ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ | ಸಂದರ್ಶನ | ಹಾಲಿವುಡ್ | ಕಿರುತೆರೆ
ಮುಖ್ಯ ಪುಟ ಮನರಂಜನೆ » ಬಾಲಿವುಡ್‌ » ಸುದ್ದಿ/ಗಾಸಿಪ್ » ಕಿಮ್‌ಗೆ ನೆಗೆಟಿವ್ ಪಾತ್ರದ ಸವಾಲು
ಸುದ್ದಿ/ಗಾಸಿಪ್
Feedback Print Bookmark and Share
 
ಕಿಮ್ ಶರ್ಮಾ ಮಾಡೆಲಿಂಗ್‌ನಲ್ಲಿ ತನ್ನ ವೃತ್ತಿಜೀವನವನ್ನು ಆರಂಭಿಸಿದಳು. ಆದಿತ್ಯ ಚೋಪ್ರಾ ಕಣ್ಣಿಗೆ ಬಿದ್ದ ಕೂಡಲೇ ಕಿಮ್‌ಳನ್ನು ಮೊಹಬ್ಬತೀನ್ ಚಿತ್ರಕ್ಕೆ ಸಹಿ ಹಾಕಿಸಿದ. ಕಿಮ್ ತನ್ನ ಮುಂದಿನ ಚಿತ್ರ ಚಾದೋನ್ ನಾ ಯಾರ್ ಬಿಡುಗಡೆಗೆ ಕಾಯುತ್ತಿದ್ದಾಳೆ.

ಬಿಂದಾಸ್ ಹುಡುಗಿ ಕಿಮ್ ಇಂಡಿಯಎಫ್‌ಎಂನಲ್ಲಿ ತನ್ನ ಅಭಿಮಾನಿಗಳ ಜತೆ ಸಲ್ಲಾಪಿಸಿದಾಗ ಹಲವಾರು ಪ್ರಶ್ನೆಗಳನ್ನು ಕೇಳಲಾಯಿತು. ನಕಾರಾತ್ಮಕ ಅಥವಾ ಸಕಾರಾತ್ಮಕ ಪಾತ್ರವಾಗಿರಲಿ ಅದು ಪಾತ್ರದ ಮೇಲೆ ಅವಲಂಬಿಸಿದೆ ಎನ್ನುವುದು ಕಿಮ್ ಅಂಬೋಣ.

ಪ್ರೇಕ್ಷಕರು ಸಕಾರತ್ಮಕ ಪಾತ್ರ ಇಷ್ಟಪಡುತ್ತಾರೆ.ಆದರೆ ನಕಾರಾತ್ಮಕ ಪಾತ್ರ ಹೆಚ್ಚು ಸವಾಲಿನಿಂದ ಕೂಡಿರುತ್ತದೆ ಎನ್ನುವುದು ಕಿಮ್ ಉತ್ತರ. ಸಲ್ಮಾನ್ ನನ್ನ ನೆಚ್ಚಿನ ನಟ, ಶ್ರೀದೇವಿ ನೆಚ್ಚಿನ ನಟಿ ಎಂದು ಕಿಮ್ ಫೇವರಿಟ್ ನಟಿ, ನಟಿಯರು ಯಾರೆಂದು ಕೇಳಿದಾಗ ಉತ್ತರಿಸಿದಳು.

ಗಾಡ್‌ಫಾದರ್ ಇಲ್ಲದಿರುವುದರಿಂದ ಅದರ ಬಗ್ಗೆ ಗೊತ್ತಿಲ್ಲ ಎಂದು ನಟ, ನಟಿ ಉಳಿವಿಗೆ ಗಾಡ್‌ಫಾದರ್ ಬೇಕೆ ಎಂದು ಕೇಳಿದಾಗ ಹೇಳಿದಳು. ಟಾಮ್ ಡಿಕ್ ಎನ್ ಹ್ಯಾರಿಯಲ್ಲಿ ನನ್ನ ಪಾತ್ರ ಅತ್ಯುತ್ತಮವಾಗಿದೆ ಎಂದು ಕಿಮ್ ಹೇಳಿದಳು.

ಇಷ್ಟು ವರ್ಷ ಚಿತ್ರರಂಗದಲ್ಲಿ ನೀವು ಕಲಿತಿದ್ದೇನು ಎಂಬ ಪ್ರಶ್ನೆಗೆ ನಾನು ಸ್ವತಃ ನಟಿಯಾಗಿ ಕೆಲಸದಲ್ಲಿ ಹೆಚ್ಚು ತಲ್ಲೀನತೆಯಿಂದ ಇರುವುದನ್ನು, ಕೆಲಸವನ್ನು ಎಂಜಾಯ್ ಮಾಡುವುದನ್ನು ಕಲಿತೆ ಎಂದು ಕಿಮ್ ಹೇಳಿದಳು.