ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ | ಸಂದರ್ಶನ | ಹಾಲಿವುಡ್ | ಕಿರುತೆರೆ
ಮುಖ್ಯ ಪುಟ ಮನರಂಜನೆ » ಬಾಲಿವುಡ್‌ » ಸುದ್ದಿ/ಗಾಸಿಪ್ » ಬಾಲಿವುಡ್ ನಟಿಯಾಗುವುದು ಕನಸಾಗಿರಲಿಲ್ಲಃ ಬಿಪಾಶಾ
ಸುದ್ದಿ/ಗಾಸಿಪ್
Feedback Print Bookmark and Share
 
ನಾನು ಬಾಲಿವುಡ್ ನಟಿಯಾಗುತ್ತೇನೆ ಎಂದು ಭಾವಿಸಿರಲಿಲ್ಲ. ನನಗೆ ಸಿಕ್ಕ ಒಂದು ಅವಕಾಶ ಇಲ್ಲಿ ಮೇಲಕ್ಕೇರಿಸಿತು' ಎಂದು ಬಾಲಿವುಡ್ ನಟಿ ಬಿಪಾಶಾ ಬಸು ಹೇಳಿದ್ದಾರೆ.

'ನಾನು ರೂಪದರ್ಶಿಯಾಗಿ ಸಂತೋಷದಿಂದ ಕಾರ್ಯನಿರ್ವಹಿಸುತ್ತಿದ್ದೆ. ಆದರೆ, ಆ ಕ್ಷೇತ್ರ ಬೇಸರವೆನಿಸಿತು. ಇದರಿಂದ ಬಾಲಿವುಡ್‌ನಲ್ಲಿ ಅವಕಾಶ ಸಿಕ್ಕಿತು. ಅದರಿಂದ ನಟಿಯಾದೆ. ನಾನೆಂದೂ ನಟಿಯಾಗುವ ಇಚ್ಛೆ ಹೊಂದಿರಲಿಲ್ಲ' ಎಂದು ಸುದ್ದಿ ಸಂಸ್ಥೆಗೆ ಹೇಳಿದ್ದಾರೆ.

'ಆದರೆ, ಈಗ ಇದನ್ನು ಸಂಪೂರ್ಣವಾಗಿ ಸಂತೋಷಪಡುತ್ತಿದ್ದೇನೆ ಹಾಗೂ ಈ ಕ್ಷೇತ್ರವು ನನಗೆ ಬೇಸರವಾತ್ತದೆ ಎಂದು ಭಾವಿಸುವುದಿಲ್ಲ. ಈಗಲೂ ನಾನು ಇದರಲ್ಲಿ ಏನಾದರೂ ಹೊಸತನ್ನು ಹುಡುಕುತ್ತಿರುತ್ತೇನೆ' ಎಂದು ಬಿಪಾಶಾ ನುಡಿದರು.

'ಕಾರ್ಪೊರೇಟ್', 'ರಾಜ್' ಹಾಗೂ 'ಓಂಕಾರ್'ಗಳಂತಹ ಹಿಟ್‌ ಚಿತ್ರಗಳಲ್ಲಿ ಬಿಪಾಶಾ ನಟಿಸಿದ್ದಾರೆ.

ಒಂದು ವರ್ಷಕ್ಕೆ ಕೇವಲ ಒಂದು ಅಥವಾ ಎರಡು ಚಿತ್ರಗಳಲ್ಲಿ ಮಾತ್ರ ನಟಿಸುವ ಯೋಜನೆ ಹಾಕಿಕೊಂಡಿದ್ದು, ಇದು ತಮಗೆ ತೃಪ್ತಿ ನೀಡುತ್ತದೆ ಎಂದು ಬಿಪಾಶಾ ಹೇಳಿದ್ದಾರೆ.

ಕೇವಲ ಆರು ವರ್ಷಗಳಲ್ಲಿ ಚಲನಚಿತ್ರ ರಂಗಕ್ಕೆ 33 ಚಿತ್ರಗಳನ್ನು ನೀಡಿರುವ ನಟಿ ಬಿಪಾಶಾ, 'ಗೋಲ್', 'ರೇಸ್', 'ಪಾಂಖ್' ಹಾಗೂ 'ಮಿ.ಫ್ರಾಡ್' ಚಿತ್ರಗಳಲ್ಲಿ ಅಭಿನಯಿಸಲಿದ್ದಾರೆ.

'ಬಾಲಿವುಡ್‌ನಲ್ಲಿ ಸಾಧನೆ ಮಾಡಿರುವ ನೆಮ್ಮದಿಯಿದೆ. ಆದರೆ, ಜೀವನದ ಪ್ರತಿಯೊಂದು ಕ್ಷಣಗಳನ್ನು ಇಲ್ಲಿಯೇ ಕಳೆಯಲು ಇಚ್ಛಿಸಿಲ್ಲ. ಅಲ್ಲದೆ ನಾನು ಹಣಕ್ಕಾಗಿ ಈ ಕಾರ್ಯ ಮಾಡುತ್ತಿಲ್ಲ' ಎಂದು ಬಿಪಾಶಾ ವಿವರಿಸಿದರು.

'ಚಿತ್ರ ತಯಾರಿಕೆಯಲ್ಲಿ ನನಗೆ ತುಂಬಾ ಆಸಕ್ತಿ ಇದೆ. ನಾನು ನಟನೆಯನ್ನು ಕೈಬಿಟ್ಟಲ್ಲಿ, ಚಿತ್ರ ತಯಾರಿಕೆಯ ಕೆಲವು ಹಂತಗಳಲ್ಲಿ ಸೇರಿಕೊಳ್ಳುವ ಅಭಿರುಚಿ ಹೊಂದಿದ್ದೇನೆ. ಸಂಭಾಷಣೆ ಅಥವಾ ಇತರರಿಗೆ ಈ ಕುರಿತು ನೆರವಾಗಲು ಇಚ್ಛಿಸಿದ್ದೇನೆ. ಆದರೆ, ಚಿತ್ರೋದ್ಯಮದೊಂದಿಗೆ ನನ್ನನ್ನು ನಾನು ತೊಡಗಿಸಿಕೊಂಡಿದ್ದು, ನಿಜಕ್ಕೂ ಇದು ಭ್ರಮಾಲೋಕವೆ ಸರಿ' ಎಂದು ನಟಿ ಹೇಳಿದರು.