ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ | ಸಂದರ್ಶನ | ಹಾಲಿವುಡ್ | ಕಿರುತೆರೆ
ಮುಖ್ಯ ಪುಟ ಮನರಂಜನೆ » ಬಾಲಿವುಡ್‌ » ಸುದ್ದಿ/ಗಾಸಿಪ್ » ಸೋನಾಲ್ ಚವ್ಹಾಣ ಬಾಲಿವುಡ್‌ಗೆ ಲಗ್ಗೆ
ಸುದ್ದಿ/ಗಾಸಿಪ್
Feedback Print Bookmark and Share
 
ಬಾಲಿವುಡ್ ನಟ ಸೈಫ್ ಅಲಿ ಖಾನ್ ಅಭಿನಯಿಸಿದ ಲೇಸ್ ಚಿಪ್ಸ್ ಜಾಹೀರಾತಿನಲ್ಲಿ ಜೊತೆಯಾಗಿ ನಟಿಸಿದ ಸೋನಾಲ್ ಚವ್ಹಾಣ ಬಾಲಿವುಡ್ ತೆರೆಗೆ ಲಗ್ಗೆ ಇಡಲು ಸಿದ್ದತೆ ನಡೆಸಿದ್ದಾಳೆ.

ವಿಶೇಷ ಫಿಲ್ಮ್ಸ್ ನಿರ್ಮಾಣದ ರಾಝ್- 2 ಚಿತ್ರದಲ್ಲಿ ನಟಿಸಲು ಸಜ್ಜಾಗುತ್ತಿದ್ದಾರೆ. ಇಲ್ಲಿಯವರೆಗೆ ನಾನು ರಾಝ್-2 ಚಿತ್ರದಲ್ಲಿ ನಟಿಸಲು ಸಹಿ ಹಾಕಿಲ್ಲ ಆದರೆ ಮಾತುಕತೆಗಳು ಮುಂದುವರೆದಿರುವುದರಿಂದ ಸದ್ಯಕ್ಕೆ ನಾನು ಬಹಿರಂಗಪಡಿಸಲಾರೆ ಎಂದು ಸೋನಾಲ್ ಚವ್ಹಾಣ ಹೇಳಿದ್ದಾರೆ.

ಸೋನಾಲ್ ಚವ್ಹಾಣ ಮಾಡೆಲಿಂಗ್ ಕ್ಷೇತ್ರದಲ್ಲಿ ಹೆಸರುವಾಸಿಯಾಗಿದ್ದು,ಜಾಹಿರಾತು ವಿಭಾಗದಲ್ಲಿ ಲೇಸ್ ಮತ್ತು ಪಾಂಡ್ಸ್ ಜಾಹಿರಾತುಗಳು ಹೆಚ್ಚಿನ ಪ್ರಚಾರವನ್ನು ತಂದುಕೊಟ್ಟಿವೆ. 200ರಲ್ಲಿ ಮಿಸ್ ಇಂಡಿಯಾ ಅಂತಿಮ ಹಂತದ ಸ್ಪರ್ಧೆಯವರೆಗೂ ಜಯ ಸಾಧಿಸುತ್ತಾ ಬಂದಿದ್ದರು. ಆದರೆ ಕೊನೆಯ ಗಳಿಗೆಯಲ್ಲಿ ಪ್ರಶಸ್ತಿ ಬೇರೆಯವರ ಪಾಲಾಗಿತ್ತು.

ಮಲೇಷಿಯಾದಲ್ಲಿ ನಡೆದ ಮಿಸ್ ಜಾಗತಿಕ ಪ್ರವಾಸೋದ್ಯಮ ಪ್ರಶಸ್ತಿಯನ್ನು ಪಡೆದಿದ್ದರು. ಈ ಸಂದರ್ಭದಲ್ಲಿ ಮುಖೇಶ್ ಭಟ್ ಅವರು ತಮ್ಮ ಮುಂದಿನ ಚಿತ್ರವಾದ ರಾಝ್-2 ಚಿತ್ರಕ್ಕೆ ನಾಯಕಿಯಾಗಲು ಒಪ್ಪಿಗೆ ಸೂಚಿಸಿದ್ದರು ಎಂದು ಹೇಳಿದ್ದಾರೆ.