ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ | ಸಂದರ್ಶನ | ಹಾಲಿವುಡ್ | ಕಿರುತೆರೆ
ಮುಖ್ಯ ಪುಟ ಮನರಂಜನೆ » ಬಾಲಿವುಡ್‌ » ಸುದ್ದಿ/ಗಾಸಿಪ್ » ಚಕ್ ದೆ" ಮೆಚ್ಚಿಕೊಂಡ ಠಾಕ್ರೆ
ಸುದ್ದಿ/ಗಾಸಿಪ್
Feedback Print Bookmark and Share
 
IFM
ಚಕ್ ದೆ ಇಂಡಿಯ ಚಿತ್ರ ಆಸ್ಕರ್ ಲೈಬ್ರರಿಯಲ್ಲಿ ಸ್ಥಾನ ಪಡೆದು, ಮ್ಯಾನೇಜ್‌ಮೆಂಟ್ ಪುಸ್ತಕದಲ್ಲಿ ಕೇಸ್ ಸ್ಟಡಿಗಾಗಿ ಆಯ್ಕೆಯಾಗಿರುವುದು ಸರಿಯಷ್ಟೇ. ಆದರೆ ಮುಂಬೈನಲ್ಲಿ ಯಾವುದೇ ಚಿತ್ರಕ್ಕೆ ಸಿಗದ ಮಾನ್ಯತೆ ಇದಕ್ಕೆ ಸಿಕ್ಕಿದೆ.

ಚಲನಚಿತ್ರಗಳೆಂದರೆ ಮೂಗುಮುರಿಯುವ ಶಿವಸೇನೆ ವರಿಷ್ಠ ಬಾಳಾ ಠಾಕ್ರೆ ಈ ಚಿತ್ರಕ್ಕೆ ಶಭಾಶ್‌ಗಿರಿ ನೀಡಿದ್ದು ಸಾಮಾನ್ಯ ಸಂಗತಿಯೇನಲ್ಲ. ಚಕ್ ದೆ ಇಂಡಿಯಾ ಚಿತ್ರವನ್ನು ವೀಕ್ಷಿಸುವ ಸಲುವಾಗಿ ಸಾಮ್ನಾ ಪತ್ರಿಕೆ ಮತ್ತು ಮಾರ್ಮಿಕ್ ಮ್ಯಾಗಜಿನ್‌ನ ಎಲ್ಲ ಸಿಬ್ಬಂದಿಯನ್ನು ಠಾಕ್ರೆ ಕಳಿಸಲು ಯೋಜಿಸಿದ್ದಾರೆ.

ಚಲನಚಿತ್ರದಲ್ಲಿರುವ" ತಂಡ ಸ್ಫೂರ್ತಿ"ಯನ್ನು ಅನುಭವಿಸಿ ಸಿಬ್ಬಂದಿ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕೆನ್ನುವುದು ಠಾಕ್ರೆ ಉದ್ದೇಶ. ಸುದ್ದಿಪತ್ರಿಕೆಯ ಸಿಬ್ಬಂದಿ ಇದಕ್ಕಿಂತ ಹೆಚ್ಚು ಏನನ್ನೂ ಬಯಸಲಾರರು. ಏಕೆಂದರೆ 350 ಮಂದಿ ಇಡೀ ಸಿಬ್ಬಂದಿ ಚಿತ್ರವೀಕ್ಷಣೆಗೆ ಹೊರಟಿದ್ದಾರೆ.