ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ | ಸಂದರ್ಶನ | ಹಾಲಿವುಡ್ | ಕಿರುತೆರೆ
ಮುಖ್ಯ ಪುಟ ಮನರಂಜನೆ » ಬಾಲಿವುಡ್‌ » ಸುದ್ದಿ/ಗಾಸಿಪ್ » ಡಾರ್ಲಿಂಗ್: ಸೇಡು ತೀರಿಸಿಕೊಳ್ಳುವ ಈಶಾ
ಸುದ್ದಿ/ಗಾಸಿಪ್
Feedback Print Bookmark and Share
 
ಆದಿತ್ಯ ಸೋಮನ್ ಪಾತ್ರ ಫರ್ದೀನ್ ಖಾನ್‌ನ ದ್ವಿಮುಖ ಜೀವನವನ್ನು "ಡಾರ್ಲಿಂಗ್" ಚಿತ್ರ ನಿರೂಪಿಸುತ್ತದೆ. ಮನೆಯಲ್ಲಿ ಆದಿತ್ಯನಿಗೆ ಸುಂದರ, ಸಂಪ್ರದಾಯಬದ್ಧ ಪತ್ನಿ, ಆದರೆ ಕಚೇರಿಯಲ್ಲಿ ಗೆಳತಿ ಈಶಾ ದಿಯೋಲ್ ಸ್ನೇಹ.

ಸುಳ್ಳುಗಳನ್ನು ಪೋಣಿಸುತ್ತಾ ಇಬ್ಬರು ಮಹಿಳೆಯರನ್ನು ಸಂಭಾಳಿಸಿಕೊಂಡು ಹೋಗುವಷ್ಟರಲ್ಲಿ ಫರ್ದೀನ್ ಖಾನ್‌‌‌ಗೆ ಎರಡು ರೀತಿಯ ಪ್ರಪಂಚಗಳ ಅನುಭವ ಸಿಗುತ್ತದೆ. ಗೆಳತಿಯ ಪಾತ್ರ ನಿರ್ವಹಿಸಿರುವ ಈಶಾ ಡಿಯೋಲ್ ಗರ್ಭಿಣಿ ಎಂಬ ಸುದ್ದಿ ತಿಳಿದ ಕೂಡಲೇ ಆದಿತ್ಯನ ಜಂಘಾಬಲ ಉಡುಗುತ್ತದೆ.

ತನ್ನ ಪತ್ನಿಯನ್ನು ತ್ಯಜಿಸಲು ಸಾಧ್ಯವಿಲ್ಲ ಎಂದು ಖಡಾಖಂಡಿತವಾಗಿ ಹೇಳುತ್ತಾನೆ. ಆದರೆ ಗೆಳತಿ ಚಂಡಿಚಾಮುಂಡಿಯಾಗುತ್ತಾಳೆ. ದೊಡ್ಡ ಯುದ್ಧವೇ ಇಬ್ಬರ ನಡುವೆ ನಡೆಯುತ್ತದೆ. ಅದರಲ್ಲಿ ಆಕಸ್ಮಿಕವಾಗಿ ಗೆಳತಿ ಅಸುನೀಗುತ್ತಾಳೆ.

ಭಯಗ್ರಸ್ತನಾದ ಆದಿತ್ಯ ಆಕೆಯ ದೇಹಕ್ಕೆ ಮಣ್ಣುಮುಚ್ಚಿ ಮನೆಗೆ ಹಿಂತಿರುಗಿ ನಿಟ್ಟುಸಿರು ಬಿಡುತ್ತಾನೆ. ಎಲ್ಲವೂ ಸುಖಾಂತ್ಯಗೊಂಡಿತೆಂದು ಭಾವಿಸುತ್ತಾನೆ. ಈಶಾ ಪುನಃ ದೆವ್ವವಾಗಿ ಹಿಂತಿರುಗಿದಾಗ, ದುಸ್ವಪ್ನ ಆಗ ತಾನೇ ಆರಂಭವಾಗಿರುತ್ತದೆ.

ಸೇಡು ತೀರಿಸಿಕೊಳ್ಳುವುದೇ ಈಶಾ ಮುಖ್ಯ ಗುರಿಯಾಗುತ್ತದೆ...... ಈಶಾ ಗೆಳತಿಯ ಪಾತ್ರದಲ್ಲಿದ್ದರೆ, ಆಶಾ ಕೊಪ್ಪೀಕರ್ ಫರ್ದೀನ್ ಖಾನ್ ಪತ್ನಿ ಪಾತ್ರದಲ್ಲಿದ್ದಾರೆ.