ಮುಖ್ಯ ಪುಟಮನರಂಜನೆ » ಬಾಲಿವುಡ್ » ಸಂದರ್ಶನ » ಇದೀಗ ತಮಿಳು ಭಾಷೆಯಲ್ಲಿ ನಟಿಸುವುದು ತೃಪ್ತಿ ತಂದಿದೆ:ಐಶ್ (Aishwarya Rai | Tamil | Endhiran | S. Shankar | Actress | Jeans | Iruvar)
ಏಷ್ಯಾದಲ್ಲಿ ಅತಿ ಹೆಚ್ಚಿನ ಬಜೆಟ್‌ನ ಚಿತ್ರ ಎಂದು ಖ್ಯಾತಿ ಪಡೆದಿರುವ 'ಎಂದಿರನ್' ಸೇರಿದಂತೆ ನಾಲ್ಕು ತಮಿಳು ಚಿತ್ರಗಳಲ್ಲಿ ನಟಿಸಿರುವ ಬಾಲಿವುಡ್ ಖ್ಯಾತ ನಟಿ ಐಶ್ವರ್ಯ ರೈ, ತಮಿಳು ಚಿತ್ರರಂಗದಲ್ಲಿ ನಟಿಸುವುದು ಉತ್ತಮ ಅನುಭವವಾಗಿದೆ. ಬಾಲಿವುಡ್‌ನ ಪ್ರಮುಖ ನಟಿಯರು ಹೆಚ್ಚಿನ ಸಂಖ್ಯೆಯಲ್ಲಿ ತಮಿಳು ಚಿತ್ರಗಳಲ್ಲಿ ನಟಿಸಿದ್ದಾರೆ. ಆದರೆ, ನಾನು ಕೆಲ ಚಿತ್ರಗಳಲ್ಲಿ ಮಾತ್ರ ನಟಿಸಿದ್ದಾಗಿ ಹೇಳಿದ್ದಾರೆ.
ತಮಿಳು ಚಿತ್ರಗಳಲ್ಲಿ ನಟಿಸುವುದು ಖಂಡಿತವಾಗಿ ತೃಪ್ತಿ ನೀಡುವುದರಿಂದ ನನಗೆ ನಟಿಸುವುದು ತುಂಬಾ ಇಷ್ಟ. ಹಾಗೆಂದ ಮಾತ್ರಕ್ಕೆ ನಿರಂತರವಾಗಿ ತಮಿಳಉ ಭಾಷೆಯ ಚಿತ್ರಗಳಲ್ಲಿ ನಟಿಸಲು ಸಾಧ್ಯವಿಲ್ಲ ಎಂದು ರೈ ಸಂದರ್ಶನದಲ್ಲಿ ತಿಳಿಸಿದ್ದಾರೆ.
ಕಳೆದ ಹಲವು ವರ್ಷಗಳಿಂದ ತಮಿಲು ಚಿತ್ರಗಳಲ್ಲಿ ನಟಿಸಿದ್ದೇನೆ. ನನಗೆ ತಮಿಳು ಭಾಷೆ ಅರ್ಥವಾಗುತ್ತದೆ. ಭಾಷೆಯನ್ನು ಗೌರವಿಸುತ್ತೇನೆ.ಆದ್ದರಿಂದ ಹೆಚ್ಚಿನ ಹೇಳಿಕೆಗಳನ್ನು ನೀಡುವ ಮೂಲಕ ವಿವಾದಗಳನ್ನು ಸಷ್ಟಿಸಲಾರೆ ಎಂದು ಐಶ್ವರ್ಯ ಹೇಳಿಕೆ ನೀಡಿದ್ದಾರೆ.
ಡೈಲಾಗ್ ಡೆಲಿವೆರಿ ಕಲಿಯಲು ಸಾಧ್ಯವಾಗುತ್ತದೆ. ಹಿಂದೆ 'ಇರುವರ್'ಮತ್ತು 'ಜೀನ್ಸ್' ಚಿತ್ರಗಳಲ್ಲಿ ನಟಿಸುವಾಗ ಎದುರಾದ ಭಾಷಾ ಸಮಸ್ಯೆ ಇದೀಗ ಈಡೇರಿದ್ದು, ತುಂಬಾ ಸುಲಲಿತವಾಗಿ ಉಚ್ಚರಿಸಲು ಸಾಧ್ಯವಾಗಿದೆ. ಐಶ್ವರ್ಯ ರೈ ಇತ್ತಿಚೆಗೆ ದ್ವಿಭಾಷೀಯ ರಾವಣ ಚಿತ್ರದಲ್ಲಿ ನಟಿಸಿರುವುದನ್ನು ಸ್ಮರಿಸಬಹುದು.
ಭಾರತೀಯ ಚಿತ್ರರಂಗದಲ್ಲಿ ಅತಿ ಹೆಚ್ಚು ಬಜೆಟ್(175 ಕೋಟಿ ರೂಪಾಯಿ)ಚಿತ್ರವೆಂದು ಖ್ಯಾತಿ ಪಡೆದ ತಮಿಳು ಭಾಷೆಯ "ಎಂದಿರನ್" ಹಾಗೂ ಹಿಂದಿ ಭಾಷೆಯ "ರೋಬೋಟ್" ಚಿತ್ರಗಳು ಅಕ್ಟೋಬರ್ 1 ರಂದು ವಿಶ್ವದಾದ್ಯಂತ ಬಿಡುಗಡೆಯಾಗಿ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿವೆ.
IFM
"ಎಂದಿರನ್" ಚಿತ್ರದಲ್ಲಿ ನನ್ನ ಪಾತ್ರ ವಿಭಿನ್ನವಾಗಿದ್ದು, ನಟನೆ ಸಹಜವಾಗಿ ಹೊರಬಂದಿದೆ.ಇಂತಹ ಕೆಲ ಅಪರೂಪದ ಚಿತ್ರಗಳಲ್ಲಿ ನಟಿಸುವ ಅವಕಾಶ ದೊರೆತಿದೆ. ಚಿತ್ರದಲ್ಲಿ ನಾಯಕಿಯ ಪಾತ್ರ ಕಷ್ಟವಾಗಿರಲಿಲ್ಲ. ಇಂತಹ ಪಾತ್ರವನ್ನು ಬಾಲಿವುಡ್ ನಾಯಕಿಯರು ಅನೇಕ ಚಿತ್ರಗಳಲ್ಲಿ ಮಾಡಿರಬಹುದು ಎಂದು ನುಲಿದಿದ್ದಾರೆ.
ಚಿತ್ರದ ನಿರ್ದೇಶಕ ಶಂಕರ್, ಮನೋರಂಜನೆಭರಿತ ಚಿತ್ರವನ್ನು ನಿರ್ದೇಶಿಸಿದ್ದಾರೆ. ಮನೋರಂಜನೆ ಯುಗವನ್ನು ತಂತ್ರಜ್ಞಾನದೊಂದಿಗೆ ಸಂಯೋಜಿಸಿದ್ದಾರೆ. ನನಗೆ "ಎಂದಿರನ್" ಚಿತ್ರದಲ್ಲಿ ನಟಿಸಿರುವುದಕ್ಕೆ ತುಂಬಾ ಸಂತೋಷವಾಗಿದೆ ಎಂದು ಐಶ್ ಬೇಬಿ ಸಂತಸ ವ್ಯಕ್ತಪಡಿಸಿದ್ದಾರೆ.
1998ರಲ್ಲಿ ಜೀನ್ಸ್ ಚಿತ್ರದಲ್ಲಿ ನಟಿಸಿದ ನಂತರ, ತಮಿಳು ಭಾಷೆಯಲ್ಲಿ ನಟಿಸಿದ "ಎಂದಿರನ್" ಎರಡನೇ ಚಿತ್ರವಾಗಿದೆ.