ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ | ಸಂದರ್ಶನ | ಹಾಲಿವುಡ್ | ಕಿರುತೆರೆ
ಮುಖ್ಯ ಪುಟ ಮನರಂಜನೆ » ಬಾಲಿವುಡ್‌ » ಸುದ್ದಿ/ಗಾಸಿಪ್ » ಡಬ್ಬಿಂಗ್ ಕಲಾವಿದ ವಿರಾಜ್
ಸುದ್ದಿ/ಗಾಸಿಪ್
Feedback Print Bookmark and Share
 
ಬೆಳ್ಳಿತೆರೆಯಲ್ಲಿ ಕಾಣಿಸಿಕೊಳ್ಳುವ ನಟ ,ನಟಿಯರು ಅಮೋಘ ಅಭಿನಯ ಪ್ರದರ್ಶಿಸಿದರೆ ಮೆಚ್ಚದಿರುವ ಚಿತ್ರರಸಿಕರು ಯಾರೂ ಇಲ್ಲ. ಆದರೆ ಅವರ ಸಾಧನೆಯ ಹಿಂದೆ ಹಲವಾರು ಡಬ್ಬಂಗ್ ಕಲಾವಿದರ ಶ್ರಮವೂ ಅಡಗಿದೆ.

ನಟ, ನಟಿಯರ ಸಾಧನೆಗೆ ಎರಕಹೊಯ್ಯುವ ಈ ಕಲಾವಿದರು ತೆರೆಮರೆಗೆ ಸರಿದು ಅನಾಮಧೇಯರಾಗಿ ಉಳಿಯುತ್ತಾರೆ. ಅಂತಹ ಕಲಾವಿದರಲ್ಲಿ ವಿರಾಜ್ ಯಾದವ್ ಕೂಡ ಒಬ್ಬ. ಪೂಜಾ ಭಟ್ ಅವರ ಧೋಕಾ ಚಿತ್ರದಲ್ಲಿ ನಟ ಮುಜಾಮಿಲ್ ಇಬ್ರಾಹಿಂಗೆ ಅವನು ಧ್ವನಿ ನೀಡಿದ್ದಾನೆ.

ವಿರಾಜ್ ಕೆಲಸದ ಬಗ್ಗೆ ಅತೀವ ಹರ್ಷಿತರಾದ ಪೂಜಾ ಭಟ್ ಮೆಚ್ಚುಗೆಯ ಮಾತನಾಡಿ "ಡಬ್ಬಿಂಗ್ ಕಲಾವಿದ ವಿರಾಜ್‌ಗೆ, ಮುಜಾಮಿಲ್ ಸಾಧನೆಯ ಕ್ರೆಡಿಟ್ ಸಲ್ಲುತ್ತದೆ. ವಿರಾಜ್ ತನ್ನ ಧ್ವನಿಯನ್ನು ಅಭಿವ್ಯಕ್ತಗೊಳಿಸುವ ಮೂಲಕ ಶೇ.50ರಷ್ಟು ಕೆಲಸ ಪೂರ್ತಿಯಾಗಿದೆ"ಎಂದು ಹೊಗಳಿದ್ದಾರೆ.

ವಿರಾಜ್ ಕೂಡ ನಿರ್ದೇಶಕರ ಹೊಗಳಿಕೆಗೆ ಉಬ್ಬಿಹೋಗಿದ್ದಾನೆ. ಡಬ್ಬಿಂಗ್ ಕಲಾವಿದರಿಗೆ ಕ್ರೆಡಿಟ್ ನೀಡುವ ಕೆಲವರಾದರೂ ಚಿತ್ರದ್ಯೋಮದಲ್ಲಿ ಇರುವುದಕ್ಕೆ ಸಂತೋಷವಾಗಿದೆ ಎಂದು ಹೇಳಿದ್ದಾನೆ. ವಿರಾಜ್ ಪಕ್ಕಾ ವೃತ್ತಿಪರ ಕೆಲಸಗಾರ. ಕಲಾವಿದನೊಬ್ಬ ಧ್ವನಿ ಡಬ್ಬಿಂಗ್‌ನಲ್ಲಿ ಮಾಸ್ಟರ್ ಎನಿಸಿಕೊಳ್ಳಲು ಕೇವಲ ಧ್ವನಿಯೊಂದೇ ಅಲ್ಲ.

ತುಟಿಗಳ ಚಲನೆ, ಧ್ವನಿಯ ಏರುಪೇರು, ಹೇಳಬೇಕಾದ್ದನ್ನು ಸ್ಪಷ್ಟವಾಗಿ ಮುಟ್ಟಿಸುವ ಕಲೆ ರೂಢಿಸಿಕೊಳ್ಳಬೇಕೆಂದು ಅವನು ಹೇಳುತ್ತಾನೆ. ಮೈಕ್ ಹಿಂದೆ ಧ್ವನಿ ನೀಡುವುದಕ್ಕೂ ಕ್ಯಾಮೆರಾ ಮುಂದೆ ನಿಂತು ನಟಿಸುವುದಕ್ಕೂ ವ್ಯತ್ಯಾಸವಿದೆ ಎಂದು ಹೇಳುತ್ತಾನೆ.

ವಿರಾಜ್ ಮುಜಾಮಿಲ್‌ಗೆ ಮಾತ್ರ ಹಿನ್ನೆಲೆ ಧ್ವನಿ ನೀಡಿಲ್ಲ. ಜಾನ್ ಅಬ್ರಾಹಂ, ಡಿನೊ ಮೊರಿಯಾ ಉಪೇನ್ ಪಟೇಲ್, ಅಸ್ಮಿತ್ ಪಟೇಲ್ ಮತ್ತು ರುಲ್ಫಿ ಸೈಯದ್‌ಗೆ ವಾಯ್ಸ್ ನೀಡಿದ್ದಾನೆ. ವಿರಾಜ್ ಮಹತ್ವಾಕಾಂಕ್ಷೆಯ ಕಲಾವಿದನಾಗಿದ್ದು, ಕಮರ್ಶಿಯಲ್ ಮತ್ತು ಆನಿಮೇಶನ್‌ಗೂ ಕೂಡ ತನ್ನ ವೃತ್ತಿಕೌಶಲ್ಯವನ್ನು ತೋರಿಸಿದ್ದಾನೆ.

ಆನಿಮೇಷನ್ ಡಬ್ಬಿಂಗ್ ಕಲಾವಿದರಿಗೆ ಅವಕಾಶಗಳ ಬಾಗಿಲನ್ನು ತೆರೆದಿರುವುದಾಗಿ ಹೇಳುತ್ತಾನೆ. ತಮ್ಮ ಕೆಲಸಕ್ಕೆ ಕ್ರೆಡಿಟ್ ಸಿಗುತ್ತಿಲ್ಲ ಎನ್ನುವುದೇ ವಿರಾಜ್ ಚಿಂತೆಯಾಗಿದೆ. ವಿರಾಜ್‌ನನ್ನು ಸದಾ ಕಾಡುತ್ತಿರುವ ಒಂದು ಪ್ರಶ್ನೆ " ಸ್ಪಾಟ್ ಬಾಯ್‌ಗಳಿಗೆ ಮನ್ನಣೆ ಸಿಗುತ್ತದೆ. ನಮಗೇಕೆ ಮನ್ನಣೆ ಸಿಗುವುದಿಲ್ಲ" ಎನ್ನುವುದು.