ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ | ಸಂದರ್ಶನ | ಹಾಲಿವುಡ್ | ಕಿರುತೆರೆ
ಮುಖ್ಯ ಪುಟ ಮನರಂಜನೆ » ಬಾಲಿವುಡ್‌ » ಸುದ್ದಿ/ಗಾಸಿಪ್ » ಹಾಲಿವುಡ್ ಚಿತ್ರದಲ್ಲಿ ಶಿಲ್ಪಾ ನಾಯಕಿ
ಸುದ್ದಿ/ಗಾಸಿಪ್
Feedback Print Bookmark and Share
 
ಸೆಲಿಬ್ರಿಟಿ ಬಿಗ್ ಬ್ರದರ್ ಶೋನಿಂದ ವಿಶ್ವ ಖ್ಯಾತಿಯನ್ನು ಪಡೆದು, ಇದೀಗ ತಾನೆ ಬ್ರಿಟಿಶ್ ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಗೌರವಕ್ಕೆ ಪಾತ್ರರಾಗುವ ಮೂಲಕ ಕೀರ್ತಿಯ ಶಿಖರವನ್ನು ಹಂತ ಹಂತವಾಗಿ ಏರುತ್ತಿರುವ ಚತುರ್ಭಾಷಾ ನಟಿ ಶಿಲ್ಪಾ ಶೆಟ್ಟಿ, ಈಗ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ.

ಇಯಾನ್ ಪ್ರೊಡಕ್ಷನ್ಸ್‌ರವರ ಜೇಮ್ಸ್ ಬಾಂಡ್ ಸರಣಿಯ 23ನೇ ಚಿತ್ರದಲ್ಲಿ ನಾಯಕಿಯಾಗಿ ಶಿಲ್ಪಾರನ್ನು ಪರಿಗಣಿಸಲಾಗುತ್ತಿದೆ ಎಂಬ ಸುದ್ದಿಯನ್ನು ಪ್ರಮುಖ ದಿನಪತ್ರಿಕೆಯೊಂದು ಪ್ರಕಟಿಸಿದೆ.

ಪಿಯರ್ಸ್ ಬ್ರಾಸ್ನನ್ ನಂತರದ ಬಾಂಡ್ ಆಗಿ 'ಕ್ಯಾಸಿನೊ ರಾಯಲ್'ನಲ್ಲಿ ಆ ಪಾತ್ರವನ್ನು ಸಮರ್ಥವಾಗಿ ನಿರ್ವಹಿಸಿದ ಬ್ರಿಟಿಶ್ ನಟ ಡೇನಿಯಲ್ ಕ್ರೇಗ್‌ರ ಎರಡನೆ ಬಾಂಡ್ ಚಿತ್ರವಾಗಲಿರುವ ಈ ಚಿತ್ರ 2008ರ ಅಂತ್ಯಕ್ಕೆ ಬಿಡುಗಡೆಗೊಳ್ಳುವ ಸಾಧ್ಯತೆಯಿದೆ.

ಭಾರತದಲ್ಲಿ ಮಾತ್ರವಲ್ಲದೆ ಸೆಲಿಬ್ರಿಟಿ ಬಿಗ್ ಬ್ರದರ್ ಶೋ ನಂತರ ವಿಶ್ವದೆಲ್ಲೆಡೆ ಬೃಹತ್ ಅಭಿಮಾನಿ ಬಳಗವನ್ನು ಹೊಂದಿರುವುದರ ಜತೆಗೆ ಸೌಂದರ್ಯ, ಪ್ರತಿಭೆ ಹಾಗೂ ಸುಂದರ ಮೈಮಾಟವನ್ನು ಹೊಂದಿರುವುದು ಬಾಂಡ್ ನಾಯಕಿಯಾಗಿ ಶಿಲ್ಪಾರನ್ನು ಪರಿಗಣಿಸುವುದಕ್ಕೆ ಕಾರಣವಿರಬಹುದು ಎನ್ನಲಾಗಿದೆ.