ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ | ಸಂದರ್ಶನ | ಹಾಲಿವುಡ್ | ಕಿರುತೆರೆ
ಮುಖ್ಯ ಪುಟ ಮನರಂಜನೆ » ಬಾಲಿವುಡ್‌ » ಸುದ್ದಿ/ಗಾಸಿಪ್ » "ಚಕ್‌ದೇ..." ಯಶಸ್ಸಿನಿಂದ ಆಂತರಿಕ ನೆಮ್ಮದಿ
ಸುದ್ದಿ/ಗಾಸಿಪ್
Feedback Print Bookmark and Share
 
PTI
ಹೊಸ ಚಿತ್ರ "ಚಕ್‌ದೇ ಇಂಡಿಯಾ"ದ ಯಶಸ್ಸು ತಮಗೆ ಆಂತರಿಕ ಶಾಂತಿ ನೀಡಿದೆ ಎಂದು ಬಾಲಿವುಡ್ ಸುಪರ್‌ಸ್ಟಾರ್ ಶಾರುಖ್ ಖಾನ್ ತಿಳಿಸಿದ್ದಾರೆ.

ತಮ್ಮ ಜೀವನಚರಿತ್ರೆ "ಕಿಂಗ್ ಆಫ್ ಬಾಲಿವುಡ್: ಶಾರುಖ್ ಖಾನ್" ಬಿಡುಗಡೆಯ ಸಮಾರಂಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಮ್ಮ ತಂಡವು ಫೈನಲ್ ಪಂದ್ಯ ಗೆದ್ದು ವಿಶ್ವ ಕಪ್ ಎತ್ತುವ ಸಂದರ್ಭ ತಮ್ಮ ಪಾತ್ರದ ಪ್ರತಿಕ್ರಿಯೆಯ ದೃಶ್ಯವು ಅತ್ಯಂತ ನೆಚ್ಚಿನ ದೃಶ್ಯವಾಗಿತ್ತು ಎಂದು ಹೇಳಿದ್ದಾರೆ. "ಇದು ನನ್ನ ಒಳಮನಸ್ಸಿಗೆ ಆನಂದ ನೀಡಿದೆ" ಎಂದವರು ಪ್ರತಿಕ್ರಿಯಿಸಿದ್ದಾರೆ.

ಚಿತ್ರದ ಯಶಸ್ಸು ಕ್ರೀಡೆಯನ್ನೇ ಥೀಮ್ ಆಗಿರುವ ಚಿತ್ರಗಳ ಸರಣಿ ನಿರ್ಮಾಣಕ್ಕೆ ಕಾರಣವಾಗಲಿದೆ ಎಂಬ ಸಿದ್ಧಾಂತವನ್ನು ತಳ್ಳಿ ಹಾಕಿದ ಶಾರುಖ್, ಚಿತ್ರವೊಂದರ ಯಶಸ್ಸು ಅಥವಾ ವೈಫಲ್ಯವು ಯಾವುದೇ ಟ್ರೆಂಡ್ ಅನ್ನು ರೂಪಿಸುತ್ತದೆ ಎಂಬ ಸಿದ್ಧಾಂತ ಸರಿಯಲ್ಲ. ಪ್ರೇಕ್ಷಕರು ಉತ್ತಮ ಚಿತ್ರವೊಂದನ್ನು ನೋಡಲು ಬಯಸುತ್ತಾರೆ ಎಂಬುದನ್ನಷ್ಟೇ ಇದು ತೋರಿಸುತ್ತದೆ ಎಂದು ಹೇಳಿದರು.

ಅನುಪಮಾ ಚೋಪ್ರಾ ಅವರು ತಮ್ಮ ಜೀವನಚರಿತ್ರೆ ಬರೆಯುವ ಉತ್ಸಾಹ ಪ್ರಕಟಿಸಿದಾಗ, ತಾನೇ ತನ್ನ ಆತ್ಮಕಥೆ ಬರೆಯಲು ನಿರ್ಧರಿಸಿದ್ದೆ ಎಂದು ತಿಳಿಸಿದ ಅವರು, ಈ ಪುಸ್ತಕವು ಕೇವಲ ನನ್ನ ಜೀವನದ ಸುತ್ತ ಸುತ್ತುವುದಿಲ್ಲ. ಬದಲಾಗಿ 1990ರಿಂದೀಚೆಗೆ ಹಿಂದಿ ಸಿನಿಮಾ ರಂಗದಲ್ಲಿನ ಆಗುಹೋಗುಗಳ ಮೇಲೂ ಬೆಳಕು ಚೆಲ್ಲುತ್ತದೆ ಎಂದು ನುಡಿದರು. ಕೆಲವು ವರ್ಷಗಳ ಬಳಿಕ ನಾನೇ ಬರೆಯುತ್ತಿರುವ ಆತ್ಮಕಥನ ಬೆಳಕು ಕಾಣಲಿದೆ ಎಂದೂ ಅವರು ಹೇಳಿದರು.

ತನ್ನ ಮೇಲೆ ಪುಸ್ತಕಗಳನ್ನೂ ಬರೆಯುತ್ತಾರೆ ಎಂಬುದರ ಬಗ್ಗೆ ತನಗೆ ಅತೀವ ಆನಂದವಾಗುತ್ತಿದೆ. ಆದರೆ ಇದೊಂದು ವಿಚಿತ್ರ ಅನಿಸುತ್ತಿದೆ ಮತ್ತು ನನಗೆ ವಯಸ್ಸಾಗಿದೆ ಎಂದು ಯೋಚಿಸಲು ಕಾರಣವಾಗುತ್ತಿದೆ ಎಂದ ಅವರು, ಪುಸ್ತಕದಲ್ಲಿ ನನ್ನ ಬಗ್ಗೆ ಬರೆದಿರುವ ಒಳ್ಳೆಯ ಅಂಶಗಳನ್ನು ಸಮರ್ಥಿಸುವ ನಿಟ್ಟಿನಲ್ಲಿ ಮಹತ್ವವಾದುದನ್ನೇನಾದರೂ ಭವಿಷ್ಯದಲ್ಲಿ ಮಾಡಬೇಕೆಂದು ಯೋಚಿಸುತ್ತಿರುವುದಾಗಿ ನುಡಿದರು.