ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ | ಸಂದರ್ಶನ | ಹಾಲಿವುಡ್ | ಕಿರುತೆರೆ
ಮುಖ್ಯ ಪುಟ ಮನರಂಜನೆ » ಬಾಲಿವುಡ್‌ » ಸುದ್ದಿ/ಗಾಸಿಪ್ » ಇಂಗ್ಲಿಷ್‌ನಲ್ಲೂ ದ ಗಾಂಧಿ ಮೈ ಫಾದರ್
ಸುದ್ದಿ/ಗಾಸಿಪ್
Feedback Print Bookmark and Share
 
ಗಾಂಧಿ ಮೈ ಫಾದರ್ ಚಿತ್ರಕ್ಕೆ ಪ್ರೇಕ್ಷಕರಿಂದ ಸಕಾರಾತ್ಮಕ ಪ್ರತಿಕ್ರಿಯೆ ಸಿಕ್ಕಿದ ಬಳಿಕ ಉತ್ತೇಜಿತರಾದ ಫಿರೋಜ್ ಅಬ್ಬಾಸ್ ಖಾನ್ ಇಂಗ್ಲಿಷ್‌ನಲ್ಲೂ ಈ ಚಿತ್ರವನ್ನು ತಯಾರಿಸಲಿದ್ದಾರೆ.

"ನಾವು ಹಿಂದಿ ಜತೆಗೆ ಇಂಗ್ಲಿಷ್‌ ಆವೃತ್ತಿಯಲ್ಲೂ ಏಕಕಾಲದಲ್ಲಿ ಚಿತ್ರೀಕರಣ ಮಾಡಿದ್ದೇವೆ. ಎರಡೂ ಚಿತ್ರಗಳೂ ಭಾಷೆ ಬಿಟ್ಟರೆ ಒಂದೇ" ಎಂದು ಹೇಳಿದರು.

ನಾವು ಹಿಂದಿ ಪ್ರೇಕ್ಷಕರಿಗೆ ಹಿಂದಿ ಚಿತ್ರ ನಿರ್ಮಿಸಿದ್ದೇವೆ. ಇಂಗ್ಲಿಷ್ ಚಿತ್ರವನ್ನು ಅಂತಾರಾಷ್ಟ್ರೀಯ ಪ್ರೇಕ್ಷಕರಿಗೆ ನಿರ್ಮಿಸಿದ್ದೇವೆ. ನಾವು ಅದೇ ಚಿತ್ರವನ್ನು ಇಂಗ್ಲಿಷ್‌ಗೆ ಡಬ್ ಮಾಡಬಹುದಿತ್ತು. ಆದರೆ ಚಿತ್ರ ಸತ್ವ ಕಳೆದುಕೊಳ್ಳುವುದು ನನಗೆ ಇಷ್ಟವಿರಲಿಲ್ಲ. ಆದ್ದರಿಂದ ಏಕಕಾಲದಲ್ಲಿ ಚಿತ್ರೀಕರಣ ಕೈಗೊಂಡೆ ಎಂದು ಅವರು ಹೇಳಿದರು.

ಚಿತ್ರದಲ್ಲಿ ಗಾಂಧಿ ಪಾತ್ರದಲ್ಲಿ ಅಭಿನಯಿಸಿದ ದರ್ಶನ್ ಜಾರಿವಾಲಾ ಫಿರೋಜ್ ಹೇಳಿಕೆಯನ್ನು ಬಿಲ್‌ಕುಲ್ ಒಪ್ಪಿದ್ದಾರೆ. ಭಾರತೀಯ ಚಿತ್ರ ಅಂತಾರಾಷ್ಟ್ರೀಯ ಮಾನ್ಯತೆ ಗಳಿಸುತ್ತಿದೆ. ತಾಂತ್ರಿಕತೆ ಮತ್ತು ಕಥಾವಸ್ತುವಿಗೆ ಸಂಬಂಧಪಟ್ಟಂತೆ ಗಾಂಧಿ ಮೈ ಫಾದರ್ ಅಂತಾರಾಷ್ಟ್ರೀಯ ಪ್ರೇಕ್ಷಕರ ಮುಂದಿಡುವ ಉತ್ತಮ ಚಿತ್ರ ಎಂದು ಶ್ಲಾಘಿಸಿದ್ದಾರೆ.