ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ | ಸಂದರ್ಶನ | ಹಾಲಿವುಡ್ | ಕಿರುತೆರೆ
ಮುಖ್ಯ ಪುಟ ಮನರಂಜನೆ » ಬಾಲಿವುಡ್‌ » ಸುದ್ದಿ/ಗಾಸಿಪ್ » ಚೆಕ್ ದೇ ಸಾಗರಿಕಾಗೆ ಸ್ಥಾನವಿಲ್ಲ
ಸುದ್ದಿ/ಗಾಸಿಪ್
Feedback Print Bookmark and Share
 
ಬಾಲಿವುಡ್ ನಟ ಸುನೀಲ್ ಶೆಟ್ಟಿಯ ಮಹತ್‌ಕಾಂಕ್ಷೆಯ ನಿರ್ಮಾಣದ ಚಿತ್ರವಾದ ಮಿಷನ್ ಇಸ್ತಾನ್‌ಬುಲ್ ಚಿತ್ರದಲ್ಲಿ ಚೆಕ್ ದೇ ಇಂಡಿಯಾ ಖ್ಯಾತಿಯ ಸಾಗರಿಕಾ ಅವರಿಗೆ ಸ್ಥಾನವಿಲ್ಲ ಎಂದು ಚಿತ್ರದ ನಿರ್ದೆಶಕ ಅಪೂರ್ವಾ ತಿಳಿಸಿದ್ದಾರೆ.

ಮೊದಲಿಗೆ ಬಾಬ್ಬಿ ಡಯೋಲ್ ಅವರ ಬದಲಾವಣೆಯ ನಂತರ ಝಾಯೇದ್ ಖಾನ್ ಮತ್ತು ತುಷಾರ್ ಕಪೂರ್ ಅವರ ದಿನಾಂಕಗಳ ಹೊಂದಾಣಿಕೆಯಾಗದೇ ಇರುವುದರಿಂದ ಅವರನ್ನು ಕೈಬಿಡಲಾಗಿದೆ ಎಂದು ಹೇಳಿದ್ದಾರೆ.

ಮಿಷನ್ ಇಸ್ತಾನ್‌ಬುಲ್ ಚಿತ್ರದಲ್ಲಿ ನಟಿಸಲು ನಾಯಕಿಯ ಸ್ಥಾನಕ್ಕೆ ಸಾಗರಿಕೆ ಸಹಿ ಹಾಕಿದ್ದಾರೆ ಎನ್ನುವದು ಉಹಾಪೋಹಗಳು ಮಾತ್ರ ಎಂದು ನಿರ್ದೆಶಕರು ತಿಳಿಸಿದ್ದಾರೆ.

ಈ ಚಿತ್ರಕ್ಕೆ ಇಮ್ರಾನ್ ಹಷ್ಮಿಯ ಅವಾರಪನ್ ಚಿತ್ರದಲ್ಲಿ ನಟಿಸಿದ ಶ್ರೇಯಾ ಶರನ್ ಅವರನ್ನು ಮಾತ್ರ ನಾಯಕಿಯಾಗಿ ಆಯ್ಕೆ ಮಾಡಿದ್ದು, ಉಳಿದ ತಾರಾಗಣದ ಆಯ್ಕೆ ಸಿದ್ದತೆ ನಡೆದಿದೆ ಎಂದು ಹೇಳಿದ್ದಾರೆ.

ಚಿತ್ರದಲ್ಲಿ ಜಾಯೇದ್ ಖಾನ್, ಸುನೀಲ್ ಶೆಟ್ಟಿ, ವಿವೇಕ್ ಒಬೆರಾಯ್, ಶಬ್ಬಿರ್ ಅಹ್ಲುವಾಲಿಯಾ, ಶ್ರೇಯಾ ಶರನ್, ಅವರು ನಟಿಸುತ್ತಿದ್ದು,ಅಭೀಷೇಕ್ ಬಚ್ಚನ್ ಗೌರವ ನಟರಾಗಿ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಿದ್ದಾರೆ.