರೆ ಶಾಹಿದ್.

ನಾನು ಯಾವಾಗಲು ತುಂಬ ಫ್ರೆಂಡ್ಸ್ ಜೊತೆ ಪಾರ್ಟಿ ಮಾಡ್ತಾ ಕಾಲ ಕಳೆಯೋದಿಲ್ಲ. ನಾನು ಹಾಗೆ ತುಂಬ ಜನರ ಜೊತೆ ಬೆರೆಯೋದಿಲ್ಲ. 2-3 ಮಂದಿ ಕ್ಲೋಸ್ ಫ್ರೆಂಡ್ಸ್ ಜೊತೆ ಹೆಚ್ಚು ಬೆರೆಯುತ್ತೇನೆ. ಮಿಕ್ಕ ಸಮಯದಲ್ಲೆಲ್ಲ ಖಾಸಗಿತನ ಇಷ್ಟಪಡುತ್ತೇನೆ ಎನ್ನುತ್ತಾರೆ ಶಾಹಿದ್. ಶಾಹಿದ್ ಕಪೂರ್ ಅವರ ಪಾಠ್‌ಶಾಲಾ ಚಿತ್ರ ಈಗಷ್ಟೇ ಬಿಡುಗಡೆಯಾಗಿದೆ. ಬದ್ಮಾಶ್ ಕಂಪನಿ ಚಿತ್ರ ಸದ್ಯದಲ್ಲೇ ಬಿಡುಗಡೆಯಾಗಲಿದೆ. ಶಾಹಿದ್ ಸದ್ಯ ತನ್ನ ತಂದೆಯ ಚಿತ್ರ 'ಮೌಸಮ್‌'ನಲ್ಲಿ ಬ್ಯುಸಿ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಶಾಹಿದ್ ಕಪೂರ್, ಬೈಕ್, ಮೌಸಮ್, ಪಾಠಶಾಲಾ, ಬಾಲಿವುಡ್