ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ | ಸಂದರ್ಶನ | ಹಾಲಿವುಡ್ | ಕಿರುತೆರೆ
ಮುಖ್ಯ ಪುಟ ಮನರಂಜನೆ » ಬಾಲಿವುಡ್‌ » ಸುದ್ದಿ/ಗಾಸಿಪ್ » ಆಶಾಗೆ ಕೆನೆ ತಿನ್ನುವ ಬಯಕೆ
ಸುದ್ದಿ/ಗಾಸಿಪ್
Feedback Print Bookmark and Share
 
ಬಾಲಿವುಡ್‌ನ ಖ್ಯಾತ ಗಾಯಕಿ ಆಶಾ ಬೋಸ್ಲೆ ತನ್ನ ತಂದೆಗೆ ನೆಚ್ಚಿನ ಪುತ್ರಿಯಾಗಿದ್ದರು. ಅವರದ್ದು ಚಿಕ್ಕಂದಿನಲ್ಲಿ ತುಂಬ ಕೀಟಲೆ ಸ್ವಭಾವ. ಆಶಾ ಹಾಲಿನ ಕೆನೆಯ ಡೋಸ್ ತಿನ್ನಲು ಅಡುಗೆ ಮನೆಗೆ ದಾಳಿ ಇಟ್ಟಾಗಲೆಲ್ಲ ಅವರ ತಂದೆ "ಅವಳು ನನ್ನ ಕ್ಯಾಟ್" ಎಂದು ಪ್ರೀತಿಯಿಂದ ಹೇಳುತ್ತಿದ್ದರು.

ಸೆ.8ಕ್ಕೆ ಆಶಾ ಬೋಸ್ಲೆ 75ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಅವರ ವೈಭವದ ದಿನಗಳನ್ನು ಅವರ ಸ್ವಂತ ಮಾತುಗಳಲ್ಲೇ ಕೇಳಿ:
"ನಾವು ಮಕ್ಕಳಾಗಿದ್ದಾಗ ನಮಗೆ ಸಾಂಗ್ಲಿಯಲ್ಲಿ ದೊಡ್ಡ ಮನೆಯಿತ್ತು. ದೊಡ್ಡ ಮೊಗಸಾಲೆಯಲ್ಲಿ ಕೋಣೆಗಳು ಇರುತ್ತಿದ್ದವು.

ನನ್ನ ಬಾಲ್ಯಜೀವನದ ನೆನಪು ಮಧುರವಾಗಿತ್ತು. ನಾನು ಒಳಉಡುಪಿನಲ್ಲೇ ತಿರುಗುತ್ತಿದ್ದೆ. ಅಡುಗೆಮನೆಯಲ್ಲಿ ಸೌದೆ ಒಲೆ ಸದಾ ಉರಿಯುತ್ತಿತ್ತು. ಅದರಲ್ಲಿ ಹಾಲನ್ನು ಕಾಯಿಸಲು ಇಡುತ್ತಿದ್ದರು. ಹಾಲಿನ ಪಾತ್ರೆಗೆ ಕೈ ಹಾಕಿ ಕೆನೆಯನ್ನು ತಿನ್ನುವುದೆಂದರೆ ನನಗೆ ಪಂಚಪ್ರಾಣ.

ಹಾಲಿಗೆ ಕೈಹಾಕಿದಾಗಲೆಲ್ಲ ಎಲ್ಲರೂ ಉರಿದುಬೀಳುತ್ತಿದ್ದರು. ತಂದೆ ಬಂದು 'ಆಶಾಳಿಗೆ ಯಾರೂ ಗದರಿಸಬಾರದು. ಅವಳು ನನ್ನ ಕ್ಯಾಟ್ 'ಎನ್ನುತ್ತಿದ್ದರು. ಕೆನೆ ತಿಂದು. ತಿಂದು ನನ್ನ ಮೈಯಲ್ಲಿ ಬೊಜ್ಜು ಬೆಳೆದಿರಬಹುದು"

"ತಂದೆ ನಮಗೆ ಗಾಯತ್ರಿ ಮಂತ್ರ ಹೇಳಿಕೊಡುತ್ತಿದ್ದರು. ಲತಾದೀದಿ ಮತ್ತು ಮೀನಾತಾಯ್ ಗಾಯತ್ರಿ ಮಂತ್ರ ಹೇಳುತ್ತಿದ್ದರು. ಆದರೆ ನಾನು ತಂದೆಯ ಬಳಿ ತೆರಳಿ :ಪಾಪಾ, "ಸೂರ್ಯಚಂದ್ರ ಮಾಸೌ ಧಾತಾ ಯತಾ" ಉಚ್ಚರಿಸುವುದು ಬಹಳ ಕಷ್ಟ ಎನ್ನುತ್ತಿದ್ದೆ. ಹೇಳ್ತಾನೇ ಇದ್ದೀಯಲ್ಲ ಎಂದು ತಂದೆ ಹೇಳುತ್ತಿದ್ದರು."

"ನನ್ನ ಮನೆಯ ಕೆಳಗೆ ಕುಟುಂಬವೊಂದಿತ್ತು. ಆ ಕುಟುಂಬದ ಹುಡುಗರು ಕಾರ್ಡ್ಸ್ ಆಡುತ್ತಿದ್ದರು. ಆಗ ನಾನಿನ್ನೂ ಚಿಕ್ಕವಳು. ನಾನು ಕತ್ತರಿಯಲ್ಲಿ ಕಾಗದ ಕತ್ತರಿಸುತ್ತಾ ಪೇಪರನ್ನು ಸಣ್ಣ ಸಣ್ಣ ಚೂರುಗಳಾಗಿ ಕತ್ತರಿಸಿದೆ.

ಅದು ಮುಗಿದ ಕೂಡಲೇ ಬಾಲಕನೊಬ್ಬನ ಕೂದಲನ್ನು ಕತ್ತರಿಯಿಂದ ಕತ್ತರಿಸಿ ಸಣ್ಣ ಸಣ್ಣ ಚೂರುಗಳನ್ನಾಗಿ ಮಾಡಿದೆ. ಅವರೆಲ್ಲ ಸೇರಿ ತನ್ನ ತಾಯಿಯ ಬಳಿ ದೂರು ಹೇಳಿದರು.