ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ | ಸಂದರ್ಶನ | ಹಾಲಿವುಡ್ | ಕಿರುತೆರೆ
ಮುಖ್ಯ ಪುಟ ಮನರಂಜನೆ » ಬಾಲಿವುಡ್‌ » ಸುದ್ದಿ/ಗಾಸಿಪ್ » ಎಂಬಿಎ ವಿದ್ಯಾರ್ಥಿಗಳಿಗೆ ಚಕ್ ದೆ ಮ್ಯಾಜಿಕ್
ಸುದ್ದಿ/ಗಾಸಿಪ್
Feedback Print Bookmark and Share
 
ಚಕ್ ದೆ ಇಂಡಿಯಾ ತಂಡದ ಮುಗುಳುನಗೆಗೆ ಇನ್ನೊಂದು ಕಾರಣ ಸಿಕ್ಕಿದೆ. ಚಕ್ ದೆ ಇಂಡಿಯಾ ಪದ ವಿಶ್ವಕಪ್‌ನಲ್ಲಿ ಗೆಲುವಿಗೆ ಸ್ಪೂರ್ತಿ ನೀಡಿದ್ದಲ್ಲದೇ ಎಂಬಿಎ ವಿದ್ಯಾರ್ಥಿಗಳ ಮೇಲೂ ಮ್ಯಾಜಿಕ್ ಸೃಷ್ಟಿ ಮಾಡಿದೆ.

ಬಿಸಿನೆಸ್ ಶಾಲೆಗಳ ಪಠ್ಯಪುಸ್ತಕಗಳಲ್ಲಿ ಚಕ್ ದೆ ಇಂಡಿಯಾ ಪ್ರವೇಶ ಪಡೆಯಲಿದೆ. ಚಕ್ ದೆ ಇಂಡಿಯಾದ ವಿಷಯ ಮತ್ತು ಬಿಸಿನೆಸ್ ಶಾಲೆಗಳ ಪಠ್ಯಕ್ರಮಕ್ಕೂ ಅಜಗಜಾಂತರ ವ್ಯತ್ಯಾಸ. ಆದಾಗ್ಯೂ, ತಮ್ಮ ಚಿತ್ರದಿಂದ ರಾಷ್ಟ್ರದ ವಿವಿಧ ಮ್ಯಾನೇಜ್‌ಮೆಂಟ್ ಶಾಲೆಗಳು ಸ್ಫೂರ್ತಿ ಪಡೆದಿವೆಯೆಂದು ಚಕ್ ದೆ ಇಂಡಿಯ ತಂಡ ಹೆಮ್ಮೆಯಿಂದ ಹೇಳುತ್ತಿದೆ.

ಚಂದೀಗಢ ಮತ್ತು ಭೋಪಾಲ್ ಸಂಸ್ಥೆಗಳು ತಾವು ಚಕ್ ದೆ ಇಂಡಿಯಾ ವಿಷಯವನ್ನು ಪಠ್ಯಕ್ರಮದಲ್ಲಿ ಸೇರಿಸಿರುವುದಾಗಿ ಮೇಲ್ ಕಳಿಸಿವೆ ಎಂದು ವೈಆರ್‌ಎಫ್ ವಕ್ತಾರ ಮೋನಿಕಾ ಭಟ್ಟಾಚಾರ್ಯ ತಿಳಿಸಿದರು.

ಇಂತಹ ಒಂದು ಸ್ಫೂರ್ತಿದಾಯಕ ಚಿತ್ರ ನಿರ್ಮಿಸಿದ್ದಕ್ಕಾಗಿ ಚಕ್ ದೆ ಇಂಡಿಯ ತಂಡ ವಿಶೇಷವಾಗಿ ಎಸ್‌ಆರ್ಕೆ ಮತ್ತು ನಿರ್ದೇಶಕ ಶಿಮಿತ್ ಅಮೀನ್ ಅತೀವ ಹೆಮ್ಮೆ ವ್ಯಕ್ತಪಡಿಸಿದ್ದಾರೆ.

"ಇದು ಯುವಜನತೆಯ ಮೇಲೆ ಅಷ್ಟೊಂದು ಪರಿಣಾಮ ಬೀರುತ್ತದೆಂದು ಮತ್ತು ಜನರಿಗೆ ಸ್ಫೂರ್ತಿ ನೀಡುತ್ತದೆಂದು ನಾವು ಭಾವಿಸಿರಲಿಲ್ಲ. ಇದೊಂದು ಹೃದಯಸ್ಪರ್ಶಿ ಸಂಗತಿ" ಎಂದು ಅವರು ಹೇಳಿದರು.