ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ | ಸಂದರ್ಶನ | ಹಾಲಿವುಡ್ | ಕಿರುತೆರೆ
ಮುಖ್ಯ ಪುಟ ಮನರಂಜನೆ » ಬಾಲಿವುಡ್‌ » ಸುದ್ದಿ/ಗಾಸಿಪ್ » ಅನುಭವಗಳ ತುಡಿತದ ಅನುಪಮ್ ಖೇರ್
ಸುದ್ದಿ/ಗಾಸಿಪ್
Feedback Print Bookmark and Share
 
ನಟನೊಬ್ಬ ಅಭಿನಯಕ್ಕೆ ಇಳಿದನೆಂದರೆ ಅದರ ಫಲಶ್ರುತಿಯ ಬಗ್ಗೆ ಯೋಚಿಸುವುದಿಲ್ಲ. ಧೋಕಾ ಚಿತ್ರದಲ್ಲಿ ಅನುಪಮ್ ಖೇರ್ ಕಾಶ್ಮೀರಿ ಮುಸ್ಲಿಮನ ಪಾತ್ರದಲ್ಲಿ ಅಭಿನಯಿಸಿದಾಗ ಸಹಜವಾಗಿ ಕಾಶ್ಮೀರಿ ಬ್ರಾಹ್ಮಣರ ಆಕ್ಷೇಪದ ಧ್ವನಿ ಎದ್ದಿತು.

"ನಿಜ ಜೀವನದಲ್ಲಿ ನಾನು ಕಾಶ್ಮೀರಿ ಪಂಡಿತ. ಆದರೆ ಧೋಕಾದಲ್ಲಿ ವ್ಯವಸ್ಥೆಗೆ ಬಲಿಪಶುವಾದ ಕಾಶ್ಮೀರಿ ಮುಸ್ಲಿಮನ ಪಾತ್ರ ನಿರ್ವಹಿಸಿದ್ದೇನೆ. ಇನ್ನೊಂದು ಬದಿಯಿಂದ ಮೂಲಭೂತವಾದ ಮತ್ತು ತೀವ್ರವಾದದ ದುರಂತವನ್ನು ಅವಲೋಕಿಸುವ ಪಾತ್ರ. ಆದರೆ ಕೆಲವು ಜನರ ಆಕ್ಷೇಪಗಳಿಗೆ ನಾನು ಜಗ್ಗುವುದಿಲ್ಲ.

ಅನುಭವದ ತುಡಿತ ಕಲಾವಿದನಲ್ಲಿ ಸದಾ ಇರಬೇಕು. ಅನುಭವ ಸಿಗುವುದಾದರೆ ಹಂತಕ, ವಿದೂಷಕ ಅಥವಾ ಶವದ ಪಾತ್ರ ನಿರ್ವಹಿಸಲೂ ಸೈ" ಎಂದು ಅನುಪಮ್ ಹೇಳುತ್ತಾರೆ. ವಾಸ್ತವ ಸಂಗತಿಯೆಂದರೆ 1973ರ ವಿಕ್ಟೋರಿಯಾ 203 ಚಿತ್ರದ ಅಶೋಕ್‌ಕುಮಾರ್ ಪಾತ್ರದಲ್ಲಿ ಕೂಡ ಅನುಪಮ್ ಅಭಿನಯಿದ್ದಾರೆ.

"ಎರಡು ಪಾತ್ರಗಳಲ್ಲಿರುವ ವೈರುಧ್ಯವನ್ನು ನೋಡಿ. ಧೋಕಾ ಭಯೋತ್ಪಾದನೆ ಬಗ್ಗೆ ಗಂಭೀರ ಕಥೆ ಹೊಂದಿರುವ ಚಿತ್ರ. ಆ ಚಿತ್ರದಲ್ಲಿ ಮಾನವ ಬಾಂಬ್ ಆರೋಪಕ್ಕೆ ಮಹಿಳೆಯೊಬ್ಬಳು ಗುರಿಯಾದಾಗ ಮಾನಸಿಕ ಆಘಾತಕ್ಕೊಳಗಾಗ ತಂದೆಯ ಪಾತ್ರ ನನ್ನದು.

ವಿಕ್ಟೋರಿಯಾ 203ರಲ್ಲಿ ವಯಸ್ಸಾದ ಮುದುಕ, ಗುಳಿಬಿದ್ದ ಕಣ್ಣುಗಳಿದ್ದರೂ ಹೆಣ್ಣಿನ ಚಪಲ. ನನ್ನಂತ ಪ್ರತಿಷ್ಠಿತ ನಟ ಆ ಪಾತ್ರದಲ್ಲಿ ಅಭಿನಯಿಸುವುದೇ ಎಂದು ಮೂಗುಮುರಿದವರಿದ್ದಾರೆ. ಆದರೆ ನಟನೆ ನನಗೆ ನಾನಾ ಅನುಭವಗಳ ಬಾಗಿಲನ್ನು ತೆರೆಯುತ್ತದೆ" ಎನ್ನುತ್ತಾರೆ.