ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ | ಸಂದರ್ಶನ | ಹಾಲಿವುಡ್ | ಕಿರುತೆರೆ
ಮುಖ್ಯ ಪುಟ ಮನರಂಜನೆ » ಬಾಲಿವುಡ್‌ » ಸುದ್ದಿ/ಗಾಸಿಪ್ » ಸೆಲಿನಾಗೆ ಪ್ರಶಸ್ತಿಗಳ ಸುರಿಮಳೆ
ಸುದ್ದಿ/ಗಾಸಿಪ್
Feedback Print Bookmark and Share
 
ಮಾದಕ ಕಂಗಳ ಸೆಲಿನಾ ಜೇಟ್ಲಿಗೆ 2001ರ ಮಿಸ್ ಇಂಡಿಯಾ ಪ್ರಶಸ್ತಿಯ ಗರಿಯ ಜತೆಗೆ ಇನ್ನೂ ಅನೇಕ ಸೌಂದರ್ಯ ಪ್ರಶಸ್ತಿಗಳು ಮುಡಿಗೇರಿದೆ. ಬಾಲಿವುಡ್‌ನ ಅತ್ಯಂತ ಸೆಕ್ಸಿ ತಾರೆ ಯಾರೆಂದು ಪತ್ತೆಹಚ್ಚಲು ಟಿನ್ಸೆಲ್ ನಗರದ ಪ್ರಖ್ಯಾತ ಮಾಧ್ಯಮವೊಂದು ಜನಾಭಿಮತ ನಡೆಸಿತು.

ಅತ್ಯಂತ ಸೆಕ್ಸಿ ನಟಿಯೆಂಬ ಹಣೆಪಟ್ಟಿ ಸಿಕ್ಕಿದ್ದು ಬೇರಾರಿಗೂ ಅಲ್ಲ, ಸೆಲಿನಾ ಜೇಟ್ಲಿಗೆ. ಅತ್ಯಂತ ಸುಂದರವಾಗಿ ಕಾಣುವುದು ಕೆಲವೊಮ್ಮೆ ಸಹಾಯಕ್ಕೆ ಬರುತ್ತದೆ. ಆದರೆ ಕೆಲವು ಬಾರಿ ಸಾಕುಪ್ರಾಣಿಗಳ ಮೇಲಿನ ಮೋಹವೂ ನೆರವಿಗೆ ಬರುತ್ತದೆ.

ಸೆಲಿನಾ ಜೇಟ್ಲಿಗೆ ಮುದ್ದಿನ ಸಾಕುಪ್ರಾಣಿಗಳ ಬಗ್ಗೆ ಅಪಾರ ಮಮತೆ. ಈ ಮಮತೆಯಿಂದಾಗಿ ಮ್ಯಾಕ್ಸಿಮ್ ನಿಯತಕಾಲಿಕದ ಮುಖಪುಟದಲ್ಲಿ ಅವಳು ಮಿಂಚುವಂತಾಯಿತು. ಇಷ್ಟೇ ಅಲ್ಲ. ಮಿಸ್ ಮಾರ್ಗೊ ಸುಂದರ ತ್ವಚೆ, ಇಂಡಿಯಾ ಟೈಮ್ಸ್ ಸರ್ಫರ್ಸ್ ಚಾಯ್ಸ್ ಮತ್ತು ಎಂಟಿವಿಯ ಮೋಸ್ಟ್ ವಾಂಟಡ್ ಪ್ರಶಸ್ತಿಗಳು ಸೆಲಿನಾ ಬುಟ್ಟಿಗೆ ಬಿದ್ದಿದೆ.

ವರ್ಷದ ಅತ್ಯಂತ ಹಾಟ್ ಮತ್ತು ಸೆಕ್ಸಿ ಸೈರನ್ ಸೆಲಿನಾ ನಟನೆಗೆ ಸ್ವತಃ 10ಕ್ಕೆ 8 ಅಂಕಗಳನ್ನು ಕೊಡುತ್ತಾಳೆ. ಆದರೆ ಅದರ ಬಗ್ಗೆ ನಮ್ಮ ಪ್ರತಿಕ್ರಿಯೆಯೇನೂ ಇಲ್ಲ. ಆದರೆ 'ಕೂಲ್" ಆಗಿರುವ ಸ್ವಭಾವವನ್ನೇ ಉಳಿಸಿಕೊಂಡರೆ ಸೆಲಿನಾ ಇನ್ನೂ ಮೇಲೇರುವುದು ಖಚಿತ.