ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ | ಸಂದರ್ಶನ | ಹಾಲಿವುಡ್ | ಕಿರುತೆರೆ
ಮುಖ್ಯ ಪುಟ ಮನರಂಜನೆ » ಬಾಲಿವುಡ್‌ » ಸುದ್ದಿ/ಗಾಸಿಪ್ » ಅಂಬರ್ ಧಾರಾ ಸೆ.24ರಿಂದ ಪ್ರಸಾರ
ಸುದ್ದಿ/ಗಾಸಿಪ್
Feedback Print Bookmark and Share
 
ಸಯಾಮಿ ಅವಳಿಗಳಾದ "ಅಂಬರ್ ಮತ್ತು ಧಾರಾ" ಕತೆಯನ್ನಾಧರಿಸಿದ ಅಂಬರ್ ಧಾರಾ ಧಾರಾವಾಹಿಯನ್ನು ಸೋನಿ ಮನರಂಜನೆ ಟೆಲಿವಿಷನ್ ಸೆ.24ರಿಂದ ಪ್ರಸಾರ ಮಾಡಲಿದೆ. ಇಬ್ಬರು ಸೋದರಿಯಲ್ಲಿ ಒಬ್ಬಾಕೆ ಒಳ್ಳೆಯ ಹಾಡುಗಾರ್ತಿ ಮತ್ತು ಇನ್ನೊಬ್ಬಳು ಗಿಟಾರ್ ನುಡಿಸುವುದರಲ್ಲಿ ನಿಷ್ಣಾತೆ.

ಅಂಬರ್ ಧಾರಾ ನಿರ್ಮಾಪಕರಾದ ವಿಕಾಸ್ ಸೇಥ್ ಮತ್ತು ಸಿದ್ಧಾರ್ಥ ತಿವಾರಿ ಧಾರಾವಾಹಿಯ ಸಂಕ್ಷಿಪ್ತ ಒಳನೋಟವನ್ನು ಬಿಚ್ಚಿಟ್ಟರು.ಲತಾ ಶುಕ್ಲಾ ಅವಳಿ ಸಯಾಮಿ ಹೆಣ್ಣುಮಕ್ಕಳಿಗೆ ಜನ್ಮ ನೀಡಿದ ಬಳಿಕ ದೇವ ಅವಳನ್ನು ತ್ಯಜಿಸುತ್ತಾನೆ.

ಆದರೆ ಲತಾ ಎಲ್ಲ ಕಷ್ಟಗಳನ್ನು ಸಹಿಸಿಕೊಂಡು ಅಂಬರ್ ಮತ್ತು ಧಾರಾ ಅವರಿಬ್ಬರನ್ನು ಬೆಳೆಸುತ್ತಾಳೆ. ತನ್ನ ತಂದೆ ವಾಸವಿರುವ ಪಾಂಚಗನಿಗೆ ಅವರನ್ನು ಕರೆತರುತ್ತಾಳೆ. ಅಂಬರ್ ಮತ್ತು ಧಾರಾ ಎರಡು ವಿಶಿಷ್ಠ ವ್ಯಕ್ತಿತ್ವಗಳಾಗಿ ಬೆಳೆಯುತ್ತಾರೆ.

ಅಂಬರ್ ಗಡಸುತನದ ವ್ಯಕ್ತಿತ್ವ ಹೊಂದಿದ್ದರೆ ದಾರಾ ಹೆಚ್ಚು ವಿವೇಕವುಳ್ಳ, ಸಂಯಮದ ವ್ಯಕ್ತಿತ್ವವುಳ್ಳವಳು- ಎರಡು ದೇಹಗಳು, ಎರಡು ಮನಸ್ಸುಗಳು ಮತ್ತು ಎರಡು ಹೃದಯಗಳು, ಆದರೆ ಜೀವಮಾನಪೂರ್ತಿ ಒಟ್ಟಿಗೆ ಬೆಸೆದುಕೊಂಡಿರಬೇಕಾದ ಸ್ಥಿತಿ.

ಅಂಬರ್ ಧಾರಾ ಒಂದು ವಿಭಿನ್ನ, ಪ್ರಗತಿಪರ ಮತ್ತು ವಿಶಿಷ್ಠ ಕಥಾವಸ್ತುವಿನ ಚಿತ್ರ. ಒಂದಕ್ಕೊಂದು ಅಂಟಿರುವ ಅವಳಿಗಳ ಕಲ್ಪನೆಯನ್ನು ಕಥೆಯಾಗಿ ಹೆಣೆಯಲಾಯಿತು ಎಂದು ಸಿದ್ಧಾರ್ಥ ತಿವಾರಿ ಮತ್ತು ವಿಕಾಸ್ ಸೇಥ್ ತಿಳಿಸಿದರು

. ಜನರಿಗೆ ಸ್ಫೂರ್ತಿ ನೀಡುವಂತ ಈ ಕಥೆಯ ಪಾತ್ರಗಳು ತಮ್ಮ ಅದಮ್ಯ ಚೇತನದಿಂದ ಹಲವಾರು ಮಂದಿಯ ಹೃದಯಗಳನ್ನು ತಟ್ಟುತ್ತದೆ. ಈ ಧಾರಾವಾಹಿ ಪ್ರಖ್ಯಾತ ಮರಾಠಿ ಮತ್ತು ಗುಜರಾತಿ ನಾಟಕವನ್ನು ಆಧರಿಸಿದೆ ಎಂಬುದನ್ನು ಅವರು ಅಲ್ಲಗಳೆದಿದ್ದಾರೆ.