ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ | ಸಂದರ್ಶನ | ಹಾಲಿವುಡ್ | ಕಿರುತೆರೆ
ಮುಖ್ಯ ಪುಟ ಮನರಂಜನೆ » ಬಾಲಿವುಡ್‌ » ಸುದ್ದಿ/ಗಾಸಿಪ್ » ಟೊರೊಂಟೊದಲ್ಲಿ " ದ ಲಾಸ್ಟ್ ಲಿಯರ್ "
ಸುದ್ದಿ/ಗಾಸಿಪ್
Feedback Print Bookmark and Share
 
ರಿತುಪರ್ಣೊ ಘೋಷ್ ಅವರ ಚಿತ್ರ ಅಮಿತಾಬ್ ಬಚ್ಚನ್ ನಟನೆಯ "ದಿ ಲಾಸ್ಟ್ ಲಿಯರ್" ಚಿತ್ರದ ಪ್ರದರ್ಶನವನ್ನು ಟೊರೊಂಟೊ ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಸೆ.9, ಭಾನುವಾರ ಏರ್ಪಡಿಸಲಾಗಿತ್ತು.

ರಾಯ್ ಥಾಮ್‌ಸನ್ ಹಾಲ್‌ನಲ್ಲಿ ನಡೆದ ಪ್ರದರ್ಶನಕ್ಕೆ ಚಿತ್ರಮಂದಿರ ಕಿಕ್ಕಿರಿದು ತುಂಬಿತ್ತು. ಸುಮಾರು 2000 ಪ್ರೇಕ್ಷಕರು ನೆರೆದಿದ್ದರು.ಪ್ಲಾನ್‌ಮಾನ್ ಮೋಷನ್ ಪಿಕ್ಟರ್ಸ್‌ನ ಸಿಇಒ ಶುಬೊ ಶೇಖರ್ ಭಟ್ಟಾಚಾರ್ಜಿ ಬರೆದಿರುವುದನ್ನು ಓದಿ-

"ರೆಡ್ ಕಾರ್ಪೆಟ್‌ ಸ್ವಾಗತದಲ್ಲಿ ನಾವು ಕಾರಿನಿಂದ ಇಳಿದ ಕೂಡಲೇ ನೂರಾರು ಅಭಿಮಾನಿಗಳು ಹರ್ಷಾತಿರೇಕದಿಂದ ಕಿರುಚುತ್ತಿದ್ದರು. ಅಭಿಮಾನಿಗಳ ಪ್ರತಿಕ್ರಿಯೆಗೆ ನಾವು ಮೂಕವಿಸ್ಮಿಕರಾದೆವು. ಚಿತ್ರಪದರ್ಶನಕ್ಕೆ ಮುಂಚೆ ವೇದಿಕೆಯಲ್ಲಿ ಸಂಕ್ಷಿಪ್ತ ಕಾರ್ಯಕ್ರಮ ನಡೆಯಿತು.

ಚಿತ್ರೋತ್ಸವದ ಕಾರ್ಯಕ್ರಮ ನಿರ್ವಾಹಕ ಕ್ಯಾಮರೋನ್ ಬೈಲಿ, ರಿತುಪರ್ಣೊ ಮತ್ತು ನನ್ನನ್ನು ವೇದಿಕೆಗೆ ಆಹ್ವಾನಿಸಿದರು. ಬಳಿಕ ಚಿಶು ಮತ್ತು ಅಮಿತಾಬ್ ಜತೆಗೆ ಇನ್ನಿತರ ನಟರು ವೇದಿಕೆಯ ಮೇಲೆ ಬಂದರು.

ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಪ್ರೇಕ್ಷಕರು ಚಿತ್ರಪದರ್ಶನದ ಬಳಿಕ 10 ನಿಮಿಷಗಳ ಕಾಲ ಕರತಾಡನದ ಮೂಲಕ ಮೆಚ್ಚುಗೆ ಸೂಚಿಸಿದರು. ಬಚ್ಚನ್, ಪ್ರೀತಿ, ಅರ್ಜುನ್, ಶೆಫಾಲಿ ಶಾ ಮತ್ತು ದಿವ್ಯಾ ದತ್ತ ಅಭಿನಯಕ್ಕೆ ಜನರು ಪುಳಕಿತರಾಗಿದ್ದು ಕಂಡುಬಂತು.

ದಿ ಲಾಸ್ಟ್ ಲಿಯರ್ ತಂಡದ ಗೌರವಾರ್ಥ ಭೋಜನ ಕೂಟ ಮತ್ತು ಡಿನ್ನರ್ ಏರ್ಪಡಿಸಲಾಗಿತ್ತು. ಟೊರೆಂಟೊದಲ್ಲಿ ಯಾರ ಬಾಯಲ್ಲಿ ನೋಡಿದರೂ "ದಿ ಲಾಸ್ಟ್ ಲಿಯರ್ "ಚಿತ್ರವೇ ಚರ್ಚೆಯ ವಿಷಯವಾಗಿತ್ತು,